ಉಡುಪಿ: ಆನ್ಲೈನ್ ಜಾಬ್ ನೀಡುವುದಾಗಿ ವಂಚನೆ
ಉಡುಪಿ, ಸೆ.10: ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ನಂಬಿಸಿ, ಆನ್ಲೈನ್ ಮೂಲಕ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾಗ್ಯಶ್ರೀ ಎಂಬವರ ಮೊಬೈಲ್ಗೆ ಅಪರಿಚಿತ ವ್ಯಕ್ತಿಗಳು ಸೆ.1ರಂದು ಕರೆ ಮಾಡಿ, ಟೆಲಿಗ್ರಾಮ್ ಎಪ್ಲಿಕೇಶನ್ನಲ್ಲಿ ಲಿಂಕ್ ಕಳುಹಿಸಿ, ಟ್ರೆಡಿಂಗ್ ಮಾಡುವುದಾಗಿ ತಿಳಿಸಿದರು. ಅದರಂತೆ ಒಟ್ಟು 1,47,239ರೂ. ಹಣವನ್ನು ಭಾಗಶ್ರೀ ಅವರಿಂದ ಆನ್ಲೈನ್ ಮೂಲಕ ಹಂತ ಹಂತವಾಗಿ ಪಡೆದು, ಉದ್ಯೋಗ ನೀಡದೇ, ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story