ಉಡುಪಿ: ಶಾಂತಿ ಭಂಗ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮಕ್ಕೆ ಮನವಿ
ಉಡುಪಿ, ಆ.4: ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಘಟನೆಯ ಕುರಿತು ಕಲ್ಪಿತ ಕತೆಗಳನ್ನು ಕಟ್ಟಿ ಅಪಪ್ರಚಾರದ ಮೂಲಕ ಸಮಾಜದ ಶಾಂತಿ ಭಂಗಗೊಳಿಸುತ್ತಿರುವ ವ್ಯಕ್ತಿ ಹಾಗೂ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಉಡುಪಿ ಸಹಬಾಳ್ವೆ ನಿಯೋಗ ಇಂದು ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿತು.
ರಾಜ್ಯ ಮಹಿಳಾ ಆಯೋಗ ಅಥವಾ ತತ್ಸಮಾನ ವಾದ ಸರಕಾರದ ಅಧಿಕೃತ ವಿಚಾರಣಾ ಸಮಿತಿಯನ್ನು ಉಡುಪಿಗೆ ಕಳು ಹಿಸಿ ಅಪಪ್ರಚಾರದಲ್ಲಿ ತೊಡಗಿರುವ ವರ ಸಹಿತ ಸಂಬಂಧಿಸಿದ ಸಕಲರ ವಿಚಾರಣೆ ನಡೆಸಿ ಅಂತಹ ವರದಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು ಎಂದು ನಿಯೋಗ ಮನವಿಯಲ್ಲಿ ಆಗ್ರಹಿಸಿದೆ.
ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಹಾಗೂ ಕಾಲೇಜಿನ ಆಡಳಿತ ಮಂಡಳಿ ಸೂಕ್ತ ವಿಚಾರಣೆ ನಡೆಸಿ ವಿವಾದ ಬಗೆಹರಿಸಿದ್ದರು. ಆದರೂ ಈ ವಿವಾದ ಸೃಷ್ಠಿಸಿದ ಮತೀಯವಾದಿ ಸಂಘಟನೆಗಳು ಹಾಗೂ ವ್ಯಕ್ತಿಗಳು ನಿರಂತರ ವಾಗಿ ಅವಾಸ್ತವಿಕ ಕಥನಗಳನ್ನು ಸಾರ್ವಜನಿಕ ಸಭೆಗಳ ಮೂಲಕ ಹರಡಿ, ಸಮಾಜದಲ್ಲಿ ವೈಷಮ್ಯ ಹೆಚ್ಚಿಸುವ ಯೋಜಿತ ತಂತ್ರ ಗಾರಿಕೆಯನ್ನು ಉದ್ದೇಶ ಪೂರ್ವಕವಾಗಿ ನಡೆಸುತ್ತಿದ್ದಾರೆ.
ವಿಶ್ವ ಹಿಂದು ಪರಿಷತ್ ಆಯೋಜಿಸಿದ ಸಭೆಯಲ್ಲಿ ಮಹಿಳೆಯರು ಶಸ್ತ್ರ ಹಿಡಿಯ ಬೇಕೆಂಬ ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ. ವಿವಾದಕ್ಕೆ ಸಂಬಂಧಿಸಿ ಮೂವರು ವಿದ್ಯಾರ್ಥಿನಿಯರ ಮೇಲೆ ಪೊಲೀಸ್ ಇಲಾಖೆಯ ಸ್ವಇಚ್ಛೆಯ ದೂರು ದಾಖಲಿಸಿದ್ದಾರೆ. ಆದರೆ ಕೆಲವರು ಆಧಾರ ರಹಿತ ಸುಳ್ಳು ಗಳನ್ನು ಹಬ್ಬಿಸುತ್ತಿದ್ದಾರೆ. ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಕದಡುವ ಈ ಯೋಜಿತ ತಂತ್ರಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ನಿಯೋಗ ಒತ್ತಾಯಿಸಿದೆ.
ಮನವಿಯನ್ನು ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ವೀಕರಿಸಿದರು. ನಿಯೋಗದಲ್ಲಿ ಸಹಬಾಳ್ವೆ ಪ್ರಧಾನ ಸಂಚಾಲಕ ಪ್ರೊ.ಫಣಿರಾಜ್, ಮುಖಂಡರಾದ ಯಾಸೀನ್ ಮಲ್ಪೆ, ಪ್ರಶಾಂತ್ ಜತ್ತನ್ನ, ಇದ್ರೀಸ್ ಹೂಡೆ, ಹುಸೇನ್ ಕೋಡಿಬೆಂಗ್ರೆ ಮೊದ ಲಾದವರು ಉಪಸ್ಥಿತರಿದ್ದರು.