ಉಡುಪಿ: ನಕಲಿ ಚಿನ್ನಾಭರಣ ಅಡವಿರಿಸಿ 20 ಲಕ್ಷ ರೂ. ವಂಚನೆ
ಉಡುಪಿ, ಸೆ.9: ಬ್ರಹ್ಮಗಿರಿಯಲ್ಲಿರುವ ಆದರ್ಶ ಗ್ರಾಹಕರ ವಿವಿದ್ದೋದ್ದೇಶ ಸಹಕಾರಿ ಸಂಘದಲ್ಲಿ ರಿಯಾಝ್ ಎಂಬವರು ಜು.17ರಿಂದ ಸೆ.2ರ ನಡುವೆ ಹಂತಹಂತವಾಗಿ ಒಟ್ಟು 527.8ಗ್ರಾಂ ನಕಲಿ ಚಿನ್ನವನ್ನು ಅಡವಿರಿಸಿ ಒಟ್ಟು 20.62 ಲಕ್ಷರೂ.ಗಳನ್ನು ಸಾಲವಾಗಿ ಪಡೆದು ವಂಚಿಸಿರುವುದಾಗಿ ಸಂಸ್ಥೆಯ ಕಾರ್ಯದರ್ಶಿ ಜಲೇಂದ್ರ ಕೋಟ್ಯಾನ್ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಪಾದಿತ ರಿಯಾಝ್ ಸೆ.5ರಂದು ತನ್ನ ಹೆಂಡತಿ ಹಾಗೂ ದಾವೂದ್ ಅಬೂಬಕ್ಕರ್ ಎಂಬವರೊಂದಿಗೆ ಕಾರಿನಲ್ಲಿ ಸೊಸೈಟಿಗೆ ಬಂದು ಎರಡು ನೆಕ್ಲೇಸ್ ಆಧಾರದಲ್ಲಿ ಸಾಲ ಕೇಳಿದಾಗ ಸಂಶಯಗೊಂಡ ಜಲೇಂದ್ರ ಕೋಟ್ಯಾನ್, ಸಂಘದ ಸರಾಫ್ರ ಮೂಲಕ ಆಭರಣವನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಗೊತ್ತಾಗಿತ್ತು. ಆಗ ಆಪಾದಿತ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಇದರಿಂದ ಸಂಶಯಗೊಂಡ ಅವರು, ಆತ ಹಿಂದೆ ಅಡವಿಟ್ಟ ಚಿನ್ನಾಭರಣ ಗಳನ್ನು ಸಹ ಪರೀಕ್ಷೆಗೊಳಪಡಿಸಿದಾಗ ಎಲ್ಲವೂ ನಕಲಿ ಎಂದು ಗೊತ್ತಾಗಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story