ಉಡುಪಿ: ಇ-ಸ್ಯಾಂಡ್ ಆ್ಯಪ್ ಮೂಲಕ ಮರಳು ಲಭ್ಯ
ಸಾಂದರ್ಭಿಕ ಚಿತ್ರ
ಉಡುಪಿ, ಡಿ.2: ಜಿಲ್ಲೆಯ ಕುಂದಾಪುರ ತಾಲೂಕಿನ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಸರ್ವೆ ನಂ 180, 157, 189ರಲ್ಲಿ 11.90 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 4ರಲ್ಲಿ ಹಾಗೂ ಜಪ್ತಿ, ಹಳ್ನಾಡು ಗ್ರಾಮದ ಸರ್ವೆ ನಂ. 174, 56ರ 5.70 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 6ರಲ್ಲಿ ಮರಳನ್ನು ಸಾರ್ವಜನಿಕರಿಗೆ ಹಾಗೂ ಸರಕಾರಿ ಕಾಮಗಾರಿಗಳಿಗೆ ಉಡುಪಿ ಇ-ಸ್ಯಾಂಡ್ ಆ್ಯಪ್ ಮೂಲಕ ಪೂರೈಸಲು ತೀರ್ಮಾನಿಸಲಾಗಿದೆ.
ಅದರಂತೆ ಉಡುಪಿ ಇ-ಸ್ಯಾಂಡ್ ಆ್ಯಪ್ ಮುಖಾಂತರ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರಿಗೆ/ ಅಭಿವೃದ್ಧಿ ಕಾಮಗಾರಿಗಳಿಗೆ ಮರಳನ್ನು ವಿತರಿಸುವ ಕಾರ್ಯ ಪ್ರಾರಂಭಗೊಂಡಿದ್ದು, ಮರಳು ಅವಶ್ಯಕತೆ ಇರುವವರು udupiesand.comನ್ನು ಅಂತರ್ಜಾಲದಲ್ಲಿ ಸಂದರ್ಶಿಸಿ ತಮ್ಮ ಹೆಸರು/ ವಾಸಸ್ಥಾನ ದಾಖಲಿಸಿ ಬೇಕಾಗಿರುವ ಮರಳಿನ ಪ್ರಮಾಣವನ್ನು ನಮೂದಿಸಿ ಆನ್ಲೈನ್ ಮುಖಾಂತರ ಹಣ ಪಾವತಿ ಮಾಡಬಹುದಾಗಿದೆ.
ಇದೊಂದು ಸರಳ ಹಾಗೂ ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಉಪಯೋಗ ಪಡೆಯಬ ಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ಮರಳು ಪೂರೈಸಲು ಅವಕಾಶವಿರುವುದಿಲ್ಲ ಎಂದು ಗಣಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ 1, 11 ಮತ್ತು 111 ಆರ್ಡರ್ ಸ್ಟ್ರೀಮ್ನ ಹಳ್ಳ/ ತೊರೆ ಮತ್ತು ಕೆರೆಗಳಲ್ಲಿರುವ ಮರಳು ನಿಕ್ಷೇಪ ಪ್ರದೇಶಗಳಿಂದ ತೆರವು ಗೊಳಿಸಿರುವ ಪ್ರತಿ ಮೆ.ಟನ್ ಮರಳಿನ ದರ 300ರೂ. (ಸಾಗಾಟ ಪರವಾನಿಗೆಯೊಂದಿಗೆ). ಲೋಡಿಂಗ್ ವೆಚ್ಚ ಮತ್ತು ಮರಳು ತೆರವುಗೊಳಿಸುವ ವೆಚ್ಚವನ್ನು ಮರಳು ಬೇಡಿಕೆದಾರರು ಭರಿಸ ಬೇಕಾಗುತ್ತದೆ.
ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ ಪ್ರದೇಶದಲ್ಲಿನ ಮರಳು ಬ್ಲಾಕ್ಗಳಿಂದ ತೆರವುಗೊಳಿಸಿದ ಮರಳಿನ ದರ ಪ್ರತಿ ಮೆ.ಟನ್ಗೆ (ಸಾಗಾಟ ಪರವಾನಿಗೆಯೊಂದಿಗೆ) 700 ರೂ.
ಮರಳಿನ ದರ: 3 ಟನ್ಗೆ ರೂ. 2,100, 6 ಟನ್ಗೆ ರೂ. 4,200, 8 ಟನ್ಗೆ ರೂ. 5,600 ಮತ್ತು 10 ಟನ್ಗೆ ರೂ. 7000. ಲೋಡಿಂಗ್ ವೆಚ್ಚ: 8ರಿಂದ 10 ಮೆ.ಟನ್ ವಾಹನಕ್ಕೆ ರೂ. 700, 4ರಿಂದ 8 ಮೆ.ಟನ್ ವಾಹನಕ್ಕೆ ರೂ.500 ಹಾಗೂ 1ರಿಂದ 4 ಮೆ.ಟನ್ವರೆಗೆ ರೂ. 300.
ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ದರ: ದೊಡ್ಡ ಲಾರಿಗೆ (8ರಿಂದ 10 ಮೆ.ಟನ್) 20 ಕಿ.ಮೀ.ವರೆಗೆ ಸಾಗಾಣಿಕೆ ದರ ರೂ. 3000, ನಂತರದ ಪ್ರತಿ ಕಿ.ಮೀ.ಗೆ ರೂ. 50 (20ಕಿ.ಮೀ. ಹೊರತುಪಡಿಸಿದ ನಂತರದ ಪ್ರತಿ ಕಿ.ಮೀ.ಗೆ ಹೋಗುವ ಮತ್ತು ಬರುವ ಕಿ.ಮೀ. ಒಳಗೊಂಡಂತೆ).
ಮಧ್ಯಮ ಗಾತ್ರದ ವಾಹನಗಳಿಗೆ (4ರಿಂದ 8ಮೆ.ಟನ್) 20 ಕಿ.ಮೀ.ವರೆಗೆ ಸಾಗಾಣಿಕೆ ದರ ರೂ.2000. ನಂತರದ ಪ್ರತಿ ಕಿ.ಮೀ.ಗೆ ರೂ. 40. (20 ಕಿ.ಮೀ.ಹೊರತು ಪಡಿಸಿದ ನಂತರದ ಪ್ರತಿ ಕಿ.ಮೀ.ಗೆ ಹೋಗುವ ಮತ್ತು ಬರುವ ಕಿ.ಮೀ. ಒಳಗೊಂಡಂತೆ) ಹಾಗೂ ಸಣ್ಣ ವಾಹನಗಳಿಗೆ (1ರಿಂದ 4 ಮೆ.ಟನ್ವರೆಗೆ) 20 ಕಿ.ಮೀ.ವರೆಗೆ ಸಾಗಾಣಿಕೆ ದರ ರೂ. 1500. ನಂತರದ ಪ್ರತಿ ಕಿ.ಮೀ.ಗೆ ರೂ. 35. (20ಕಿ.ಮೀ. ಹೊರತುಪಡಿಸಿದ ನಂತರದ ಪ್ರತಿ ಕಿ.ಮೀ.ಗೆ ಹೋಗುವ ಮತ್ತು ಬರುವ ಕಿ.ಮೀ. ಒಳಗೊಂಡಂತೆ) ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ದೂರವಾಣಿ ಸಂಖ್ಯೆ: 0820-2572333, ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 0820-2950088, ಸ್ಯಾಂಡ್ ಆ್ಯಪ್ ಕಾಂಟ್ಯಾಕ್ಟ್ ನಂ.:6366745888, 6364024555 ಹಾಗೂ 6366871888 ಅನ್ನು ಸಂಪರ್ಕಿಸಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.