ಉಡುಪಿ: ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ವಂಚನೆ
ಉಡುಪಿ, ಆ.15: ಹಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣವನ್ನು ಆನ್ಲೈನ್ ಮೂಲಕ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಷತಾ (26) ಎಂಬವರಿಗೆ ಆ.9ರಂದು ವಾಟ್ಸಾಪ್ನಲ್ಲಿ ಹಣವನ್ನು ದ್ವಿಗುಣಗೊಳಿಸಿ ನೀಡುವ ಬಗ್ಗೆ ಸಂದೇಶ ಬಂದಿದ್ದು ಅದನ್ನು ನಂಬಿದ ಅಕ್ಷತಾ ಹಂತ ಹಂತವಾಗಿ ಒಟ್ಟು 1,01,000ರೂ. ಹಣವನ್ನು ಆರೋಪಿತರು ನೀಡಿದ ಪೋನ್ ಪೇ ಐಡಿ ಹಾಗೂ ಖಾತೆಗೆ ವರ್ಗಾಯಿಸಿದ್ದರು. ಆದರೆ ಆರೋಪಿಗಳು ಹಣವನ್ನು ದ್ವಿಗುಣಗೊಳಿಸಿ ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story