ಉಡುಪಿ: ಕಿರುಚಿತ್ರ ನಿರ್ಮಾಣ ಸ್ಪರ್ಧೆ
ಉಡುಪಿ: ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-೨೦೨೪ರ ಕುರಿತು ಸಾರ್ವಜನಿಕರಲ್ಲಿ ವಿಶೇಷವಾಗಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಕಿರುಚಿತ್ರ ನಿರ್ಮಿಸುವ ಸ್ಪರ್ಧೆಯನ್ನು ಏರ್ಪಡಿ ಸಲಾಗಿದ್ದು, ಹೆಚ್ಚು ಆಕರ್ಷಕ ಮತ್ತು ವಿನೂತನವಾಗಿ ಚಿತ್ರಣಗೊಳ್ಳುವ ೩ ಕಿರುಚಿತ್ರಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು.
ಕಿರುಚಿತ್ರವು ಜಾಹಿರಾತು ಮಾದರಿಯಲಿದ್ದು, ೫೦ಸೆಕೆಂಡ್ಗಳಿಗಿಂತ ಕಡಿಮೆ ಇರಬೇಕು. ಕಾಪಿರೈಟ್ ಇರುವಂತಹ ಹಿನ್ನಲೆ ಸಂಗೀತ ಬಳಸಬಾರದು. ಚಿತ್ರದಲ್ಲಿ ಯಾವುದೇ ಹಿಂಸೆಯ ಚಿತ್ರಗಳಿರಬಾರದು ಮತ್ತು ಸಾಹಿತ್ಯವು ಸಕರಾತ್ಮಕವಾಗಿರ ಬೇಕು. ಕಿರು ಚಿತ್ರದಲ್ಲಿ ಶೀರ್ಷಿಕೆಗಾಗಿ ಹೆಚ್ಚು ಸಮಯ ವ್ಯರ್ಥ ಮಾಡದೆ ಕಿರುಚಿತ್ರ ಪ್ರದರ್ಶನವಾಗುವಾಗ ಕೆಳಗೆ ವಿವರ ನೀಡುವುದು ಹೆಚ್ಚು ಸೂಕ್ತವಾಗಿರುತ್ತದೆ.
ಆಯ್ಕೆಯಾದ ವಿಜೇತರಿಗೆ ಪ್ರಥಮ 10,000ರೂ., ದ್ವಿತೀಯ 7500 ರೂ. ಹಾಗೂ ತೃತೀಯ 5000 ರೂ.ನಗದು ಬಹುಮಾನ ನೀಡಲಾಗುವುದು.
ಕಿರುಚಿತ್ರವನ್ನು ನವೆಂಬರ್ ೮ರಂದು ಸಂಜೆ ೫ ಗಂಟೆಯೊಳಗೆ ಇ-ಮೇಲ್ - udupisveep2023@gmail.com-ನಲ್ಲಿ ಸಲ್ಲಿಸುವಂತೆ ಹಾಗೂ ಸಂಪರ್ಕ ಸಂಖ್ಯೆ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.