ಉಡುಪಿ| ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆಯ ಆಮಿಷ: ಆನ್‌ಲೈನ್‌ನಲ್ಲಿ 49 ಲಕ್ಷ ರೂ. ವಂಚನೆಗೊಳಗಾದ ಯುವಕ
ಉಡುಪಿ, ಜ.1: ಹೆಚ್ಚಿನ ಲಾಭಾಂಶದ ಆಸೆ ತೋರಿಸಿ, ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸುವ ಮೂಲಕ ಮೂಡುಬೆಳ್ಳೆಯ ಯುವಕನೋರ್ವ ಆನ್‌ಲೈನ್‌ನಲ್ಲಿ 49ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಮೂಡುಬೆಳ್ಳೆಯ ಫ್ರಾನ್ಸಿಸ್ ಕಾಸ್ತಲಿನೋ ಇವರ ಮಗನ ಮೊಬೈಲ್ ನಂಬರ್‌ನ್ನು ಯಾರೋ ಅಪರಿಚತರು ಸ್ಟಾಕ್‌ಮಾರ್ಕೆಟ್ ನೇವಿಗೇಷನ್ ಎಂಬ ವಾಟ್ಸಪ್ ಗ್ರೂಪ್‌ಗೆ ಸೇರಿಸಿದ್ದು, ಇದರ ಮೂಲಕ ಶೇರು ಮಾರುಕಟ್ಟೆ ಹಾಗೂ ಅದರಿಂದ ಸಿಗುವ ಲಾಭಾಂಶಗಳ ಬಗ್ಗೆ ಆಸೆ ತೋರಿಸಿ ಹಣವನ್ನು ಹೂಡಿಕೆ ಮಾಡುವಂತೆ ಅಮಿಷ ಒಡ್ಡಿದ್ದರು.
ಅವರ ಬಲೆಗೆ ಬಿದ್ದ ಯುವಕ, ಅಪರಿಚಿತರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಕಳೆದ ಡಿ.30ರಿಂದ ತಂದೆಯ 17 ಲಕ್ಷ ರೂ., ತಾಯಿಯ 10.50 ಲಕ್ಷ ರೂ. ತಮ್ಮದೇ ಖಾತೆಯಿಂದ 21.50 ಲಕ್ಷ ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದು, ಒಟ್ಟಾರೆಯಾಗಿ 49 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದರು.
ಆದರೆ ನಂತರ ಹೂಡಿಕೆ ಮಾಡಿದ ಹಣವನ್ನು ವಾಪಾಸು ಪಡೆಯಲು ಪ್ರಯತ್ನಿಸಿದಾಗ ಪುನಹ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಲಾಗಿತ್ತು. ಆಗ ಹೂಡಿಕೆ ಮಾಡಿದ ಹಣ ಹಾಗೂ ಲಾಭಾಂಶಕ್ಕಾಗಿ ಕೇಳಿದಾಗ ಹಣ ನೀಡದೇ ನಂಬಿಸಿ, ವಂಚಿಸಿ ದ್ದಾಗಿ, ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.