ಉಡುಪಿ: ಗಾಳಿ-ಮಳೆಗೆ ನಾಲ್ಕು ಮನೆಗಳಿಗೆ ಹಾನಿ
ಉಡುಪಿ, ಜು.21: ನಿರಂತರ ಗಾಳಿ-ಮಳೆಗೆ ಗುರುವಾರ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ಎರಡು ಲಕ್ಷ ರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಹೆಬ್ರಿ ತಾಲೂಕಿನ ಮುದ್ರಾಡಿಯಲ್ಲಿ ಪ್ರದೀಪ್ ಎಂಬವರ ಮನೆ ಗಾಳಿಯಿಂದ ಬಾಗಶ: ಹಾನಿಗೊಂಡಿದ್ದು, 20ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಿ ದ್ದರೆ, ಬೆಳ್ವೆ ಗ್ರಾಮದ ರತ್ನಾಬಾಯಿ ಎಂಬವರ ಮನೆಗಳೂ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿ 65,000ರೂ.ನಷ್ಟವಾಗಿದೆ.
ಕಾಪು ತಾಲೂಕಿನ 92 ಹೇರೂರು ಗ್ರಾಮದ ಪ್ರೇಮ ಎಂಬವರ ಮನೆಗೆ ಭಾಗಶ: ಹಾನಿಯಾಗಿ 15,000ರೂ. ಹಾಗೂ ಬೈಂದೂರು ತಾಲೂಕು ತೆಗ್ಗರ್ಸೆ ಗ್ರಾಮದ ದೇವದಾಸ ಎಂಬವರ ಮನೆ ಮೇಲೆ ಮರಬಿದ್ದು 80,000 ರೂ.ಗಳಷ್ಟು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಸರಾಸರಿ 26.1ಮಿ.ಮೀ.ನಷ್ಟು ಮಳೆಯಾಗಿದೆ. ಹೆಬ್ರಿಯಲ್ಲಿ 58.8ಮಿ.ಮೀ. ಮಳೆಯಾದರೆ, ಬೈಂದೂರಿನಲ್ಲಿ 51.5, ಕುಂದಾಪುರ ದಲ್ಲಿ 27.5, ಬ್ರಹ್ಮಾವರದಲ್ಲಿ 10.4, ಕಾರ್ಕಳದಲ್ಲಿ 9.1, ಉಡುಪಿಯಲ್ಲಿ 4.3 ಹಾಗೂ ಕಾಪುವಿನಲ್ಲಿ 2.1ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ರವಿವಾರ ಭಾರೀ ಮಳೆಯ ಆರೆಂಜ್ ಅಲರ್ಟ್‌ನ್ನು ಘೋಷಿಸಲಾಗಿದೆ. ಸೋಮವಾರ ಯೆಲ್ಲೊ ಅಲರ್ಟ್ ಇದ್ದು, ಆ ಬಳಿಕ ಸಾಧಾರಣ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ.25ರವರೆಗೆ ವೇಗದ ಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.