ಉಡುಪಿ: ದೇವಸ್ಥಾನದಲ್ಲಿ ಮಹಿಳೆಯ ಪರ್ಸ್ ಕಳವು
ಉಡುಪಿ, ಅ.22: ಉಡುಪಿ ರಥಬೀದಿಯಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮಹಿಳೆಯೊಬ್ಬರ ಪರ್ಸ್ ಕಳವಾಗಿರುವ ಘಟನೆ ಅ.22ರಂದು ಬೆಳಗ್ಗೆ ನಡೆದಿದೆ.
ಉಡುಪಿಯ ವೀಣಾ ಕೆ.(72) ಎಂಬವರು ಉಡುಪಿ ಶ್ರೀಕೃಷ್ಣ ಮಠದ ಪುತ್ತಿಗೆ ಮಠದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದು, ಬಳಿಕ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ತೆರಳಿದಾಗ ಅಲ್ಲಿ ಕಳ್ಳರು ಅವರ ಬ್ಯಾಗ್ನಲ್ಲಿದ್ದ ಪಸ್ನ್ನು ಕಳವು ಮಾಡಿರುವುದಾಗಿ ದೂರಲಾಗಿದೆ.
ಪರ್ಸ್ನಲ್ಲಿ ಒಂದು ಎಟಿಎಂ ಕಾರ್ಡ್, 48,000ರೂ. ಮೌಲ್ಯದ ಚಿನ್ನ ಹಾಗೂ 2,000ರೂ. ನಗದು ಇರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story