ಉದ್ಯಾವರ: ಯುಎಫ್‌ಸಿ ಮಾತುಕತೆ- 2023 ಬಿಡುಗಡೆ
ಉದ್ಯಾವರ, ಅ.24: ಸಂಸ್ಥೆಯೊಂದು 50ನೇ ವಾರ್ಷಿಕ ಸಭೆಯನ್ನು ನಡೆಸುತಿದ್ದೆ ಎಂದರೆ ಆ ಸಂಸ್ಥೆ ಆರೋಗ್ಯಪೂರ್ಣ ಬೆಳೆವಣಿಗೆಯಲ್ಲಿದೆ ಎಂದು ಅರ್ಥ. ಉದ್ಯಾವರ ಫ್ರೆಂಡ್ಸ್ ಸರ್ಕಲ್ ಅದನ್ನು ಸಾಧಿಸಿ ತೋರಿಸಿದೆ . ತನ್ನ ಚಟುವಟಿಗಳನ್ನು ದಾಖಲಿಸುವುದು ಅದು ಸಂಸ್ಥೆಯ ಜನಪರ ಕೆಲಸಗಳ ಗಟ್ಟಿತನಕ್ಕೆ ಸಾಕ್ಷಿ ಎಂದು ಮಾಜಿ ಅಧ್ಯಕ್ಷ ಯು.ಜಯಾನಂದ ಹೇಳಿದ್ದಾರೆ.
ಉದ್ಯಾವರದ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ 2022-2023ನೇ ಸಾಲಿನ ಕಾರ್ಯಕ್ರಮಗಳ ದಾಖಲೆ ಯುಎಫ್‌ಸಿ ಮಾತುಕತೆ- 2023ನ್ನು ಬಿಡುಗಡೆ ಮಾಡಿ ಮಾತನಾಡಿದರು.
ಈ ಸಂಸ್ಥೆಯ ಜನಪರ ಕೆಲಸ ಮುಂದಿನ ಪೀಳಿಗೆಗೆ ಒಂದು ಒಳ್ಳೆಯ ಮಾದರಿ. ಉದ್ಯಾವರ ಫ್ರೆಂಡ್ಸ್ ಸರ್ಕಲ್ ನಂತಹ ಜಾತ್ಯಾತೀತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ, ಶೈಕ್ಷಣಿಕ ಕ್ಷೇತ್ರದಲ್ಲೂ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡುತ್ತಾ ಬಂದಿದೆ. ಈ ಸಂಸ್ಥೆ ಇನ್ನಷ್ಟು ಕಾಲ ಬಾಳಿ ಅಶಕ್ತರಿಗೆ ಆಶಾಕಿರಣ ವಾಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಸಂಸ್ಥೆಗೆ ಈಗ 50ರ ಹರೆಯ. ಈ ಮುದ್ರಿತ ದಾಖಲೆಗಳನ್ನು ಕಳೆದ ಏಳು ವರ್ಷಗಳಿಂದ ಹೊರ ತರುತ್ತಿದ್ದೇವೆ. ಈ ದಾಖಲೆಗಳಿಗೆ ನಿರಂತರತೆ ಇದ್ದಾಗ ಮಾತ್ರ ಅದಕ್ಕೊಂದು ಮೌಲ್ಯ ಬರುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ರಿಯಾಝ್ ಪಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಶರತ್‌ಕುಮಾರ್, ಯು.ಪದ್ಮನಾಭ ಕಾಮತ್, ರಮೇಶ್‌ಕುಮಾರ್ ಯು., ಸ್ಥಾಪಕ ಕೋಶಾಧಿಕಾರಿ ಯು. ಅರುಣ್ ಕುಮಾರ್, ಸ್ಥಾಪಕ ಸದಸ್ಯ ರಫೀಕ್ ಯುಸೂಫ್, ಕೋಶಾಧಿಕಾರಿ ಗಿರೀಶ್ ಗುಡ್ಡೆಯಂಗಡಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ರಿಯಾಝ್ ಪಳ್ಳಿ ಸ್ವಾಗತಿಸಿ ಉಪಾಧ್ಯಕ್ಷ ಸೋಮಶೇಖರ ಸುರತ್ಕಲ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ತಿಲಕ್‌ರಾಜ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.