ಕೊರಗ ಸಮುದಾಯದ ಸಮಸ್ಯೆ ಬಗೆಹರಿಸಲು ಒಗ್ಗಟ್ಟು ಅಗತ್ಯ: ಸುಶೀಲಾ ನಾಡ
ಉಡುಪಿ, ಸೆ.16: ಕೊರಗ ಸಮುದಾಯದ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಲ್ಲರೂ ಒಟ್ಟಾಗಿ ಶ್ರಮ ವಹಿಸ ಬೇಕಾಗಿದೆ. ಶಿಕ್ಷಣ-ಸಂಘಟನೆ- ಹೋರಾಟದ ಬಗ್ಗೆ ಹೆಚ್ಚಿನ ಪ್ರಾಶಸ್ತಯ ನೀಡುವುದರ ಮೂಲಕ ಹಿರಿಯರು ಕಿರಿಯರು ಎಲ್ಲರೂ ಒಟ್ಟು ಸೇರಿ ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡುವ ಅಗತ್ಯವಿದೆ ಎಂದು ಸುಶೀಲಾ ನಾಡ ಹೇಳಿದ್ದಾರೆ.
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ರವಿವಾರ ಚರ್ಚಾ ಕಾರ್ಯದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಡೋಲು ಬಾರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘ್ಘಾಟಸಿದರು. ಸಮಗ್ರ ಗ್ರಾಮಿಣ ಆಶ್ರಮದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಾಡಿ, ಒಕ್ಕೂಟದ ಕೋಶಧಿಕಾರಿ ವಿನಯ ಅಡ್ವೆ ಮಾತನಾಡಿದರು.
ಕಾಪು ಸಂಘದ ಅಧ್ಯಕ್ಷ ಶೇಖರ ಎಡ್ಮೇರ್, ಸಮುದಾಯದ ಹಿರಿಯ ಮುಖಂಡರಾದ ಬೊಗ್ರ ಕೊಕ್ಕರ್ಣೆ ಉಪಸ್ಥಿತರಿದ್ದರು. ಸುನಂದಾ ಕಳ್ತೂರ್ ಇವರು ಸ್ವಾಗತಿಸಿದರು. ಸುಪ್ರಿಯಾ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು. ಪುತ್ರನ್ ಹೆಬ್ರಿ ವಂದಿಸಿದರು.
ವಾರ್ಷಿಕ ಮಹಾಸಭೆ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವಾರ್ಷಿಕ ಸಾಮಾನ್ಯ ಮಹಾಸಭೆ ಸೆ.14ರಂದು ನಡೆಯಿತು.
ಅಧ್ಯಕ್ಷರಾಗಿ ಸುಶೀಲಾ ನಾಡ, ಪ್ರಧಾನ ಕಾರ್ಯದರ್ಶಿಯಾಗಿ ಶೀಲಾ ಬಂಟ್ವಾಳ, ಕೋಶಾಧಿಕಾರಿಯಾಗಿ ವಿನಯ ಅಡ್ವೆ, ಉಪಾಧ್ಯಕ್ಷರುಗಳಾಗಿ ಐತಪ್ಪ ವರ್ಕಾಡಿ, ದಾಮೋದರ್, ಪವಿತ್ರಾ ಮಧುವನ, ಉಪಕಾರ್ಯದರ್ಶಿ ಗಳಾಗಿ ಶೀನಾ ಇನ್ನಾ, ಅಶ್ವಥ್ ಬಜಗೋಳಿ, ಶರಾವತಿ ಶಂಕರನಾರಾಯಣ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕರ್ತೆ ದೀಪಿಕಾ ಸ್ವಾಗತಿಸಿದರು. ವಿನಯ ಅಡ್ವೆ ವಾರ್ಷಿಕ ವರದಿ ವಾಚಿಸಿದರು. ಚುನಾವಣಾ ಅಧಿಕಾರಿಯಾಗಿ ಸುನಂದಾ ಕಳ್ತೂರ್ ಕಾರ್ಯನಿರ್ವಹಿಸಿದರು.