ಬಾತ್ರೂಮಿನಲ್ಲಿ ಬಿದ್ದು ಮಹಿಳೆ ಮೃತ್ಯು
ಕಾಪು, ಅ.21: ಮನೆಯ ಬಾತ್ರೂಮ್ನಲ್ಲಿ ಕಾಲು ಜಾರಿ ಬಿದ್ದ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಅ.20ರಂದು ಸಂಜೆ ವೇಳೆ ಉದ್ಯಾವರ ದಲ್ಲಿ ನಡೆದಿದೆ.
ಮೃತರನ್ನು ಉದ್ಯಾವರ ನಿವಾಸಿ ಲಲಿತಾ(61) ಎಂದು ಗುರುತಿಸಲಾಗಿದೆ. ಬಾತ್ ರೂಮಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಪ್ರಜ್ನಾಹೀನ ಸ್ಥಿತಿಯಲ್ಲಿದ್ದ ಇವರನ್ನು ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಲಲಿತಾ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story