ಪ್ರವಾದಿಯವರ ಜೀವನ, ಸಂದೇಶ ಎಲ್ಲಾ ಕಾಲಕ್ಕೂ ಅನ್ವಯ: ಡಾ.ದೇವಿಪ್ರಸಾದ್ ಶೆಟ್ಟಿ
ಯೋಗೇಶ್ ಮಾಸ್ಟರ್ ಅವರ 'ನನ್ನ ಅರಿವಿನ ಪ್ರವಾದಿ' ಪುಸ್ತಕ ಬಿಡುಗಡೆ
ಕಾಪು, ಅ.3: ವಿಶ್ವದಲ್ಲಿ ಹಲವಾರು ಮಹಾನ್ ಪುರುಷರು ಭೂಮಿಯಲ್ಲಿ ಜೀವಿಸಿ, ಉತ್ತಮವಾದ ವಿಚಾರಗಳನ್ನು ಬೋಧಿಸಿ ಅದರಂತೆ ಜೀವನ ಸಾಗಿಸಿದ್ದರು. ಅದರಂತೆಯೇ ಪ್ರವಾದಿ ಮುಹಮ್ಮದ್(ಸ.) ಪೈಗಂಬರ್ ಸಾರಿದ ಸಂದೇಶ ಮತ್ತು ಅವರ ಜೀವನ ವಿಶ್ವ ವ್ಯಾಪಿಯಾಗಿ ಎಲ್ಲಾ ಕಾಲಕ್ಕೂ ಮಾದರಿಯಾಗಿದೆ ಎಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಅವರು ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲವು ಹೊಟೇಲ್ ಕೆ.1ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಯೋಗೇಶ್ ಮಾಸ್ಟರ್ ಬರೆದ 'ನನ್ನ ಅರಿವಿನ ಪ್ರವಾದಿ' ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಮಾತಾಡಿ, ಪ್ರತಿಯೊಬ್ಬರೂ ಅವರವರ ಧರ್ಮ ಸಾರಿದ ಸಾರದಂತೆ ಜೀವಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಾಯೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇವೇಳೆ 'ಸಮಾನತೆಯ ಸಮಾಜದ ಶಿಲ್ಪಿ' ಎಂಬ ವಿಷಯದ ಮೇಲೆ ಶಿಕ್ಷಕರಿಗಾಗಿ ಆಯೋಜಿಸಿದ್ದ ಪ್ರಬಂದ ಸ್ಪರ್ಧೆಯ ಉತ್ತಮ ಬಹುಮಾನವನ್ನು ನೀಡಲಾಗುತ್ತಿದ್ದು, ಅದರ ಚಾರ್ಟ್ ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ಜಮೀಯ್ಯತುಲ್ ಫಲಾಹ್ ಕಾಪು ಘಟಕದ ಅಧ್ಯಕ್ಷ ಶಬಿ ಅಹ್ಮದ್ ಕಾಝಿ, ಉಡುಪಿ ಜಿಲ್ಲಾ ಮುಸ್ಲಿಮ್ ಘಟಕದ ಕಾಪು ತಾಲೂಕು ಅಧ್ಯಕ್ಷ ನಸೀರ್ ಅಹ್ಮದ್ ಉಪಸ್ಥಿತರಿದ್ದರು.