ಯುವಜನೋತ್ಸವ ರಾಜ್ಯಮಟ್ಟದ ಮ್ಯಾರಥಾನ್: ನಿಟ್ಟೆ ಕಾಲೇಜಿನ ನಂದಿನಿಗೆ ಪ್ರಥಮ ಸ್ಥಾನ
ಉಡುಪಿ, ಸೆ.22: ಪ್ರಸಕ್ತ ಸಾಲಿನ ಯುವಜನೋತ್ಸವದ ಅಂಗವಾಗಿ ರೆಡ್ ರಿಬ್ಬನ್ ರನ್ ಯೂತ್ ಫಾರ್ ಎಚ್‌ಐವಿ ಏಡ್ಸ್ ಕುರಿತು ಇಂದು ಬೆಂಗಳೂರಿ ನಲ್ಲಿ ನಡೆದ ರಾಜ್ಯ ಮಟ್ಟದ ಮ್ಯಾರಥಾನ್ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಜಿಲ್ಲೆಯ ನಿಟ್ಟೆ ಡಾ.ಎನ್.ಎಸ್.ಎ.ಎಮ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ನಂದಿನಿ ಪ್ರಥಮ ಸ್ಥಾನ ಪಡೆದಿದ್ದಾರೆ.
ನಂದಿನಿ ಅವರು ಪ್ರಶಸ್ತಿಯೊಂದಿಗೆ 25,000ರೂ. ನಗದು ಬಹುಮಾನ ವನ್ನೂ ಗೆದ್ದುಕೊಂಡಿದ್ದಾರೆ. ಇವರು ಅಕ್ಟೋಬರ್ 6ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ರೆಡ್ ರಿಬ್ಬನ್ ರನ್ ಯೂತ್ ಫಾರ್ ಹೆಚ್‌ಐವಿ ಏಡ್ಸ್ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story