ಉಳ್ಳಾಲ: ವಲಿಯುಲ್ಲಾಹಿ ಮುಹ್ಯಿದ್ದೀನ್ ಬಾವ, ತಾಜುಲ್ ಉಲಮಾ ಉಳ್ಳಾಲ ತಂಙಳ್ ಆಂಡ್ ನೇರ್ಚೆ
ಉಳ್ಳಾಲ: ವಲಿಯುಲ್ಲಾಹಿ ಮುಹಿಯುದ್ದೀನ್ ಬಾವ ಹಾಗೂ ತಾಜುಲ್ ಉಲಮಾ ತಂಙಳ್ ಧಾರ್ಮಿಕ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿದವರು, ತಾಜುಲ್ ಉಲಮಾ ಅವರು ಉಳ್ಲಾಲ ದಲ್ಲಿದ್ದ ಸಂದರ್ಭದಲ್ಲಿ ಧಾರ್ಮಿಕ ಶಿಕ್ಷಣ ಅಭಿವೃದ್ಧಿಗೆ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡಿದ್ದರು ಎಂದು ಸಯ್ಯಿದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲರಾದ ಅಹ್ಮದ್ ಕುಟ್ಟಿ ಸಖಾಫಿ ಹೇಳಿದರು.
ಅವರು ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ (402) ಮತ್ತು ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಸಮಿತಿ ವತಿಯಿಂದ ವಲಿಯುಲ್ಲಾಹಿ ಮುಹ್ಯಿದ್ದೀನ್ ಬಾವ ಹಾಗೂ ತಾಜುಲ್ ಉಲಮಾ ಉಳ್ಳಾಲ ತಂಙಳ್ ಅವರ ಹೆಸರಿನಲ್ಲಿ ಭಾನುವಾರ ದರ್ಗಾ ವೇದಿಕೆಯಲ್ಲಿ ನಡೆದ ಆಂಡ್ ನೇರ್ಚೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ, ಮುಂದಿನ ಅವಧಿಯಲ್ಲಿ 200 ಮಂದಿ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡುವ ಯೋಜನೆ ಹಾಕಲಾಗಿದೆ.ತಾಜುಲ್ ಉಲಮಾ ಬಹಳಷ್ಟು ಶ್ರಮವಹಿಸಿ ಮಾಡಿದ ಶೈಕ್ಷಣಿಕ ಕ್ಷೇಂದ್ರವನ್ನು ನಾವು ಅಭಿವೃದ್ಧಿ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಪಟ್ಟಾಂಭಿ ಉಸ್ತಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮ ದ ಪ್ರಯುಕ್ತ ವಲಿಯುಲ್ಲಾಹಿ ಮುಹಿಯುದ್ದೀನ್ ಬಾವ ಹಾಗೂ ತಾಜುಲ್ ಉಲಮಾ ಉಳ್ಳಾಲ ತಂಙಳ್ ಅವರ ಹೆಸರಿನಲ್ಲಿ ಮೌಲೂದ್ ಪಾರಾಯಣ ನಡೆಸಲಾಯಿತು. ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಇಬ್ರಾಹಿಂ ಸಅದಿ, ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ , ಮೌಲೂದ್ ಪಾರಾಯಣದ ನೇತೃತ್ವ ವಹಿಸಿದ್ದರು.
ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ, ಉಪಾಧ್ಯಕ್ಷರಾದ ಅಶ್ರಫ್ ರೈಟ್ ವೇ, ಹಸೈನಾರ್ ಕೋಟೆಪುರ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ಮುಕ್ಕಚೇರಿ, ಜತೆ ಕಾರ್ಯದರ್ಶಿಗಳಾದ ಇಸಾಕ್ ಮೇಲಂಗಡಿ, ಮುಸ್ತಫ ಮದನಿ ನಗರ, ಅಡಿಟರ್ ಫಾರೂಕ್ ಕಲ್ಲಾಪು ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.