ಭಟ್ಕಳ: ಅಂಜುಮನ್ ಪಿಯು ಕಾಲೇಜಿನಲ್ಲಿ 'ಅಂಜುಮನ್ ಎಕ್ಸ್ ಪ್ಲೋರಾ-2023' ಕಾರ್ಯಕ್ರಮ
ಭಟ್ಕಳ, ನ.23: ಇಲ್ಲಿನ ಅಂಜುಮನ್ ಪಿಯು ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭಾನ್ವೇಷಣೆ ಕಾರ್ಯಕ್ರಮ 'ಅಂಜುಮನ್ ಎಕ್ಸ್ ಪ್ಲೋರಾ-2022' ಗುರುವಾರ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಹಳೆ ವಿದ್ಯಾರ್ಥಿ, INIFD ಗ್ಲೋಬಲ್ ಇದರ ಮಾರ್ಕೆಟಿಂಗ್ ಮತ್ತು ಆಪರೇಷನ್ಸ್ ಮುಖ್ಯಸ್ಥ ಮುಸಾಬ್ ಅಹ್ಮದ್ ಅಬಿದಾ ಮಾತನಾಡಿ, ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಸಮರ್ಪಣೆ ಮತ್ತು ಸಮಯಪಾಲನೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಚಾರ್ಯ ಮುಹಮ್ಮದ್ ಯೂಸುಫ್ ಕೋಲಾ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಟ್ರೆಷರ್ ಹಂಟ್, ಮೆಮೊರಿ ಟೆಸ್ಟ್, ಪಿಕ್ ಆ್ಯಂಡ್ ಸ್ಪೀಕ್, ಟಗ್ ಆಫ್ ವಾರ್ ಟ್ವಿಸ್ಟ್ ಮತ್ತು ಟರ್ನ್, ಮಿಸ್ಟರ್ ಫಿಟ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಗಳಲ್ಲಿ ಸುಮಾರು 26 ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.
ಅಲಿ ಶಾಝ್ ಅರ್ಮಾರ್ ಕಿರಾಅತ್ ಪಠಿಸಿದರು. ಮುಹಮ್ಮದ್ ತಮ್ಶೀರ್ ಅನುವಾದಿಸಿದರು.
ಉಪ ಪ್ರಾಂಶುಪಾಲ ಅಬ್ದುಲ್ ರಹೀಮ್ ಖಾನ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಝಾಕಿರ್ ಹಮ್ದಾನ್ ಇತ್ತಲ್ ವಂದಿಸಿದರು. ಅಬ್ದುಲ್ ರಹ್ಮಾನ್ ಅರ್ಮಾರ್ ಮತ್ತು ಅಬ್ದುಲ್ ಹನ್ನಾನ್ ಅಸ್ಕೇರಿ ಕಾರ್ಯಕ್ರಮ ಸಂಯೋಜಿಸಿದರು.