“ಸಮಾನತೆಯ ಸಮಾಜದ ಶಿಲ್ಪಿ- ಪ್ರವಾದಿ ಮುಹಮ್ಮದ್(ಸ)” ಪ್ರಬಂಧ ಸ್ಪರ್ಧೆ
ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮಾದಿನಾಚರಣೆಯ ಅಂಗವಾಗಿ ಸೆ.28 ರಿಂದ ಅ.6 ರ ವರೆಗೆ ಆಯೋಜಿಸಿರುವ ಸೀರತ್ ಅಭಿಯಾನ-2023 ರ ಪ್ರಯುಕ್ತ “ಸಮಾನತೆಯ ಸಮಾಜದ ಶಿಲ್ಪಿ- ಪ್ರವಾದಿ ಮುಹಮ್ಮದ್(ಸ)” ಎಂಬ ವಿಷಯದಲ್ಲಿ ಉತ್ತರಕನ್ನಡ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸೆ.25ರ ಒಳಗೆ ಪ್ರಬಂಧವನ್ನು ಅಂಚೆ ಮೂಲಕ ಕಳುಹಿಸಿಕೊಡಬೇಕೆಂದು ಪ್ರಬಂಧ ಸ್ಪರ್ಧೆಯ ಸಂಚಾಲಕ ಎಂ.ಆರ್.ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧವು 500 ಪದಗಳಿಗೆ ಮೀರದಂತೆ ಇರತಕ್ಕದ್ದು. ವಿಷಯದ ಸ್ಪಷ್ಟತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ಇವರ ಜನ್ಮ, ಕುಟುಂಬ, ಇತಿಹಾಸ ಯಾವುದನ್ನೂ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ವಿಷಯ ಮತ್ತು ಭಾಷೆಯಲ್ಲಿ ಸ್ಪಷ್ಟತೆ ಇರತಕ್ಕದ್ದು. ಕೈಬರಹದಲ್ಲಿ ಬರೆದ ಪ್ರಬಂಧಗಳಿಗೆ ಆಧ್ಯತೆ ನೀಡಲಾಗುವುದು.
ಪ್ರಬಂಧ ಬರೆಯುವವರು ತಮ್ಮ ಇತ್ತಿಚೆನ ಭಾವಚಿತ್ರವನ್ನು ಕಳುಹಿಸತಕ್ಕದ್ದು. ವಿಜೇತರಿಗೆ ಪ್ರಥಮ ಬಹುಮಾನ ರೂ.5000, ದ್ವಿತೀಯ 3000 ಮತ್ತು ತೃತೀಯ 2000 ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು. ಅಲ್ಲದೆ ರೂ.500 ಗಳ 5 ಸಮಧಾನಕರ ಬಹುಮಾನಗಳನ್ನು ನೀಡಲಾಗುವುದು.
ಪ್ರಬಂಧಗಳು ತಲುಪುವ ವಿಳಾಸ: ಸಂಚಾಲಕರು, ಸೀರತ್ ಪ್ರಬಂಧ ಸ್ಪರ್ಧೆ-2023, ದಾವತ್ ಘರ್ ಸುಲ್ತಾನ್ ಸ್ಟ್ರೀಟ್ ಭಟ್ಕಳ-581320 ಕಳುಹಿಸುವುದು. ಹೆಚ್ಚಿನ ಮಾಹಿತಿಗಾಗಿ 9886455416 ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.