ಯೂಟ್ಯೂಬರ್‌ಗಳ ಗಮನ ಸೆಳದ ಭಟ್ಕಳದ ನ್ಯೂ ಶಮ್ಸ್ ಶಾಲೆಯ ವಿದ್ಯಾರ್ಥಿಗಳ ಉರ್ದು ದೇಶಭಕ್ತಿ ಗೀತೆ
ಎಂ.ಆರ್. ಮಾನ್ವಿ ಭಟ್ಕಳ
ಭಟ್ಕಳ: ಭಟ್ಕಳದ ನ್ಯೂ ಶಮ್ಸ್ ಶಾಲೆಯ ವಿದ್ಯಾರ್ಥಿಗಳು ಹಾಡಿರುವ "ಹಮ್ ಹೈ ಮಿಸಾಲಿ ನೌಜವಾನ್ ಹಮ್ ಅಜ್ಮತ್ ಇ ಹಿಂದೂಸ್ತಾನ್" ಎಂಬ ಉರ್ದು ದೇಶಭಕ್ತಿ ಗೀತೆ ಭಾರತದ ಸ್ವಾತಂತ್ರ್ಯ ದಿನಾಚರಣೆಯ ನೆನಪಿಗಾಗಿ ಆ.15ರಂದು ಬಿಡುಗಡೆಯಾಗಿದ್ದು, ಈ ಹಾಡು ದೇಶ, ವಿದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ.
ಭಟ್ಕಳದ ಆರ್‌ಎಸ್‌ಡಿಎಸ್ ಸ್ಟುಡಿಯೋದಲ್ಲಿ ರಿರ್ಕಾಡಿಂಗ್ ಮಾಡಿರುವ ಪತ್ರಕರ್ತ ಹಾಗೂ ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಮೌಲಾನ ಸಾಲಿಕ್ ನದ್ವಿ ಬರ್ಮಾವರ್ ರಚಿಸಿ, ಅಬ್ದುಲ್ ಹಾದಿ ರುಕ್ನುದ್ದೀನ್ ಹಾಡಿರುವ ಈ ಹಾಡು ದೇಶಭಕ್ತಿ ಮತ್ತು ಏಕತೆಯ ಸಾರವನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಕೇವಲ 2-3 ದಿನಗಳ ಅವಧಿಯಲ್ಲಿ, ವೀಡಿಯೊ ಪ್ರಪಂಚದಾದ್ಯಂತದ ವಿವಿಧ ಯೂಟ್ಯೂಬ್ ಚಾನೆಲ್‌ಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಸಂಗ್ರಹಿಸಿದೆ.
7-8 ಯೂಟ್ಯೂಬ್ ಚಾನಲ್‌ಗಳಿಂದ ವಿಮರ್ಶೆಗಳನ್ನು ಗಳಿಸಿದೆ, ಅನೇಕ ಬಳಕೆದಾರರು ವಿದ್ಯಾರ್ಥಿಗಳ ಸ್ಫೂರ್ತಿದಾಯಕ ನಿರೂಪಣೆಯ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಆರು ಪಾಕಿಸ್ತಾನಿ ಯೂಟ್ಯೂಬರ್‌ಗಳು ಈ ವಿದ್ಯಾರ್ಥಿಗಳ ಪ್ರತಿಭೆಗಳನ್ನು ವಿಮರ್ಶಿಸಿ ಹೊಗಳಿದ್ದಾರೆ.