ದಾಂಡೇಲಿ: ಪ್ರವಾಸಕ್ಕೆಂದು ಬಂದ ವಿದ್ಯಾರ್ಥಿಗಳ ಬಸ್ ಪಲ್ಟಿ; 45 ಮಂದಿಗೆ ಗಾಯ
ದಾಂಡೇಲಿ: ದಾಂಡೇಲಿಗೆ ಪ್ರವಾಸಕ್ಕೆಂದು ಬಂದಿದ್ದ ಶಾಲಾ ಮಕ್ಕಳಲ್ಲಿದ್ದ ಖಾಸಗಿ ಬಸ್ ಮಾರ್ಗದ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ರವಿವಾರ ನಡೆದಿದೆ.
ಗಣೇಶಗುಡಿಯಲ್ಲಿ ಜಲಕ್ರೀಡೆ ಮುಗಿಸಿಕೊಂಡು ದಾಂಡೇಲಿಗೆ ವಾಪಸ ಬರುತ್ತಿದ್ದಾಗ ಎದುರಿನಿಂದ ಬಂದ ಕಾರನ್ನು ತಪ್ಪಿಸಲು ಹೋದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಗಟಾರಿಗೆ ಉರುಳಿ ಬಿದ್ದ ಪರಿಣಾಮವಾಗಿ ಬಸ್ ನಲ್ಲಿ ಇದ್ದ 45 ಮಕ್ಕಳಿಗೆ ಗಾಯಗಳಾಗಿವೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸೇಂಟ್ ಆಂಥೋನಿ ಹೈಸ್ಕೂಲ್ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ಘಟನೆ ನಡೆಯುತ್ತಿದ್ದಂತೆ ಪಕ್ಕದಲ್ಲಿನ ರೆಸಾರ್ಟ್ ನವರು ಹಾಗೂ ಸ್ಥಳೀಯರು ಬಸ್ ನಲ್ಲಿ ಇದ್ದ ಮಕ್ಕಳನ್ನು ರಕ್ಷಿಸಿ ಆಂಬುಲೆನ್ಸ್ ಮೂಲಕ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಸ್ಥಳೀಯರಾದ ರಫೀಕ್ ಕುಟ್ಟಿ, ಇರ್ಷಾದ್ ಖಾನ್, ಅಶ್ಫಾಕ್ ನಾಯ್ಕ, ಮೆಹಬೂಬ್ ಮುಜಾವರ, ರಮೇಶ ನಾದರ ಬಸ್ ನಲ್ಲಿದ್ದ ಮಕ್ಕಳನ್ನು ರಕ್ಷಿಸುವಲ್ಲಿ ಸಹಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ರಾಮನಗರದ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.