ಶ್ರೀನಿವಾಸ ನಾಯ್ಕ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ
ಭಟ್ಕಳ: ಭಟ್ಕಳ ತಾಲೂಕು ಬಂದರ್ ಸರ್ಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಶ್ರೀನಿವಾಸ ನಾಯ್ಕ"ಪರಶುರಾಮ ಶುಕ್ಲ ಕೀ ಬಾಲ್ ಕಹಾನಿಯೋಂ ಕಾ ವಿಶ್ಲೇಷಣಾತ್ಮಕ ಅಧ್ಯಯನ್" ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ನೀಡಿದೆ.
ಡಾ. ಪ್ರಭಾ ಭಟ್ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧ ಮಂಡಿಸಲಾಗಿತ್ತು. ಶ್ರೀನಿವಾಸ ನಾಯ್ಕ ಅವರು ತಮ್ಮ ಶೈಕ್ಷಣಿಕ ವೃತ್ತಿಜೀವನದಲ್ಲಿ ಮಹತ್ತರ ಸಾಧನೆ ಮಾಡಿದ್ದು, ಹಿಂದಿ ಭಾಷೆಯ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Next Story