ಭಟ್ಕಳ: ನ್ಯೂ ಶಮ್ಸ್ ಸ್ಕೂಲ್ ವಾರ್ಷಿಕೋತ್ಸವ
ಭಟ್ಕಳ: ವಿದ್ಯಾರ್ಥಿ ಜೀವನ ವ್ಯಕ್ತಿಯ ಬದುಕಿನ ಮಹತ್ವದ ತಿರುವು ಆಗಿದ್ದು ವಿದ್ಯಾರ್ಥಿಗಳು ತಮ್ಮ ಬದುಕಿನ ಭವಿಷ್ಯ ಮತ್ತು ವೃತ್ತಿಜೀವನದ ಕುರಿತಂತೆ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಭಟ್ಕಳ್ ಮುಸ್ಲಿಮ್ ಜಮಾಅತ್ ರಿಯಾದ್ ಸೌದಿ ಅರೇಬಿಯಾ ಇದರ ಅಧ್ಯಕ್ಷ ಮುಹಮ್ಮದ್ ಅಮ್ಮಾರ್ ಕಾಝಿಯಾ ಹೇಳಿದರು.
ಅವರು ಶನಿವಾರ ಭಟ್ಕಳ ತಾಲೂಕಿನ ಹೆಬಳೆ ಗ್ರಾ.ಪಂ.ವ್ಯಾಪ್ತಿಯ ನ್ಯೂ ಶಮ್ಸ್ ಸ್ಕೂಲ್ ನಲ್ಲಿ ಜರುಗಿದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇಂದು ಪದವಿಗಳಿಗೆ ಕೊರತೆ ಇಲ್ಲ. ಆದರೆ ಯಾವ ಪದವಿ ಪಡೆದುಕೊಳ್ಳುತ್ತೀರೋ ಅದರಲ್ಲಿ ಶ್ರೇಷ್ಠತೆಯನ್ನು ಕಂಡು ಕೊಳ್ಳುವುದು ಅತಿ ಅವಶ್ಯಕ ಎಂದ ಅವರು, ನ್ಯೂ ಶಮ್ಸ್ ಶಾಲೆಯ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಅತ್ಯಂತ ಸಂತೋಷ ವಾಗುತ್ತಿದೆ. ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕತರ್ ನ ಕಂಪನಿಯೊಂದರ ಚಾರ್ಟೆಡ್ ಅಕೌಂಟೆಂಟ್ (CA) ಆಗಿರುವ ಫಯ್ಯಾಝ್ ಕೋಲಾ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸಮಯ ಪ್ರಜ್ಞೆ ಮತ್ತು ಸಮಯಪಾಲನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಮಾಅತುಲ್ ಮುಸ್ಲಿಮೀನ್ ರಿಯಾದ್ ಇದರ ಮಾಜಿ ಅಧ್ಯಕ್ಷ ಅಬ್ದುಲ್ ಅಲೀಮ್ ಕಾಝಿಯಾ, ನ್ಯೂ ಶಮ್ಸ್ ಸ್ಕೂಲ್ ಬೋರ್ಡ್‌ನ ಮಾಜಿ ಅಧ್ಯಕ್ಷ ಕಾದಿರ್ ಮೀರಾ ಪಟೇಲ್ ಮಾತನಾಡಿದರು.
ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಖ್ಯಾತ ಉದ್ಯಮಿ ಅನಿವಾಸಿ ಭಾರತೀಯ ಮುಹಮ್ಮದ್ ಯೂನೂಸ್ ಕಾಝಿಯಾ, ತರಬಿಯತ್ ಎಜ್ಯುಕೇಶನ್ ಸೂಸೈ ಟಿಯ ಸಂಸ್ಥಾಪಕ ಸದಸ್ಯ ಸೈಯ್ಯದ್ ಹಸನ್ ಬರ್ಮಾವರ್, ಜಮಾಅತೆ ಇಸ್ಲಾಹಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ, ಆಡಳಿತ ಮಂಡಳಿ ಸದಸ್ಯರಾದ ಸಲಾಹುದ್ದೀನ್ ಎಸ್,ಕೆ, ಹಾಫಿಝ್ ಅಬ್ದುಲ್ ಗನಿ ರುಕ್ನುದ್ದೀನ್, ಮೌಲಾನ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್, ಸ್ಕೂಲ್ ಬೋರ್ಡ್ ಉಪಾಧ್ಯಕ್ಷ ಸೈಯ್ಯದ್ ಇಸ್ಮಾಯಿಲ್ ಖುತುಬ್ ಬರ್ಮಾವರ್ ನದ್ವಿ, ಪ್ರಧಾನ ಕಾರ್ಯದರ್ಶಿ ಇದಾರ ತರಬಿಯತ್ ಇಕ್ವಾನ್ ಉಪಾಧ್ಯಕ್ಷ ಮೌಲಾನ ಝಿಯಾವುರ್ ರಹಮಾನ್ ನದ್ವಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಝಯ್ಯಾನ್ ಬಂಗಾಲಿಗೆ ಪ್ರತಿಷ್ಠಿತ “ನಜ್ಮೆ ಇಖ್ವಾನ್” ಚಿನ್ನದ ಪದಕ ಮತ್ತು ಪ್ರಶಸ್ತಿ
ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ನ ಎಸ್.ಎಸ್.ಎಲ್.ಸಿ ಯಲ್ಲಿ ಓದುತ್ತಿರುವ ವಿದ್ಯಾರ್ಥಿ ಗಳಿಗೆ ನೀಡಲ್ಪಡುವ ಪ್ರತಿಷ್ಟಿತ “ನಜ್ಮೆ ಇಖ್ವಾನ್- ಚಿನದ ಪದಕ ಮತ್ತು ಪ್ರಶಸ್ತಿಗೆ ಮುಹಮ್ಮದ್ ಝಯ್ಯನ್ ಬಂಗಾಲಿ ಬಾಜನರಾಗಿದ್ದು ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರದಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಝಯ್ಯಾನ್ ಶಾಲೆಯ ಪರಿಸರ, ಶಿಕ್ಷಕರ ಪ್ರೇರಣೆ, ಪಾಲಕರ ಮಾರ್ಗ ದರ್ಶನದಲ್ಲಿ ಇಂತಹ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರನಾಗಿದ್ದೇನೆ. ಇದಕ್ಕಾಗಿ ಸೃಷ್ಟಿಕರ್ತನಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು. ವಿದ್ಯಾರ್ಥಿಯ ತಂದೆ ಝಕರಿಯಾ ಬಂಗಾಲಿ ತಮ್ಮ ಮಗ ಶ್ರೇಷ್ಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಕ್ಕೆ ಶಾಲಾ ಶಿಕ್ಷಕರಿಗೆ, ಆಡಳಿತ ಮಂಡಳಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ತನ್ನ ಪುತ್ರನ ಉತ್ತಮ ಭವಿಷ್ಯಕ್ಕಾಗಿ ಹಾರೈಸಿದರು.