ಭಟ್ಕಳ : ಖಾಸಗಿ ಬಸ್ ಢಿಕ್ಕಿ; ಆಟೋ ಚಾಲಕನಿಗೆ ಗಂಭೀರ ಗಾಯ
ಭಟ್ಕಳ: ಶಂಶುದ್ದೀನ್ ವೃತ್ತದ ಬಳಿ ಖಾಸಗಿ ಬಸ್ ಮತ್ತು ಆಟೋ ನಡುವೆ ಢಿಕ್ಕಿ ಸಂಭವಿಸಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡ ಆಟೋ ರಿಕ್ಷಾ ಚಾಲಕನನ್ನು ಜಾಮಿಯಾಬಾದ್ ರಸ್ತೆಯ ಮಾಸ್ಟರ್ ಕಾಲೋನಿ ನಿವಾಸಿ ಮುಹಮ್ಮದ್ ಸುಹೇಲ್ (22) ಎಂದು ಗುರುತಿಸಲಾಗಿದೆ.
ಮೂವರು ಪ್ರಯಾಣಿಕರನ್ನು ಮದೀನಾ ಕಾಲೋನಿಯಿಂದ ಹಳೆ ಬಸ್ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದಾಗ ಪೆಟ್ರೋಲ್ ಪಂಪ್ ಬಳಿ ಯು-ಟರ್ನ್ ತೆಗೆದುಕೊಳ್ಳುವ ಸಂದರ್ಭ ಖಾಸಗಿ ಬಸ್ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಿಕ್ಷಾ ಚಾಲಕನ ತಲೆಗೆ ಗಂಭೀರ ಗಾಯವಾಗಿದೆ. ಅಪಘಾತದಲ್ಲಿ ಆಟೋ ಮುಂಭಾಗದ ಭಾಗವೂ ಜಖಂ ಗೊಂಡಿದೆ. ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story