ಹೊನ್ನಾವರ| ಧರ್ಮ ಮನುಷ್ಯನಲ್ಲಿ ಪ್ರೀತಿಯ ಗುಣ ಬೆಳೆಸುತ್ತದೆ, ಅಧರ್ಮ ಪರಸ್ಪರ ದ್ವೇಷಿಸುವಂತೆ ಮಾಡುತ್ತದೆ: ರಿಯಾಝ್ ಅಹ್ಮದ್ ರೋಣ
ಜಾಮಿಯಾ ಮಸೀದಿ ನೂರ್ ಮೊಹಲ್ಲಾ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ
ಹೊನ್ನಾವರ (ಉ.ಕ ಜಿಲ್ಲೆ): "ಧರ್ಮವು ಮನುಷ್ಯನಲ್ಲಿ ಪ್ರೀತಿಯ ಗುಣ ಬೆಳೆಸುತ್ತದೆ ಅದೇ ವೇಳೆ ಅಧರ್ಮವು ಪರಸ್ಪರ ದ್ವೇಷಿಸುವಂತೆ ಮಾಡುತ್ತದೆ, ನಾವು ಎಲ್ಲ ಮನುಷ್ಯರನ್ನು ಪ್ರೀತಿಸುವವರಾಗಬೇಕು, ಇತರರನ್ನು ದ್ವೇಷಿಸುವವರಿಗೆ ಎಂದೂ ಪ್ರೀತಿಸಿಗಲಾರದು. ನಾವು ದ್ವೇಷವನ್ನು ದ್ವೇಷಿಸಬೇಕೇ ಹೊರತು ದ್ವೇಷ ಹರಡುವರನ್ನಲ್ಲ" ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.
ಅವರು ಇತ್ತೀಚಿಗೆ ಸ್ಥಳೀಯ ಜಾಮಿಯಾ ಮಸೀದಿ ನೂರ್ ಮೊಹಲ್ಲಾ ವತಿಯಿಂದ ಹಮ್ಮಿಕೊಂಡಂತಹ ಸೌಹಾರ್ದ ಇಫ್ತಾರ್ ಕೂಟವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಹೊನ್ನಾವರ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ ಕಿಣ್ಣಿ ಮಾತನಾಡಿ "ಯಾವ ಧರ್ಮವೂ ಕೂಡಾ ಕೆಟ್ಟ ಕಾರ್ಯವನ್ನು ಮಾಡಲು ಹೇಳುವುದಿಲ್ಲ. ಎಲ್ಲ ಧರ್ಮಗಳು ಸನ್ಮಾರ್ಗದ ಹಾದಿಯನ್ನೇ ತೋರಿಸುತ್ತವೆ, ಸರ್ವ ಧರ್ಮಗಳ ಸಾರ ಎಲ್ಲರಿಗೂ ತಲುಪುವಂತಾಗಬೇಕು" ಎಂದು ಹೇಳಿದರು.
ಉಪನ್ಯಾಸಕ ಅಬ್ದುರ್ರವೂಫ್ ಸವಣೂರ್ ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.
ಈ ಸಂದರ್ಭ ಜಾಮಿಯಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಖಾದಿರ್ ಅಹ್ಮದ್ ಜಿ, ಜಮಾಅತೆ ಇಸ್ಲಾಮೀ ಹಿಂದ್ ಭಟ್ಕಳ ಸ್ಥಾನೀಯ ಅಧ್ಯಕ್ಷ, ಮೌಲಾನಾ ಝುಬೇರ್ ಅಹ್ಮದ್ ನದ್ವಿ, ಮೌಲಾನಾ ಝಿಯಾವುರ್ರಹ್ಮಾನ್ ನದ್ವಿ ಮುಂತಾದವರು ಉಪಸ್ಥಿತರಿದ್ದರು.