ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ: ಡಾ. ದಿನೇಶ್ ಗಾಂವ್ಕರ್
ಭಟ್ಕಳ: 2024- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮ ವನ್ನು ವಿದ್ಯಾರ್ಥಿಗಳು ಸುಂದರವಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ದಿನೇಶ್ ಗಾಂವ್ಕರ್ ಆಡಳಿತಾಧಿಕಾರಿಗಳು ಮತ್ತು ಪ್ರಾಂಶುಪಾಲರು, ಆರ್.ಎನ್.ಎಸ್ ಮುರ್ಡೇಶ್ವರ ಶಿಕ್ಷಣ ಸಂಸ್ಥೆಗಳು, ಇವರು ಪ್ರಾಸ್ತಾವಿಕ ಭಾಷಣ ಮಾಡಿ ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯವು ಎಲ್ಲಾ ಭಾಷೆಗಳಿಗೆ ಪ್ರೋತ್ಸಾಹ ನೀಡುತ್ತಾ ಗುಡ್ಡದ ಮೇಲಿನ ಸ್ವರ್ಗವಾಗಿ ಕಂಗೊಳಿಸುತ್ತಿದೆ ಎಂದು ಹೇಳಿದರು. ನಮ್ಮ ಉತ್ತರ ಕನ್ನಡವು ಅನೇಕ ಕನ್ನಡ ಸಾಹಿತಿಗಳ ತವರು ಜಿಲ್ಲೆ ಮತ್ತು ಚುಟುಕು ಬ್ರಹ್ಮ ದಿನಕರ ದೇಸಾಯಿಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಕಾಲೇಜು ಪ್ರಾಂಶುಪಾಲರಾದ ಡಾ. ಫಜ್ಲುರ್ ರೆಹಮಾನ್ ರವರು ಮಾತನಾಡಿ ಭಾಷೆಯು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಕನ್ನಡ ವೇದಿಕೆಯ ಸಂಚಾಲಕರಾದ ಡಾ. ಪದ್ಮಯ್ಯ ನಾಯ್ಕರವರು ಮಾತನಾಡಿ ನಮ್ಮ ಸಣ್ಣ ಪ್ರಯತ್ನವೂ ಸಹ ವ್ಯರ್ಥವಲ್ಲ ಮತ್ತು ಸದಾ ಪ್ರಯತ್ನಶೀಲರಾಗಬೇಕೆಂದು ಕರೆ ಕೊಟ್ಟರು. ಕನ್ನಡ ವೇದಿಕೆಯ ವಿದ್ಯಾರ್ಥಿ ಸಂಚಾಲಕರಾದ ಶ್ರೀ. ಸಾಬಿತ್ ಸಾಹೇಬ್ ರವರು ಸಹ ಮಾತನಾಡಿದರು. ಕಾರ್ಯದರ್ಶಿ ಭಾವನಾ ಸ್ವಾಗತಿಸಿ, ಸುನೀತಾರವರು ವಂದನಾರ್ಪಣೆ ಮಾಡಿದರು.
ಅನನ್ಯ ಮತ್ತು ಪ್ರಗತಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಎಂದು ಮಾಧ್ಯಮ ಸಂವಹನಾಧಿಕಾರಿ ಸುಬ್ರಮಣ್ಯ ಗಜಾನನ ಭಾಗವತ್ ತಿಳಿಸಿದ್ದಾರೆ.