ಭಟ್ಕಳ: ಸೀರತುನ್ನಬಿ ಕುರಿತಂತೆ ಮಕ್ಕಳಿಗಾಗಿ ಆನ್ ಲೈನ್ ಭಾಷಣ ಸ್ಪರ್ಧೆ
ಭಟ್ಕಳ: ಭಟ್ಕಳದ ‘ಫಿಕ್ರ್ ಓ ಖಬರ್’ ಸಂಸ್ಥೆಯ ವತಿಯಿಂದ ಸೀರತುನ್ನಬಿ ಕುರಿತು ಕಿರಿಯ ಮಕ್ಕಳಿಗಾಗಿ ಆನ್ ಲೈನ್ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ, ಇದರಲ್ಲಿ ವಿಜೇತರಿಗೆ 'ಕಿರಿಯ ಭಾಷಣಗಾರ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಈ ಸ್ಪರ್ಧೆಯು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರು ಮತ್ತು 7 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ಪ್ರತ್ಯೇಕ ಗುಂಪಿನಲ್ಲಿ ನಡೆಯಲಿದೆ. ಸೀರತುನ್ನಬಿ ಸಂಬಂಧಿತ ನಿರ್ದಿಷ್ಟ ವಿಷಯಗಳ ಮೇಲೆ ಕನ್ನಡ, ಉರ್ದು ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಮೂರು ನಿಮಿಷಗಳ ವೀಡಿಯೋ ಕ್ಲಿಪ್ ಮೂಲಕ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಸೆಪ್ಟಂಬರ್ 5ರಿಂದ ಪ್ರಾರಂಭವಾಗಿರುವ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕೊನೆಯ ದಿನ ಅ.15.
ಭಾಷಣ ಸ್ಪರ್ಧೆಗೆ 'ನಬಿಯವರ ನೈತಿಕತೆ - ಘಟನೆಗಳ ಬೆಳಕು', 'ವರಫಾನಾ ಲಕ ದಿಕ್ರಕ (ಆಯತ್) ಪ್ರೀತಿಯ ನಬಿಯವರ ಸ್ಥಾನಮಾನ', 'ನಬಿಯವರ ಮಕ್ಕಾ ಕಾಲ', 'ಫತಹ್ ಮಕ್ಕಾ ಘಟನೆ', 'ಹಿಝ್ರತ್ ನಬಿಯ ದೃಶ್ಯ', 'ಗಝ್ವತುಲ್ ರಸೂಲ್', 'ಮಕ್ಕಳೊಂದಿಗೆ ಪ್ರೀತಿಯ ನಬಿಯ ವರ್ತನೆ' ಮುಂತಾದ ವಿಷಯಗಳನ್ನು ಆಯ್ಕೆ ಮಾಡಲಾಗಿದೆ.
ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಿಡಿಯೋ ಕ್ಲಿಪ್ ಅನ್ನು http://links.fikrokhabar.com/ca951b00 ಗೆ ಹಂಚಬೇಕು. ಹೆಚ್ಚಿನ ಮಾಹಿತಿಗಾಗಿ 9916131111 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.