ಕಸ್ತೂರಿರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಕೇಂದ್ರ ಸರಕಾರ ನಕಾರ, ಪುನರ್ ಅಧ್ಯಯನಕ್ಕೆ ಸಮಿತಿ: ರವೀಂದ್ರ ನಾಯ್ಕ
ಶಿರಸಿ: ಪರಿಸರ ಸೂಕ್ಷ್ಮ ಪ್ರದೇಶ ನಿರ್ದಿಷ್ಟ ಪಡಿಸಿದ ಕಸ್ತೂರಿರಂಗನ್ ವರದಿಗೆ ರಾಜ್ಯ ಸರ್ಕಾರ ತಿರಸ್ಕರಿಸಿರುವ ಆಕ್ಷೇಪ ಣೆಗೆ ಕೇಂದ್ರ ಸರ್ಕಾರ ಸ್ವೀಕರಿಸದೇ, ರಾಜ್ಯ ಸರ್ಕಾರಕ್ಕೆ ಮನವೂಲಿಸುವ ತಂತ್ರವಾಗಿ ಪುನರ್ ಅಧ್ಯಯನಕ್ಕೆ ಸಮಿತಿ ರಚಿಸಿರುವ ಕ್ರಮವನ್ನ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಅವರು ಇಂದು ಕರ್ನಾಟಕ ಸರ್ಕಾರದ ಕಾನೂನು ಸಚಿವರಾದ ಎಚ್. ಕೆ. ಪಾಟೀಲ್ ಅವರನ್ನ ಬೆಂಗಳೂರಿನ ಗೃಹ ಕಛೇರಿ ಯಲ್ಲಿ ನಿಯೋಗದೊಂದಿಗೆ ಭೇಟಿಯಾಗಿ ಕೇಂದ್ರ ಸರ್ಕಾರದ ನೀತಿಯನ್ನು ಕಂಡಿಸಿ ಮೇಲಿನಂತೆ ಹೇಳಿದರು.
ರಾಜ್ಯದ 10 ಜಿಲ್ಲೆಯ 20,668 ಚ.ಕಿ.ಮೀ ವ್ಯಾಪ್ತಿಯಲ್ಲಿ ಅತೀ ಸೂಕ್ಷ್ಮ ಪ್ರದೇಶವೆಂದು ಕರಡು ಕಸ್ತೂರಿರಂಗನ್ ವರದಿ ಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ವರದಿಯ ಸಾರಾಂಶದಿಂದ ಉಂಟಾಗುವ ಪರಿಣಾಮದ ಕುರಿತು ಈಗಾಗಲೇ, ರಾಜ್ಯದಂತ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವರದಿ ತಿರಸ್ಕರಿಸಿತು ಎಂದರು.
ಆರನೇ ಕರಡು ಅಧಿಸೂಚನೆಯಲ್ಲಿ ಉಲ್ಲೇಖಿಸಿದ ಕ್ಷೇತ್ರದಲ್ಲಿನ 15,680 ಚ.ಕಿ.ಮೀ ಪ್ರದೇಶ ಈಗಾಗಲೇ ಅರಣ್ಯ ಸಂರಕ್ಷಣಾ ಕಾಯಿದೆ ಅಂತೆ ವಿವಿಧ ಯೋಜನೆಯಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಅಲ್ಲದೇ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ವಾಸಿಸುವ ಅರಣ್ಯವಾಸಿಗಳ ಜೀವನ ಅತಂತ್ರವಾಗುವದರಿಂದ ವರದಿ ತಿರಸ್ಕರಿಸಲು ತೀವ್ರ ಒತ್ತಡ ರಾಜ್ಯ ಸರ್ಕಾರದ ಮೇಲೆ ಹೇರಲಾಗಿತ್ತು ಎಂದು ಅವರು ಪ್ರಸ್ತಾಪಿಸಿದರು.
ಕೇಂದ್ರ ಪರಿಸರ ಸಚಿವಾಲಯ ರಚಿಸಿದ ಸಮಿತಿಯು ಪುನಃ ಸೂಕ್ಷ್ಮ ಪರಿಸರಕ್ಕೆ ಭೇಟಿ ನೀಡಿ ಸೂಕ್ಷ್ಮ ಪ್ರದೇಶ ಪರಿಶೀಲಿಸಿ, ಸರ್ಕಾರದ ಜನಪ್ರತಿನಿಧಿಯೊಂದಿಗೆ ಚರ್ಚಿಸಿ ಅಧ್ಯಯನನೊಂದಿಗೆ ರಾಜ್ಯ ಸರಕಾರದ ಮನವೂಲಿಸುವ ಕಾರ್ಯ ಜರುಗಲಿದೆ ಎಂದು ಅವರು ಹೇಳಿದರು.
ಡೆಲ್ಲಿ ಚಲೋ:
ಈಗಾಗಲೇ ಬೆಂಗಳೂರು ಚಲೋ ಕಾರ್ಯಕ್ರಮದಂದು ಕೇಂದ್ರ ಸರಕಾರದ ಮೇಲೆ ವರದಿ ತಿರಸ್ಕರಿಸಲು ಆಗ್ರಹಿಸಿ ಡೆಲ್ಲಿ ಚಲೋ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಅತೀ ಶೀಘ್ರದಲ್ಲಿ ಡೆಲ್ಲಿ ಚಲೋ ಕಾರ್ಯ ಕ್ರಮದ ರೂಪ ರೇಷೆ ಪ್ರಕಟಿಸಲಾಗುವದು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.