ಭಟ್ಕಳ: ಜನಸ್ಪಂದನಾ ಸಭೆ
ಭಟ್ಕಳ: ತಾಲೂಕಿನ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಇಂದು ಗುರುವಾರ ಭಟ್ಕಳದ ಸಚಿವರ ಕಚೇರಿಯಲ್ಲಿ ಸಚಿವ ಮಂಕಾಳ ಎಸ್. ವೈದ್ಯರು ಜನಸ್ಪಂದನಾ ಸಭೆ ನಡೆಸಿದರು. "ಸೇವೆಗೆ ಸಹಕಾರ" ಎಂಬ ದ್ಯೇಯ ವಾಕ್ಯದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸಾರ್ವಜನಿಕರು ಭಾಗವಹಿಸಿದರು.
ಸಾಮಾಜಿಕ ಕಲ್ಯಾಣ, ಉದ್ಯೋಗ, ಅನಾರೋಗ್ಯ, ಮನೆ ನಿರ್ಮಾಣ, ಶೌಚಾಲಯ ನಿರ್ಮಾಣ, ರಸ್ತೆ ಕಾಮಗಾರಿ, ಶಾಲೆ ಗಳ ದುರಸ್ಥಿ, ಅರಣ್ಯ ಅತಿಕ್ರಮಣ ಮುಂತಾದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮಂಡಿಸಿ ದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ತಕ್ಷಣ ಪರಿಹಾರ ಕೈಗೊಳ್ಳು ವಂತೆ ಸೂಚಿಸಲಾಯಿತು.
ಮೀನುಗಾರರ ಮನವಿ: ಕೆಲವು ಮೀನುಗಾರರು ಲೈಟ್ ಫಿಶಿಂಗ್ ಸಂಪೂರ್ಣ ನಿಷೇಧಿಸುವಂತೆ ಮನವಿ ಮಾಡಿದ್ದು, ಸಚಿವರು ಈ ಕುರಿತು ಪ್ರತಿಕ್ರಿಯಿಸುತ್ತಾ, "ಇಡೀ ದೇಶದ ಮಟ್ಟದಲ್ಲಿ ಲೈಟ್ ಫಿಶಿಂಗ್ ನಿಷೇಧಿತವಾಗಿದೆಯಾದರೆ ಮಾತ್ರ ಕರ್ನಾಟಕದಲ್ಲಿ ನಿಷೇಧಿಸಬಹುದಾಗಿದೆ," ಎಂದು ತಿಳಿಸಿದರು. ಕೇವಲ ಕರ್ನಾಟಕದಲ್ಲಿ ಮಾತ್ರ ನಿಷೇಧಿಸುವುದು ಸಾಧ್ಯ ವಿಲ್ಲ ಎಂದರು.
ಕಾರ್ಮಿಕನ ಸಮಸ್ಯೆಗೆ ಸ್ಪಂದನೆ: ಶಿರಾಲಿಯ ಖಾಸಗಿ ಕಾರ್ಖಾನೆಯೊಂದರಲ್ಲಿ ಕಳೆದ 17 ವರ್ಷಗಳಿಂದ ಕೆಲಸ ಮಾಡು ತ್ತಿದ್ದ ಕಾರ್ಮಿಕನನ್ನು ಕ್ಷುಲ್ಲಕ ಕಾರಣ ನೀಡಿ ಕೆಲಸದಿಂದ ತೆಗೆಯಲಾಗಿದ್ದು, ಸಂಬಳವೂ ಬಾಕಿ ಇಟ್ಟಿದ್ದ ಬಗ್ಗೆ ಕಾರ್ಮಿಕನೊಬ್ಬ ವಿಷಯವನ್ನು ಸಚಿವರ ಗಮನಕ್ಕೆ ತಂದಿದ್ದು, ಇದಕ್ಕೆ ಸಚಿವರು ಕೂಡಲೇ ಸ್ಸಪಂಧಿಸಿ ಫ್ಯಾಕ್ಟರಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಸಂಪರ್ಕಿಸಿ ಈ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಈ ಸಭೆಯಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ, ಯಾದವ್ ಮೊಗೇರ, ವೆಂಕಟರಮಣ ಮೊಗೇರ, ರಮೇಶ ನಾಯ್ಕ, ಗಣಪತಿ ನಾಯ್ಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.