ಅರಣ್ಯ ಇಲಾಖೆ ತಯಾರಿಸಿದ ದಾಖಲೆಗೆ ಕಾನೂನು ಮಾನ್ಯತೆ ಇಲ್ಲ: ರವಿಂದ್ರ ನಾಯ್ಕ
"ಅರಣ್ಯ ವಾಸಿಗಳ 50,000ಕ್ಕೂ ಹೆಚ್ಚು ಜಿ.ಪಿ.ಎಸ್ ನಕಾಶೆ ಅತಂತ್ರ"
ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಸಾಗುವಳಿಗೆ ಸಂಬಂಧಿಸಿದ ಜಿ.ಪಿ.ಎಸ್ ಸರ್ವೆಯ ನಕಾಶೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಜಿಲ್ಲಾದ್ಯಂತ ಅರಣ್ಯವಾಸಿಯ ಸುಮಾರು 50000 ಕ್ಕೂ ಮಿಕ್ಕಿ ಜಿ.ಪಿ.ಎಸ್ ದಾಖಲೆಗಳು ಅತಂತ್ರವಾಗಲಿದೆ ಎಂಬ ಆತಂಕದ ಅಂಶ ಬೆಳಕಿಗೆ ಬಂದಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು.
ಅವರು ಇಂದು ಶಿರಸಿ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಅರಣ್ಯ ಇಲಾಖೆಯವರು ಕಾನೂನು ಮಾನ್ಯತೆ ಇಲ್ಲದ ಸಾವಿರಾರು ಜಿ.ಪಿ.ಎಸ್ ನಕಾಶೆಯನ್ನು ಪ್ರದರ್ಶಿಸುತ್ತಾ ಮೇಲಿನಂತೆ ಹೇಳಿದರು.
ಅರಣ್ಯ ಹಕ್ಕು ಕಾಯಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ, ಸುತ್ತೋಲೆ ಮತ್ತು ಕಾನೂನಿನ ಮಾನ ದಂಡದ ಹೊರ ತಾಗಿ ಜಿ.ಪಿ.ಎಸ್ ನಕಾಶೆ ತಯಾರಿಸಿ ಅರಣ್ಯವಾಸಿಯ ಪ್ರಕರಣದ ಕಡತದಲ್ಲಿ ಸೇರಿಸಲಾಗಿದೆ. ವಲಯ ಅರಣ್ಯ ಅಧಿಕಾರಿ, ಕಂದಾಯ ಅಧಿಕಾರಿ, ಅರಣ್ಯ ಹಕ್ಕು ಸಮಿತಿ ದೃಡೀಕರಣವಿಲ್ಲದ ಜಿ.ಪಿ.ಎಸ್ ನಕಾಶೆಗೆ ಕಾನೂನು ಮಾನ್ಯತೆ ಇರುವುದಿಲ್ಲ ಎಂದು ಅವರು ಈ ಸಂದಂರ್ಭದಲ್ಲಿ ಹೇಳಿದರು.
ಮಂಜೂರಿ ಪ್ರಕ್ರಿಯೆಯಲ್ಲಿ ಅಪೂರ್ಣ ಜಿಪಿಎಸ್ ನಕಾಶೆ ಅರಣ್ಯ ಹಕ್ಕು ಸಮಿತಿಗಳ ಸ್ವೀಕಾರ ಅರ್ಹ ದಾಖಲೆ ಆಗಿದ್ದು ಇರುವುದಿಲ್ಲ. ಈ ಹಿನ್ನಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಮೇ 2010 ರಂದು ನೀಡಿದ ಆದೇಶವನ್ನ ಮತ್ತು ಕರ್ನಾಟಕ ಅರಣ್ಯ ಕಾಯಿದೆಯಲ್ಲಿನ ಅಂಶ ಉಲ್ಲಂಘಿಸಿರುವುದು ಸ್ಪಷ್ಟವಾಗಿದ್ದು ಇರುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಪ್ರಮುಖರಾದ ರಮೇಶ ಮರಾಠಿ, ಗಂಗೂಬಾಯಿ ರಜಪೂತ್, ನಾಗರಾಜ ದೇವಸ್ಥಲ್, ರಾಘವೇಂದ್ರ ಶೆಟ್ಟಿ, ನವೀನ್ ಜೈನ್, ಶಿವು ಮರಾಠಿ, ಗಣಪ ಗೌಡ, ಯಶೋದ, ಕಲ್ಪನಾ ಪಾವಸ್ಕರ, ಅಬ್ದುಲ್ ರಪೀಕ್ ಗಫಾರ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿನ ಅರಣ್ಯವಾಸಿಗಳ ಜಿ.ಪಿ.ಎಸ್ ಸರ್ವೆಯ ಮಾನ್ಯತೆಯಲ್ಲಿ ಕಾನೂನು ತೊಡಕು ಸಾಮೂಹಿಕವಾಗಿ ಉಂಟಾ ಗಲೂ ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದ್ದು ಇರುತ್ತದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.