ರಸ್ತೆ ಅಪಘಾತ: ಓರ್ವ ಮಹಿಳೆ ಸೇರಿ ಆರು ಮಂದಿಗೆ ಗಾಯ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿಶಾತ್ ಆಸ್ಪತ್ರೆಗೆ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಐದು ಮಂದಿ ಪುರುಷರು ಮತ್ತು ಒಬ್ಬ ಮಹಿಳೆ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಟ್ಯಾಂಪೋ ವಾಹನದ ಸ್ಟೇರಿಂಗ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಚಾಲಕನ ನಿಯಂತ್ರಣ ಕಳೆದು 4 ಬೈಕ್ ಸವಾರರಿಗೆ ಢಿಕ್ಕಿ ಹೊಡೆದಿದ್ದಾನೆ.
ಗಾಯಗೊಂಡವರನ್ನು ಶಿರೂರು ನಿವಾಸಿಗಳಾದ ಸಹೀಲ್ (23) ಮುಜ್ದಲಿಫಾ (18), ಭಟ್ಕಳದ ಮಹೇಶ್ ಮೊಗೇರ್ (32) ಮತ್ತು ಶೇಖರ್ ಮೊಗೇರ್ (33) ಹಾಗೂ ಹನಿಫಾಬಾದ್ ನಿವಾಸಿ ಮುಹಮ್ಮದ್ ನಯೀಮ್ ಕಮ್ರಿ ಎಂದು ಗುರುತಿಸಲಾಗಿದೆ. ಇವರಲ್ಲಿ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಯೋಗೇಶ್ ನಾಯಕ್ (28) ಗಂಭೀರ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Next Story