ಸೆ.5ರಂದು ರಾಜ್ಯಮಟ್ಟದ ಆನ್ ಲೈನ್ ಶಿಕ್ಷಕರ ದಿನಾಚರಣೆ; ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಉದ್ಘಾಟನೆ
ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್
ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (AIITA) ಕರ್ನಾಟಕವು ಸೆ.5ರಂದು ರಾತ್ರಿ 9ಗಂಟೆಗೆ ಝೂಮ್ ಮೂಲಕ ರಾಜ್ಯ ಮಟ್ಟದ ಆನ್ ಲೈನ್ ಶಿಕ್ಷಕರ ದಿನಾಚರಣೆ ಆಯೋಜಸಿದ್ದು ರಾಜ್ಯದ ಉನ್ನತ ಶಿಕ್ಷಣ ಸಚಿವ ಮತ್ತು ಅಧ್ಯಕ್ಷರು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಕರ್ನಾಟಕ ಸರ್ಕಾರ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಲಿದ್ದಾರೆ ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪನ್ಮೂಲ ವ್ಯಕ್ತಿಯಾಗಿ ದೇಹಲಿಯ ಮಹಿಳಾ ಶಿಕ್ಷಣ ಮತ್ತು ಸಬಲೀಕರಣ ಟ್ರಸ್ಟ್ (TWEET) ಇದರ ಅಧ್ಯಕ್ಷೆ ಮತ್ತು ಮನಾರುಲ್ ಉಲೂಮ್ ಇಂಟರ್ನ್ಯಾಷನಲ್ ಸ್ಕೂಲ್ ಜೆದ್ದಾ (Jeddah KSA) ಸ್ಥಾಪಕ ಪ್ರಾಂಶುಪಾಲೆ ರಹಮತ್ತುನ್ನಿಸ್ಸಾ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಇದರ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್ ವಹಿಸಿಕೊಳ್ಳಲಿದ್ದಾರೆ.
ಝೂಮ್ ಮೂಲಕ ನಡೆಯುವ ಈ ಶಿಕ್ಷಕರ ದಿನಾಚರಣೆಯ ನೇರಪ್ರಸಾರವನ್ನು www.YouTube.com/aiitakarnataka ಯೂಟ್ಯೂಬ್ ಚಾನಲ್ ಮೂಲಕ ಪ್ರಸಾರ ಮಾಡಲಾಗುವುದು. ರಾಜ್ಯದ ಎಲ್ಲ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಸೆ.5ರಂದು ರಾತ್ರಿ ಯೂಟ್ಯೂಬ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಐಟಾ ರಾಜ್ಯಾಧ್ಯಕ್ಷ ಮಾನ್ವಿ ಮನವಿ ಮಾಡಿಕೊಂಡಿದ್ದಾರೆ.