ಹಂಪಿ ಉತ್ಸವ ನಮಗೆ ನಾಡ ಹಬ್ಬ ಇದ್ದ ಹಾಗೆ : ಸಚಿವ ಝಮೀರ್ ಅಹ್ಮದ್
ಹಂಪಿ ಉತ್ಸವ 2025

ವಿಜಯನಗರ ( ಹೊಸಪೇಟೆ) : ಹಂಪಿ ಉತ್ಸವ ನಮಗೆ ನಾಡ ಹಬ್ಬದಂತೆ, ಈ ಹಂಪಿ ಉತ್ಸವವನ್ನು ಮನೆ ಮನೆಯಲ್ಲಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು.
ಹಂಪಿಯ ಎಂ.ಪಿ ಪ್ರಕಾಶ್ ವೇದಿಕೆಯಲ್ಲಿ ‘’ಹಂಪಿ ಉತ್ಸವ 2025’’ ಅನ್ನು ಶುಕ್ರವಾರ ಉದ್ಘಾಟಿಸಿ ಜೈ ಭೀಮ್ ಎಂಬ ಘೋಷಣೆಯ ಮೂಲಕ ತಮ್ಮ ಮಾತುಗಳನ್ನು ಆರಂಭಿಸಿದ ಅವರು, ಹಂಪಿ ಉತ್ಸವವನ್ನು ಮೊದಲು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಆಚರಿಸಲಾಗುತಿತ್ತು, ಆದರೆ ಕೋವಿಡ್ ನಿಂದ ಪೆಬ್ರುವರಿ ತಿಂಗಳಲ್ಲಿ ಆಚರಿಸುತ್ತಿದ್ದೇವೆ ಎಂದರು.
ಎರಡನೇ ಹಂಪಿ ಉತ್ಸವ ಮಾಡುತ್ತಿರುವುದು ನನ್ನ ಸೌಭಾಗ್ಯ, ಮೂರು ದಿನಗಳ ಕಾಲ ಈ ಉತ್ಸವ ನಡೆಯುತ್ತದೆ, ಹೋದ ವರ್ಷಕಿಂತ ಈ ವರ್ಷ ಇನ್ನೂ ಚೆನ್ನಾಗಿ ಮಾಡಬೇಕೆಂದು ಪ್ರಯತ್ನ ಮಾಡುತ್ತಿದ್ದೇವೆ, ನನ್ನನು ದೇವರು ಮುಂದಿನ ವರ್ಷದವರೆಗೆ ಜೀವಂತ ಇಟ್ಟರೆ ಉತ್ಸವವನ್ನು ಇನ್ನು ಚನ್ನಾಗಿ ಮಾಡುತ್ತೇನೆ ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ನಮ್ಮ ರಾಜ್ಯಕ್ಕೆ ಉತ್ಸವದ ಪರಂಪರೆಯನ್ನು ಪರಿಚಯಿಸಿದ ಕೀರ್ತಿ ಮಾಜಿ ಸಚಿವ ಎಂಪಿ ಪ್ರಕಾಶ್ ಅವರಿಗೆ ಸಲ್ಲುತ್ತದೆ, 1970 ರಲ್ಲಿ ಹಂಪಿಯಲ್ಲಿರುವ ಕಮಲ್ ಮಹಲ್ ನ ಮುಂಭಾಗದಲ್ಲಿ ಪ್ರಾರಂಭವಾದ ಸಣ್ಣ ಕಾರ್ಯಕ್ರಮವು ಮುಂದೆ 1977 ರಲ್ಲಿ ಹಂಪಿ ಉತ್ಸವ ಆಗಿ ಪರಿವರ್ತನೆ ಆಯಿತು. ಇದಕ್ಕೆ ಕಾರಣ ಎಂಪಿ ಪ್ರಕಾಶ್ ಅವರು ಎಂದು ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೆನೆದರು.
ಹೊಸಪೇಟೆ ಶಾಸಕ ಹೆಚ್.ಆರ್ ಗವಿಯಪ್ಪ ಮಾತನಾಡಿ, ಮಾಜಿ ಸಚಿವ ಎಂ.ಪಿ ಪ್ರಕಾಶ್ ಅವರಿಂದ ಪ್ರಾರಂಭವಾದ ಈ ಉತ್ಸವ ಎಂದು ಕೂಡ ನಿಂತಿಲ್ಲ, ನಾನು ಈ ಉತ್ಸವವನ್ನು 1992 ರಿಂದ ನೋಡುತ್ತಿದ್ದೇನೆ. ಆಗಿನ ಉತ್ಸವಕ್ಕೂ ಈಗಿನ ಉತ್ಸವಕ್ಕೂ ಅಜಗಜಾಂತರ ವತ್ಯಾಸವಿದೆ. ಇದಕೆಲ್ಲಾ ಉಸ್ತುವಾರಿ ಸಚಿವರೇ ಕಾರಣ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ ಮತ್ತು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಧನ್ಯವಾದಗಳು ಎಂದರು.
ಕಾರ್ಯಕ್ರಮದ ನಂತರ ವಿವಿಧ ಕಲಾ ತಂಡ ಗಳಿಂದ ಸಾಂಸೃತಿಕ ಕಾರ್ಯಕ್ರಮಗಳು ಜರುಗಿದವು,
ಈ ಸಂದರ್ಭದಲ್ಲಿ ಶಾಸಕರುಗಳಾದ ಹೆಚ್. ಆರ್. ಗವಿಯಪ್ಪ, ಲತಾ ಮಲ್ಲಿಕಾರ್ಜುನ್, ನೇಮರಾಜ್ ನಾಯಕ್, ಎನ್.ಟಿ ಶ್ರೀನಿವಾಸ, ಕೊಪ್ಪಳದ ಸಂಸದ ರಾಜಶೇಖರ್ ಹಿಟ್ನಾಳ್, ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್, ಎಸ್ ಪಿ ಶ್ರೀಹರಿ ಬಾಬು, ಜಿಪಂ ಸಿಇಒ ಅಕ್ರಮ್ ಪ್ರಕಾಶ್, ಮತ್ತು ರಾಜವಂಶಸ್ಥರಾದ ಕೃಷ್ಣದೇವರಾಯ, ದಯಾನಂದ ಪುರಿ ಜಗನಾಥ ಸ್ವಾಮೀಜಿ ಹೂಡ ಅಧ್ಯಕ್ಷ ಹೆಚ್ ಏನ್ ಇಮಾಮ್ ನಿಯಾಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕೆಲವರು ನಾನೇ ಕೃಷ್ಣದೇವರಾಯ ನಾನು ಕೃಷ್ಣದೇವರಾಯರ ಪುನರ್ಜನ್ಮ ಎನ್ನುತಿದ್ದರು, ಆದರೆ ಝಮೀರ್ ಅಣ್ಣ ಏನನ್ನು ಹೇಳುವುದಿಲ್ಲ, ಆದರೆ ಉತ್ಸವ ಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಟೀಕಿಸಿದರು.