ಹೊಸಪೇಟೆ | ಹಳೆಯ ವೈಷಮ್ಯದಿಂದ ಯುವಕನ ಕೊಲೆ

ಸಾಂದರ್ಭಿಕ ಚಿತ್ರ
ಹೊಸಪೇಟೆ: ಹಳೆಯ ವೈಷಮ್ಯದಿಂದ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ಹೊಸಪೇಟೆ ನಗರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ನಾಲ್ಕನೇ ವಾರ್ಡ್ ನ 4ನೇ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಹೊನ್ನೂರು ವಲಿ ಸ್ವಾಮಿ (30) ಎಂದು ಗುರುತಿಸಲಾಗಿದೆ. ಕಾಳಿ ಅಲಿಯಾಸ್ ಹುಚ್ಚ ಕಾಳಿ (36) ಕೊಲೆ ಆರೋಪಿ.
ಮೂಲತಃ ಹೊಸಪೇಟೆಯ ನಿವಾಸಿಯಾಗಿರುವ ಹೊನ್ನೂರು ವಲಿ ಸ್ವಾಮಿ ಕಳೆದ ಐದು ವರ್ಷದಿಂದ ದಾವಣಗೆರೆಯಲ್ಲಿ ವಾಸವಾಗಿದ್ದರು. ಬುಧವಾರ ಜಂಬುನಾಥ ಸ್ವಾಮಿ ಜಾತ್ರೆಗೆಂದು ಹೊಸಪೇಟೆಗೆ ಬಂದಿದ್ದರು. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವಲಿ ಸ್ವಾಮಿ ಬರುವುದನ್ನು ಕಾದು ಕುಳಿತಿದ್ದ ಕಾಳಿ ಆತನನ್ನು ಕೊಲೆ ಮಾಡಿದ್ದಾನೆ.
ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್.ಶ್ರೀಹರಿಬಾಬು ಈ ಕುರಿತು ಪ್ರತಿಕ್ರಿಯಿಸಿ, ಪಟ್ಟಣ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ದೂರು ದಾಖಲಾಗಿದೆ. ಆರೋಪಿಯ ಪತ್ತೆಗೆ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು.
Next Story