ಹಂಪಿಯಲ್ಲಿ ಶಾಂತಿಗಾಗಿ ಪಾರಂಪರಿಕ ನಡಿಗೆ
ಹೊಸಪೇಟೆ, ಸೆ.26: ವಿಶ್ವಪ್ರಸಿದ್ಧ ಐತಿಹಾಸಿಕ ಹಂಪಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಸೆ.26ರಂದು ಶಾಂತಿಗಾಗಿ ಪಾರಂಪರಿಕ ನಡಿಗೆ ಕಾರ್ಯಕ್ರಮ ನಡೆಯಿತು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಬೆಳಗ್ಗೆ ಹಂಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎದುರು ಬಸವಣ್ಣ ಪ್ರದೇಶದಿಂದ ಮಾತಂಗ ಪರ್ವತ, ಅಚ್ಯುತ್ತರಾಯ ದೇವಸ್ಥಾನ, ಅಚ್ಯುತರಾಯ ಬಜಾರ್, ಕೋದಂಡರಾಮ ದೇವಸ್ಥಾನ, ತುಂಗಭದ್ರ ನದಿವರೆಗೆ ಶಾಂತಿಗಾಗಿ ಪಾರಂಪರಿಕ ನಡಿಗೆ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ಹೆಜ್ಜೆ ಹಾಕಿದರು.
ಅಪಾರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ವಿವೇಕಾನಂದ ಪಿ., ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಪ್ರಭುಲಿಂಗ ಎಸ್ ತಳಕಲ್, ಕೆಎಸ್ ಟಿಡಿಸಿ ಹೋಟೆಲ್ ವ್ಯವಸ್ಥಾಪಕ ಸುನೀಲ್ ಕುಮಾರ್, ಪ್ರವಾಸಿ ಮಾರ್ಗದರ್ಶಿಗಳಾದ ವಿರುಪಾಕ್ಷಿ ವಿ. ಹಂಪಿ, ಪ್ರವಾಸಿ ಮಿತ್ರರು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಿಬ್ಬಂದಿ, ಹಂಪಿ ಗ್ರಾಮ ಪಂಚಾಯತ್ ಸಿಬ್ಬಂದಿ ಭಾಗವಹಿಸಿದ್ದರು.
Next Story