ಹೊಸಪೇಟೆ: ಭಾರೀ ಮಳೆಗೆ ಮನೆಗಳಿಗೆ ನುಗ್ಗಿದ ಚರಂಡಿ ನೀರು
ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು
ಹೊಸಪೇಟೆ: ನಗರದಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ಥವ್ಯಸ್ಥಗೊಂಡಿದೆ. ಭಾರೀ ಮಳೆಯಿಂದಾಗಿ ಚರಂಡಿ ನೀರು ಮನೆಗಳಿಗೆ ನುಗಿದ್ದು, ಜನರು ಪರದಾಡುವಂತಾಗಿದೆ.
ನಗರದ ಇಳಿಜಾರು ಪ್ರದೇಶಗಳಾದ ಪಟೇಲ್ ನಗರ ಮತ್ತು ರಾಣಿ ಪೇಟೆ ಮತ್ತು ಜಿ.ಟಿ.ಕಾಪೌಂಡ್ ನಲ್ಲಿ ಚರಂಡಿ ಮಿಶ್ರಿತ ಮಳೆ ನೀರು ಮನೆಗಳನ್ನು ಹೊಕ್ಕಿವೆ. ಇಲ್ಲಿನ ನಿವಾಸಿಗಳು ಮಳೆ ನೀರನ್ನು ಮನೆಯಿಂದ ಹೊರಕ್ಕೆ ಹಾಕಲು ಹರಸಾಹಸ ಪಡುತ್ತಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ರಾಜಕಾಲುವೆ ಮಳೆಗೆ ಮುಂಚೆಯೇ ಸ್ವಚ್ಛ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ಅದನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದರಿಂದ ಈ ಸಮಸ್ಯೆ ಎದುರಾಗಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Next Story