ವಿಜಯನಗರ | ಸಾಲಗಾರರ ಕಿರುಕುಳ ಆರೋಪ : ನಾಲ್ವರು ಆತ್ಮಹತ್ಯೆಗೆ ಯತ್ನ, ಓರ್ವ ಮೃತ್ಯು

ವಿಜಯನಗರ | ಸಾಲಗಾರರ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ನಾಲ್ಕು ಜನ ಆತ್ಮಹತ್ಯೆಗೆ ಯತ್ನಿಸಿ, ಓರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಸರಸ್ವತಿ ದೇಗುಲ ಬಳಿ ನಡೆದಿದೆ.
ಚಂದ್ರಯ್ಯ (43) ಮೃತಪಟ್ಟಿದ್ದು, ಸೌಮ್ಯ (35) ಭವಾನಿ (12) ಶಿವಕುಮಾರ್ (8) ಮೂವರು ಪಾರಾಗಿದ್ದಾರೆ ಎನ್ನಲಾಗಿದೆ.
ಕೊಟ್ಟೂರು ತಾಲೂಕಿನ ಗೊಲ್ಲರಹಳ್ಳಿ ನಿವಾಸಿಗಳು ಎಂದು ಗುರುತಿಸಲಾಗಿದೆ.
ಸಾಲಗಾರರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story