ವಿಜಯನಗರ: ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನಾ ರ್ಯಾಲಿ
ವಿಜಯನಗರ: ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಉತ್ತರ ಪ್ರದೇಶದ ಯತಿ ನರಸಿಂಗಾನಂದ ಸರಸ್ವತಿ ಹಾಗೂ ರಾಮಗಿರಿ ಸ್ವಾಮಿ ಹೇಳಿಕೆಯನ್ನು ಖಂಡಿಸಿ ಹೊಸಪೇಟೆಯಲ್ಲಿಂದು ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.
ಮೀಲಾದ್ ಕಮಿಟಿಯ ನೇತೃತ್ವದಲ್ಲಿ ಇಂದು ಬೆಳಗ್ಗೆ ರಸ್ತೆಗಿಳಿದ ಸಾವಿರಾರು ಮುಸ್ಲಿಮರು ನರಸಿಂಗಾನಂದ ಸರಸ್ವತಿ ಹಾಗೂ ರಾಮಗಿರಿ ಸ್ವಾಮಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಸ್ಥಳೀಯ ಮಸೀದಿಯ ಮುಖ್ಯ ಗುರುಗಳಾದ ಅಬೂಬಕರ್ ಸಿದ್ದೀಕ್ ಸಖಾಫಿ ಸಹಿತ ಹೊಸಪೇಟೆ ನಗರದ ಎಲ್ಲಾ ಉಲಮಾ ನಾಯಕರು ಭಾಗವಹಿಸಿದ್ದರು.
ಮೀಲಾದ್ ಕಮಿಟಿಯ ಅಧ್ಯಕ್ಷ ಬಡಾವಲಿ, ಸೈಯದ್ ಖಾದರ್ ರಿಫಾಯಿ, ಮುಹಮ್ಮದ್ ಇಮಾಮ್, ಅಡ್ವಕೇಟ್ ಸದ್ದಾಂ ಸೇರಿದಂತೆ ಸಾವಿರಾರು ಮಂದಿ ರ್ಯಾಲಿಯಲ್ಲಿ ಭಾಗವಹಿಸಿದ್ದರು.
Next Story