ವಕ್ಫ್ ಬೋರ್ಡ್ ನೋಟಿಸ್ | ಅ.29ಕ್ಕೆ ವಿಜಯಪುರ ಜಿಲ್ಲೆಗೆ ಬಿಜೆಪಿ ತಂಡ ಭೇಟಿ
ಬೆಂಗಳೂರು: ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ರೈತರಿಂದ ಅಹವಾಲು ಸ್ವೀಕರಿಸಲು ರಾಜ್ಯ ಬಿಜೆಪಿಯಿಂದ ತಂಡವೊಂದನ್ನು ರಚಿಸಲಾಗಿದೆ.
ರೈತರ ಸಮಸ್ಯೆಗಳ ಸಮಗ್ರ ವರದಿ ಮಾಡಲು ಅ.29ರಂದು ವಿಜಯಪುರಕ್ಕೆ ಈ ಬಿಜೆಪಿ ತಂಡ ಭೇಟಿ ನೀಡಲಿದೆ.
ಈ ಕುರಿತು ಪ್ರಕಟನೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ತಂಡದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ಶಾಸಕರಾದ ಹರೀಶ್ ಪೂಂಜಾ, ಮಹೇಶ್ ಟೆಂಗಿನಕಾಯಿ, ಮಾಜಿ ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ, ಮತ್ತು ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಇದ್ದಾರೆ.
Next Story