ಪ್ರವಾದಿ ಕುರಿತು ಅವಹೇಳನಾಕಾರಿ ಹೇಳಿಕೆ : ಶಾಸಕ ಯತ್ನಾಳ್ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ವಿಜಯಪುರ : ಪ್ರವಾದಿ ಕುರಿತು ಅವಹೇಳನಾಕಾರಿಯಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಮುಸ್ಲಿಂ ಮುತ್ತಹೀದಾ ಕೌನ್ಸಿಲ್ ವಿಜಯಪುರ ಜಿಲ್ಲಾ ಘಟಕದ ಬಂದೇನವಾಝ್ ಮುಲ್ಲಾ ಎಂಬವರು ನೀಡಿರುವ ದೂರಿನಂತೆ ಯತ್ನಾಳ್ ವಿರುದ್ಧ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ.7ರಂದು ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಬಗ್ಗೆ ಶಾಸಕ ಯತ್ನಾಳ್ ಪ್ರಚೋದನಾಕಾರಿ ಹಾಗೂ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಿಜಯಪುರ ಗಾಂಧಿಚೌಕ್ ಪೋಲೀಸ್ ಠಾಣೆಯಲ್ಲಿ ಬಂದೇನವಾಝ್ ಮುಲ್ಲಾ ಅವರು ದೂರು ದಾಖಲಿಸಿದ್ದರು.
ಈ ಹಿಂದೆ ಮುಹಮ್ಮದ್ ಹನ್ನಾನ್ ಶೇಖ್ ಎಂಬವರು ನೀಡಿರುವ ದೂರಿನಂತೆ ಯತ್ನಾಳ್ ವಿರುದ್ಧ ನಗರದ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Next Story