18ನೇ ವಯಸ್ಸಿಗೆ ಕಮರ್ಷಿಯಲ್ ಪೈಲಟ್ ಆದ ವಿಜಯಪುರದ ಸಮೈರಾ ಹುಲ್ಲೂರು
ಭಾರತದಲ್ಲಿಯೇ ಅತ್ಯಂತ ಕಿರಿಯ ಪೈಲೆಟ್ ಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆ
ವಿಜಯಪುರ : 18ನೇ ವರ್ಷಕ್ಕೆ ಕಮರ್ಷಿಯಲ್ ಪೈಲಟ್ ಲೈಸನ್ಸ್ ಪಡೆಯುವ ಮೂಲಕ ಗುಮ್ಮಟ ನಗರಿಯ ಯುವತಿಯೊಬ್ಬಳು ಭಾರತದ ಅತೀ ಕಿರಿಯ ಪೈಲಟ್ ಗಳಲ್ಲಿ ಒಬ್ಬರು ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದಾಳೆ.
ವಿಜಯಪುರ ಜಿಲ್ಲೆಯ ಗೋಲಗುಮ್ಮಟ ಸಮೀಪದ ಅಮೀನ್ ಹುಲ್ಲೂರು-ನಾಝಿಯಾ ಹುಲ್ಲೂರು ದಂಪತಿಯ ಮಗಳು ಸಮೈರಾ ಹುಲ್ಲೂರು ಈ ದಾಖಲೆ ಮಾಡಿದ ಯುವ ಪ್ರತಿಭೆ. ಸಮೈರಾ ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಾಲೆಯ ವಿದ್ಯಾಭ್ಯಾಸವನ್ನು ವಿಜಯ ಪುರದಲ್ಲಿ ಪೂರ್ಣಗೊಳಿಸಿದ್ದು, ನಂತರ ದೆಹಲಿಯಲ್ಲಿ 6 ತಿಂಗಳ ಪೈಲಟ್ ತರಬೇತಿಯನ್ನು ಮುಗಿಸಿದ್ದಳು. 25ನೇ ವರ್ಷಕ್ಕೆ ಪೈಲಟ್ ಆಗಿರುವ ಕ್ಯಾಪ್ಟನ್ ತಪೇಶ್ ಕುಮಾರ್ ಅವರೇ ನನಗೆ ಪ್ರೇರಣೆ ಎಂದು ಸಮೈರಾ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾಳೆ. ಇದೀಗ ಸಮೈರಾ 18ನೇ ವರ್ಷಕ್ಕೆ ಪೈಲಟ್ ಆಗುವ ಮೂಲಕ ತಪೇಶ್ ಅವರನ್ನು ಮೀರಿಸಿದ್ದಾರೆ.
Next Story