ವಿಜಯಪುರ: ಉಮ್ಮೆ ಸುಲೇಮ್ ಮಸ್ಜಿದ್, ಮದ್ರಸಾ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ
ವಿಜಯಪುರ: "ಪರಸ್ಪರ ಧರ್ಮಗಳ ಅರಿವು ಮನುಷ್ಯನಲ್ಲಿ ಸಂಯಮದ ಗುಣ ಬೆಳೆಸುತ್ತದೆ, ಇಂತಹ ಇಫ್ತಾರ್ ಸೌಹಾರ್ದ ಕೂಟದ ಆಯೋಜನೆಯಿಂದ ಸಮಾಜದಲ್ಲಿ ಶಾಂತಿಯ ವಾತಾವರಣ ಕಟ್ಟಲು ಸಾಧ್ಯ" ಎಂದು ಸಾಮಾಜಿಕ ಮುಖಂಡ ಸಂಜು ಬಹಿರ್ಶೆಟ್ಟಿ ಹೇಳಿದ್ದಾರೆ.
ಅವರು ಇತ್ತೀಚಿಗೆ ಇಂಡಿ ನಗರದ ಉಮ್ಮೆ ಸುಲೇಮ್ ಮಸ್ಜಿದ್ ಹಾಗೂ ಮದ್ರಸಾ ವತಿಯಿಂದ ನಡೆದ ಸೌಹಾರ್ದ ಇಫ್ತಾರಕೂಟವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಜೆಟ್ಟಪ್ಪ ರವಳಿ ಮಾತನಾಡಿ " ಪರಸ್ಪರ ಕೂಡಿ ಬಾಳುವುದರಿಂದ ಒಂದು ಸುಂದರ ಸಮಾಜ ಕಟ್ಟಲು ಸಾಧ್ಯ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಮುಖಂಡರಾದ ಅಪ್ಪರಾಯ ಬಿರಾದರ್, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಝಮೀರ್ (ಮುನ್ನಾ) ಡಾಂಗೆ, ಕವುಳ್ಗಿ ಕಾಕಾ, ಪ್ರಶಾಂತ್ ಕಾಳ್ಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವಿದ್ ಮೋಮಿನ್, ಮೌಲಾನಾ ಝಿಯಾವುಲ್ ಹಕ್, ಮಲಂಗ್ ಮಕಾಂದಾರ್ ಸರ್, ರಈಸ್ ಅಷ್ಟೇಕರ್ ಮುಂತಾದವರು ಉಪಸ್ಥಿತರಿದ್ದರು.
Next Story