ಯಡಿಯೂರಪ್ಪಗೆ ವಿಜಯೇಂದ್ರ ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಅಂತಾನೆ : ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ : ʼಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ. ವಿಜಯೇಂದ್ರ ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಎಂದು ಕರೆಯುತ್ತಾನೆʼ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ರವಿವಾರ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ʼ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ವಿಜಯೇಂದ್ರ ಮಾಡಿದ ತಪ್ಪಿನಿಂದಲೇ ಅವರ ತಂದೆ ಜೈಲಿಗೆ ಹೋದರು. ಅವನಿಂದಲೇ ಯಡ್ಡಿಯೂರಪ್ಪ ಹಾಳಾಗಿದ್ದು, ಯಡ್ಡಿಯೂರಪ್ಪ ಮಗನ ವ್ಯಾಮೋಹ ಬಿಡಲಿʼ ಎಂದು ವಾಗ್ದಾಳಿ ನಡೆಸಿದರು.
ʼನಾನು ಸದಾಕಾಲ ರಮೇಶ್ ಜಾರಕಿಹೊಳಿ ಪರವಾಗಿದ್ದೇನೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಲು ಲಾಯಕ್ ಇಲ್ಲ. ಅವನನ್ನು ನಾವೂ ಯಾರೂ ಒಪ್ಪುವುದಿಲ್ಲ. ಅವನು ಕೂಡ ರಾಜೀನಾಮೆ ಕೊಡಬೇಕುʼ ಎಂದು ಆಗ್ರಹಿಸಿದ್ದಾರೆ.
Next Story