Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಾಸ್ಕ್, ಪಿಪಿಇ ಕಿಟ್ ಸರಬರಾಜುದಾರರಿಗೆ...

ಮಾಸ್ಕ್, ಪಿಪಿಇ ಕಿಟ್ ಸರಬರಾಜುದಾರರಿಗೆ 125.36 ಕೋಟಿ ರೂ. ಮೊತ್ತ ಪಾವತಿಸಿದ್ದಕ್ಕೆ ಅಧಿಕೃತ ಮೆಮೊ ಇರಲಿಲ್ಲ

ತನಿಖಾ ಸಮಿತಿಯಿಂದ ಬಹಿರಂಗ

ಜಿ.ಮಹಾಂತೇಶ್ಜಿ.ಮಹಾಂತೇಶ್10 Sept 2024 12:44 PM IST
share
ಮಾಸ್ಕ್, ಪಿಪಿಇ ಕಿಟ್ ಸರಬರಾಜುದಾರರಿಗೆ 125.36 ಕೋಟಿ ರೂ. ಮೊತ್ತ ಪಾವತಿಸಿದ್ದಕ್ಕೆ ಅಧಿಕೃತ ಮೆಮೊ ಇರಲಿಲ್ಲ

ಬೆಂಗಳೂರು: ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಎನ್-95 ಮಾಸ್ಕ್ ಮತ್ತು ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಿದ್ದ ಸರಬರಾಜುದಾರರಿಗೆ 125.36 ಕೋಟಿ ರೂ. ಮೊತ್ತ ಪಾವತಿಸಿದ್ದಕ್ಕೆ ಅಧಿಕೃತ ಜ್ಞಾಪನ (ಮೆಮೊ)ಪತ್ರಗಳೇ ಇರಲಿಲ್ಲ.

ಅದೇ ರೀತಿ ಕೋವಿಡ್ ಎರಡನೇ ಅಲೆ ವೇಳೆಯಲ್ಲಿ 514.87 ಕೋಟಿ ರೂ. ಮೊತ್ತದಲ್ಲಿ ಖರೀದಿಸಿದ್ದ 4.11 ಲಕ್ಷ ಸಂಖ್ಯೆಯ ಪಿಪಿಇ ಕಿಟ್‌ಗಳು ಸರಬರಾಜು ಆಗಿರುವ ಬಗೆಗಿನ ಕಡತಗಳೇ ಲಭ್ಯವಿರಲಿಲ್ಲ. ಹಾಗೆಯೇ 2020ರಲ್ಲಿದ್ದ ದರವು 2021ರ ಹೊತ್ತಿಗೆ ಕುಸಿತವಾಗಿದ್ದರೂ ಇದನ್ನು ಪರಿಗಣಿಸಿರಲಿಲ್ಲ. ಎರಡನೇ ಅಲೆಗೆ ಸಂಬಂಧಿಸಿದಂತೆ ಪಿಪಿಇ ಕಿಟ್‌ಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆಯೂ ಇರಲಿಲ್ಲ. ಪ್ರತ್ಯೇಕವಾಗಿ ಟೆಂಡರನ್ನೂ ಕರೆದಿರಲಿಲ್ಲ. ಅನುಮೋದನೆ ನೀಡಿದ್ದಕ್ಕಿಂತಲೂ ಹೆಚ್ಚಾಗಿ 16.71 ಲಕ್ಷ ಸಂಖ್ಯೆಯಲ್ಲಿ ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿತ್ತು ಎಂಬುದನ್ನು ತನಿಖಾ ಸಮಿತಿಯು ಬಹಿರಂಗಪಡಿಸಿದೆ.

ಕೋವಿಡ್ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮೈಕೆಲ್ ಕುನ್ಹಾ ಅವರ ನೇತೃತ್ವದ ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಇದಕ್ಕೂ ಮುನ್ನವೇ ಅಂದರೇ 2023ರ ಡಿಸೆಂಬರ್‌ನಲ್ಲೇ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿನ ಅಧಿಕಾರಿಗಳ ನೇತೃತ್ವದ ಸಮಿತಿಯು ಸರಕಾರಕ್ಕೆ ತನಿಖಾ ವರದಿ ಸಲ್ಲಿಸಿದೆ. ತನಿಖಾ ವರದಿಯ ಪ್ರತಿಯು "the-file.in"ಗೆ ಲಭ್ಯವಾಗಿದೆ.

2020ರಲ್ಲಿ 41.35 ಕೋಟಿ (ಆದೇಶ ಸಂಖ್ಯೆ; MED 52 RGU 2020 (ಅನುಬಂಧ-6, 29/10/2020) ರಂದು ಬಿಡುಗಡೆಯಾಗಿತ್ತು.

ಅದೇ ರೀತಿ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ಐಸಿಯು ಉಪಕರಣಗಳ ಖರೀದಿಗೆ 94.81 ಕೋಟಿ ರೂ.., ಪಿಪಿಇ ಕಿಟ್, ಎನ್ 95 ಮಾಸ್ಕ್‌ಗಳ ಖರೀದಿಗೆ 23.31 ಕೋಟಿ (CM/42/CMRF/GEN/2020 (ಅನುಬಂಧ 7) 91,450 ಸಂಖ್ಯೆಯಲ್ಲಿ ಪಿಪಿಇ ಕಿಟ್ ಮತ್ತು ಎನ್ -95 ಮಾಸ್ಕ್

ಗಳನ್ನು ಖರೀದಿಸಿ ಮೂವತ್ತು ದಿನದೊಳಗೇ 12.00 ಕೋಟಿ ರೂ..ಗಳನ್ನು ಪಾವತಿಸಲು ಅನುಮತಿ (MED 154 MMC 2021) ನೀಡಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.

ಹಾಗೆಯೇ 49.01 ಕೋಟಿ ರೂ. ಮೊತ್ತದಲ್ಲಿ ಪಿಪಿಇ ಕಿಟ್ ಮತ್ತು ಎನ್ 95 ಮಾಸ್ಕ್‌ಗಳನ್ನು ಖರೀದಿಸಲು 2021ರ ಮಾರ್ಚ್ 29ರಂದು 49.01 ಕೋಟಿ ರೂ.. ಅನುದಾನ ಬಿಡುಗಡೆ (MED 197 MPS 2021) ಮಾಡಿತ್ತು.

ಸರ್ಕಾರವು ನೀಡಿದ್ದ ಆದೇಶಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪಿಪಿಇ ಕಿಟ್, ಎನ್-95 ಮಾಸ್ಕ್‌ಗಳನ್ನು ಖರೀದಿಸಿದ್ದ ಅಧಿಕಾರಿಗಳು ಇದೇ ಅವಧಿಯಲ್ಲಿ ಸರಬರಾಜುದಾರರಿಗೆ ಒಟ್ಟಾರೆ 125.36 ಕೋಟಿ ರೂ..ಗಳನ್ನು ಪಾವತಿಸಿದ್ದರು ಎಂಬುದನ್ನು ತನಿಖಾ ಸಮಿತಿಯು ಹೊರಗೆಡವಿದೆ.

3,15,047 ಸಂಖ್ಯೆಯಲ್ಲಿ ಪಿಪಿಇ ಕಿಟ್‌ಗಳನ್ನು ಖರೀದಿಸಿತ್ತು. ಇದಕ್ಕೆ ಜಿಎಸ್‌ಟಿ ಸೇರಿ 41, 34,99,188 ರೂ.ಗಳನ್ನು ಸರಬರಾಜುದಾರರಿಗೆ ಪಾವತಿಸಿತ್ತು. ಅದೇ ರೀತಿ 1,14,300 ಸಂಖ್ಯೆಯ ಪಿಪಿಇ ಕಿಟ್‌ಗಳಿಗೆ 15,00, 18,750 ರೂ., 23,000 ಪಿಪಿಇ ಕಿಟ್‌ಗಳಿಗೆ 30, 187, 500 ರೂ., 2 ಲಕ್ಷ ಸಂಖ್ಯೆಯ ಎನ್ 95 ಮಾಸ್ಕ್‌ಗಳಿಗೆ 49,980,000 ರೂ., 83,800 ಪಿಪಿಇ ಕಿಟ್‌ಗಳಿಗೆ 109, 987,500 ರೂ., 4 ಲಕ್ಷ ಎನ್ 95 ಮಾಸ್ಕ್ ಗಳಿಗೆ 9,996,000 ರೂ., 3,44,750 ಸಂಖ್ಯೆಯ ಪಿಪಿಇ ಕಿಟ್‌ಗಳಿಗೆ 425,484,375 ರೂ., 1.50 ಲಕ್ಷ ಎನ್ 95 ಮಾಸ್ಕ್‌ಗಳಿಗೆ 37,485,000 ರೂ.ಗಳನ್ನು ಸರಬರಾಜುದಾರರಿಗೆ ಪಾವತಿಸಿತ್ತು.

ಕಡತದಲ್ಲಿ ಸರಬರಾಜುದಾರರಿಗೆ ಹಣ ಬಿಡುಗಡೆ ಮಾಡಿದ್ದ ಎಲ್ಲ ಅಧಿಕೃತ ಜ್ಞಾಪನಗಳು ಕಂಡು ಬಂದಿರುವುದಿಲ್ಲ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

ಇದಲ್ಲದೇ 2020ರಲ್ಲಿ ವಿವಿಧ ದಿನಾಂಕಗಳಂದು 50,00,00 ಸಂಖ್ಯೆಯಲ್ಲಿ ಪಿಪಿಇ ಕಿಟ್, ಪಿಪಿಕಿ ಕಿಟ್ ಆಕ್ಸೆಸೆರಿಸ್, ಎನ್ 95 ಮಾಸ್ಕ್‌ಗಳನ್ನು 123.82 ಕೋಟಿ ರೂ.. ಮೊತ್ತದಲ್ಲಿ ಖರೀದಿಸಿತ್ತು. ಆದರೆ ಕಡತದಲ್ಲಿ ಎಲ್ಲ ಸರಬರಾಜು ಆದೇಶಗಳು ಲಭ್ಯವಿಲ್ಲದೇ ಇರುವುದರಿಂದ ಬಿಡುಗಡೆ ಮಾಡಲಾದ ಅನುದಾನಕ್ಕೆ ಸಮನ್ವಯಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ತನಿಖಾ ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.

ವಿಶೇಷವೆಂದರೆ 2020ರ ಸೆ.7ರ ಒಂದೇ ದಿನದಂದು 18 ಸರಬರಾಜು ಆದೇಶಗಳನ್ನು ಕಾಲೇಜುವಾರು ನೀಡಿತ್ತು. ಈ ಎಲ್ಲ ಸರಬರಾಜು ಆದೇಶಗಳನ್ನು ಪಿಪಿಇ ಕವರ್‌ಆಲ್ ಮತ್ತು ಪ್ರತ್ಯೇಕವಾಗಿ ಶೂ ಕವರ್, ಟ್ರಿಪಲ್ ಲೇಯರ್ ಮೆಡಿಕಲ್ ಮಾಸ್ಕ್, ಹ್ಯಾಂಡ್ ಗ್ಲೋವ್, ಗಾಗಲ್ಸ್, ಫೇಸ್ ಶೀಲ್ಡ್, ಹೆಡ್ ಕವರ್, ಏಪ್ರಾನ್, ಡಿಸ್ಪೋಸಬಲ್ ಮಾಸ್ಕ್ ಎಂದು ವಿಭಜಿಸಿ ಆದೇಶ ನೀಡಿದ್ದನ್ನೂ ತನಿಖಾ ಸಮಿತಿಯು ಪತ್ತೆ ಹಚ್ಚಿ ರುವುದು ಗೊತ್ತಾಗಿದೆ.

511.87 ಕೋಟಿ ರೂ. ಮೊತ್ತದಲ್ಲಿ 4.11 ಲಕ್ಷ ಸಂಖ್ಯೆಯ ಪಿಪಿಇ ಕಿಟ್‌ಗಳು ಸರಬರಾಜು ಆಗಿರುವ ಬಗ್ಗೆ ಕಡತಗಳಲ್ಲಿ ಕಂಡುಬಂದಿರುವುದಿಲ್ಲ ಎಂದು ತನಿಖಾ ಸಮಿತಿಯು ವಿವರಿಸಿದೆ. ಪಿಪಿಇ ಕಿಟ್‌ಗಳ ಖರೀದಿ ಸಂಬಂಧ ಪ್ರಸ್ತಾವವನ್ನು ಪರಿಷ್ಕರಿಸಿದ್ದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು, 2021ರ ಮೇ 13ರಂದು 238.1 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಿದ್ದರು. ನಂತರ ಈ ಮೊತ್ತವನ್ನು 99.99 ಕೋಟಿಗೆ ಸೀಮಿತಗೊಳಿಸಿ ಆರ್ಥಿಕ ಇಲಾಖೆಗೆ ಸಲ್ಲಿಕೆಯಾಗಿತ್ತು.

ಈ ಸಂಬಂಧ ಆರ್ಥಿಕ ಇಲಾಖೆಯು 2021ರ ಜೂನ್ 4ರಂದು ಸಹಮತಿ ನೀಡಿ ಹಿಂಬರಹ (ಆಇ/217/ವೆಚ್ಚ-5/20-21) ನೀಡಿತ್ತು. ಆರ್ಥಿಕ ಇಲಾಖೆಯಿಂದ ಸ್ವೀಕೃತವಾಗಿದ್ದ ಈ ಟಿಪ್ಪಣಿಗೆ ವೈದ್ಯಕೀಯ ಶಿಕ್ಷಣ ಸಚಿವಾಲಯದಿಂದ ಸರಕಾರಿ ಆದೇಶ ಹೊರಡಿಸಿರುವ ಬಗ್ಗೆ ದಾಖಲೆಯೇ ಲಭ್ಯವಿರಲಿಲ್ಲ. ಆದರೆ ಸರಕಾರದಿಂದ ಅನುಮೋದನೆ ಸ್ವೀಕರಿಸುವ ಮುನ್ನವೇ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ 95.23 ಕೋಟಿ ರೂ. ಮೊತ್ತದಲ್ಲಿ 7,61,900 ಪಿಪಿಇ ಕಿಟ್‌ಗಳ ಸರಬರಾಜಿಗೆ ಆದೇಶ ನೀಡಿತ್ತು ಎಂಬುದನ್ನು ತನಿಖಾ ಸಮಿತಿಯು ವಿವರಿಸಿರುವುದು ತಿಳಿದು ಬಂದಿದೆ.

ಇದರಲ್ಲಿ ಕೆಎಸ್‌ಎಂಎಸ್‌ಸಿಎಲ್‌ಗೆ 3,00,000 ಪಿಪಿಇ ಕಿಟ್‌ಗಳು ಸರಬರಾಜು ಆಗಿದ್ದವು. ಮತ್ತೊಂದು ಸಂಗತಿ ಎಂದರೇ 2021ರ ಎಪ್ರಿಲ್ 6ರಂದೇ ಆರ್ಥಿಕ ಇಲಾಖೆಯು 34.76 ಕೋಟಿ ರೂ.. ಮೊತ್ತದಲ್ಲಿ 2,78,100 ಸಂಖ್ಯೆಯ ಪಿಪಿಇ ಕಿಟ್‌ಗಳಿಗೆ ಸರಬರಾಜು ಆದೇಶ ನೀಡಲು ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿತ್ತು.

ಮೇಲ್ಕಂಡ ಸರಬರಾಜು ಆದೇಶದಲ್ಲಿ 514.87 ಕೋಟಿ ರೂ.. ಮೊತ್ತದ 4,11,900 ಸಂಖ್ಯೆಗಳ ಪಿಪಿಇ ಕಿಟ್‌ಗಳು ಸರಬರಾಜು ಆಗಿರುವ ಕಡತಗಳಲ್ಲಿ ಕಂಡು ಬಂದಿರುವುದಿಲ್ಲ ಎಂದು ತನಿಖಾ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ಮೂಲ ಟೆಂಡರ್‌ನಲ್ಲಿ ಪಿಪಿಇ ಕಿಟ್‌ಗಳ ಖರೀದಿ ಪ್ರಮಾಣವನ್ನು 2,59,263 ಎಂದು ನಮೂದಿಸಿತ್ತು. ಆದರೆ ಒಟ್ಟಾಗಿ 10,40,000 ಸಂಖ್ಯೆಯಲ್ಲಿ ಪಿಪಿಇ ಕಿಟ್‌ಗಳನ್ನು ಇದುವರೆಗೂ ಖರೀದಿಸಿತ್ತು. ಅದೇ ರೀತಿ ಟೆಂಡರ್‌ನಲ್ಲಿ ಪಿಪಿಇ ಕಿಟ್‌ಗಳ ದರವನ್ನು 1,312.5 ರೂ.

ಎಂದು ನಿಗದಿಪಡಿಸಿತ್ತು. ಕೆಎಸ್‌ಎಂಎಸ್‌ಸಿಎಲ್ 2021ರ ಜೂನ್ 30ರಂದು ಕೇವಲ 400 ರೂ.ಗಳಿಗೆ ಪಿಪಿಇ ಕಿಟ್‌ಗಳನ್ನು ಖರೀದಿಸಿದ್ದರು. ಈ ಅಂಶವನ್ನು ಮುಖ್ಯ ಕಾರ್ಯದರ್ಶಿ ಗುರುತಿಸಿದ್ದರು ಎಂದು ವರದಿಯಲ್ಲಿ ಪ್ರಸ್ತಾಪಿಸಿದೆ.

share
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
X