2024-25ನೇ ಬಜೆಟ್ 82,255.47 ಕೋಟಿ ರೂ. ಅನುದಾನ ಬಿಡುಗಡೆಗೆ ಬಾಕಿ

ಬೆಂಗಳೂರು: 2024-25ನೇ ಸಾಲಿನ ಬಜೆಟ್‌ನಲ್ಲಿ ಒದಗಿಸಿದ್ದ 3,25,995.13 ಕೋಟಿ ರೂ. ಪೈಕಿ ಫೆಬ್ರವರಿ 10ರ ಅಂತ್ಯಕ್ಕೆ 2,43,739.66 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಈ ಅನುದಾನದಲ್ಲಿ ಫೆಬ್ರವರಿ ಅಂತ್ಯಕ್ಕೆ 2,22,452.34 ಕೋಟಿ ರೂ. ವೆಚ್ಚ ಮಾಡಿರುವ ಇಲಾಖೆಗಳು ಬಿಡುಗಡೆಗೆ ಇನ್ನು 82,255.47 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
ಅದೇ ರೀತಿ ಬಿಡುಗಡೆಯಾಗಿರುವ 2,43,739.66 ಕೋಟಿ ರೂ..ಗಳಲ್ಲಿ 21,287.35 ಕೋಟಿ ರೂ. ಖರ್ಚು ಮಾಡದೇ ಬಾಕಿ ಇರಿಸಿಕೊಂಡಿವೆ. ಕಳೆದ 2023-24ನೇ ಸಾಲಿನಲ್ಲಿ ಫೆಬ್ರವರಿ 10ರ ಅಂತ್ಯಕ್ಕೆ 15,426.16 ಕೋಟಿ ರೂ. ಖರ್ಚು ಮಾಡದೇ ಬಾಕಿ ಉಳಿಸಿಕೊಂಡಿತ್ತು. 2023-24ಕ್ಕೆ ಉಳಿಕೆ ಮೊತ್ತಕ್ಕೆ ಹೋಲಿಸಿದರೆ 2024-25ನೇ ಸಾಲಿನ ಫೆ.10ರ ಅಂತ್ಯದ 5,861.19 ಕೋಟಿ ರೂ. ಹೆಚ್ಚುವರಿಯಾಗಿ ಉಳಿಸಿಕೊಂಡಿದೆ.
2024-25ನೇ ಸಾಲಿನ ಬಜೆಟ್‌ಗೆ ಸಂಬಂಧಿಸಿದಂತೆ 2025ರ ಫೆ.15ರಂದು ನಡೆಯಲಿರುವ ಕೆಡಿಪಿ ಸಭೆಗೆ ಇಲಾಖೆಗಳು ಮಂಡಿಸಿರುವ ಖರ್ಚು ವೆಚ್ಚದ ಅಂಕಿ ಅಂಶದ ಮಾಹಿತಿಯಲ್ಲಿ ಈ ವಿವರಗಳಿವೆ. ಇದರ ಪ್ರತಿಯು ‘the-file.in‘ ಗೆ ಲಭ್ಯವಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ 25, 792.96 ಕೋಟಿ ರೂ. ಅನುದಾನದಲ್ಲಿ ಫೆಬ್ರವರಿ 10ರ ಅಂತ್ಯಕ್ಕೆ 14,390.66 ಕೋಟಿ ರೂ. ಬಿಡುಗಡೆ ಮಾಡಿತ್ತು. 11,405.3 ಕೋಟಿ ರೂ. ಬಿಡುಗಡೆಗೆ ಬಾಕಿ ಇದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 13,48.42 ಕೋಟಿ ರೂ. ಖರ್ಚು ಮಾಡಿರುವ ಇಲಾಖೆಯು ಖರ್ಚು ಮಾಡಲು ಇನ್ನೂ 952.24 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ಅಂಕಿ ಅಂಶದಿಂದ ತಿಳಿದು ಬಂದಿದೆ.
ಪೌರಾಡಳಿತ ಇಲಾಖೆಗೆ 12,365.17 ಕೋಟಿ ರೂ. ಪೈಕಿ 6,444.46 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಬಿಡುಗಡೆಗೆ 5,920.71 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ವಿಶೇಷವೆಂದರೇ ಫೆ.10ರ ಅಂತ್ಯಕ್ಕೆ 8,012.86 ಕೋಟಿ ರೂ. ಖರ್ಚು ಮಾಡಿದೆ. ಬಿಡುಗಡೆಯಾಗಿರುವ ಅನುದಾನಕ್ಕಿಂತಲೂ 1,568.4 ಕೋಟಿ ರೂ. ಹೆಚ್ಚುವರಿ ವೆಚ್ಚ ಮಾಡಿರುವುದು ತಿಳಿದು ಬಂದಿದೆ.
ಒಳಾಡಳಿತ ಇಲಾಖೆಗೆ ಒದಗಿಸಿದ್ದ 12,734.77 ಕೋಟಿ ರೂ. ಅನುದಾನದಲ್ಲಿ 11,592.33 ಕೋಟಿ ರೂ.ಬಿಡುಗಡೆಯಾಗಿದೆ. ಬಿಡುಗಡೆಗೆ 1,139.44 ಕೋಟಿ ರೂ.ಬಾಕಿ ಉಳಿಸಿಕೊಂಡಿರುವ ಇಲಾಖೆಯು ಫೆ.10ರ ಅಂತ್ಯಕ್ಕೆ 9,198.48 ಕೋಟಿ ರೂ. ಖರ್ಚು ಮಾಡಿದೆ. ಖರ್ಚು ಮಾಡಲು ಇನ್ನೂ 2,393.85 ಕೋಟಿ ರೂ. ಬಾಕಿ ಇದೆ.
ಲೋಕೋಪಯೋಗಿ ಇಲಾಖೆಗೆ 10,769.12 ಕೋಟಿ ರೂ. ಅನುದಾನದಲ್ಲಿ 7,303.67 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 3,465.45 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿದ್ದ ಅನುದಾನದಲ್ಲಿ 5,975.92 ಕೋಟಿ ರೂ. ಖರ್ಚು ಮಾಡಿರುವ ಇಲಾಖೆಯು ಖರ್ಚುಮಾಡಲು ಇನ್ನೂ 1,327.75 ಕೋಟಿ ರೂ. ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.
ಗೃಹ ಲಕ್ಷ್ಮಿ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 33,062.51 ಕೋಟಿ ರೂ. ಅನುದಾನ ಒದಗಿಸಿತ್ತು. ಇದರಲ್ಲಿ ಫೆ.10ರ ಅಂತ್ಯಕ್ಕೆ 22,747.88 ಕೋಟಿ ರೂ. ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನು 10,314.63 ಕೋಟಿ ರೂ. ಬಾಕಿ ಇರಿಸಿಕೊಂಡಿದೆ. ಅದೇ ರೀತಿ ಬಿಡುಗಡೆಯಾಗಿರುವ ಅನುದಾನದಲ್ಲಿ 22,693.32 ಕೋಟಿ ರೂ. ಖರ್ಚು ಮಾಡಿದೆ. ಖರ್ಚು ಮಾಡಲು ಇನ್ನೂ 54.56 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
ಕಂದಾಯ ಇಲಾಖೆಗೆ 3,149.53 ಕೋಟಿ ರೂ. ಅನುದಾನ ಹಂಚಿಕೆಯಾಗಿತ್ತು. ಇದರಲ್ಲಿ 2,943.73 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 205.8 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 2,010.73 ಕೋಟಿ ರೂ. ಖರ್ಚು ಮಾಡಿರುವ ಇಲಾಖೆಯು ಖರ್ಚು ಮಾಡಲು ಇನ್ನು 933 ಕೋಟಿ ರೂ. ಬಾಕಿ ಇರಿಸಿಕೊಂಡಿರುವುದು ತಿಳಿದು ಬಂದಿದೆ.
ವಸತಿ ಇಲಾಖೆಗೆ ನೀಡಿದ್ದ 4,558.67 ಕೋಟಿ ರೂ. ಅನುದಾನದ ಪೈಕಿ 2,185.38 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನು 2,373.29 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಫೆ.10ರ ಅಂತ್ಯಕ್ಕೆ 2,681.94 ಕೋಟಿ ರೂ. ವೆಚ್ಚ ಮಾಡಿರುವ ಇಲಾಖೆಯು ಖರ್ಚು ಮಾಡಲು ಇನ್ನೂ 496.56 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.
ಉನ್ನತ ಶಿಕ್ಷಣ ಇಲಾಖೆಗೆ 5,784.89 ಕೋಟಿ ರೂ. ಅನುದಾನದ ಪೈಕಿ 4,986.24 ಕೋಟಿ ಬಿಡುಗಡೆಯಾಗಿದೆ. ಬಿಡುಗಡೆಗೆ 798.65 ಕೋಟಿ ರೂ. ಬಾಕಿ ಇದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 4,285.51 ಕೋಟಿ ರೂ. ಖರ್ಚು ಮಾಡಿರುವ ಇಲಾಖೆಯು ವೆಚ್ಚಕ್ಕೆ ಇನ್ನು 700.73 ಕೋಟಿ ರೂ. ಗಳನ್ನು ಬಾಕಿ ಇರಿಸಿಕೊಂಡಿದೆ.
ಅರಣ್ಯ ಇಲಾಖೆಗೆ 2,829.57 ಕೋಟಿ ರೂ. ಅನುದಾನದ ಪೈಕಿ 2,229.84 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ 599.73 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 1,619.71 ಕೋಟಿ ರೂ. ಖರ್ಚು ಮಾಡಿದೆ. ವೆಚ್ಚ ಮಾಡಲು ಇನ್ನು 610.13 ಕೋಟಿ ರೂ. ಬಾಕಿ ಇದೆ.
ಸಾಮಾಜಿಕ ಭದ್ರತೆಗೆ 15,243.73 ಕೋಟಿ ರೂ. ಅನುದಾನದಲ್ಲಿ 14,174.00 ಕೋಟಿ ರೂ. ಬಿಡುಗಡೆ ಮಾಡಿದೆ. 1,069.73 ಕೋಟಿ ರೂ. ಬಿಡುಗಡೆಗೆ ಬಾಕಿ ಇರಿಸಿಕೊಂಡಿರುವ ಕಂದಾಯ ಇಲಾಖೆಯು ಬಿಡುಗಡೆಯಾಗಿರುವ ಅನುದಾನದಲ್ಲಿ 13,574.77 ಕೋಟಿ ರೂ. ಖರ್ಚು ಮಾಡಿದೆ. ವೆಚ್ಚಕ್ಕೆ ಇನ್ನೂ 599.23 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.
ಕೃಷಿ ಇಲಾಖೆಯು 5,293.86 ಕೋಟಿ ರೂ. ನಲ್ಲಿ 3,412.90 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನು 1,880.96 ಕೋಟಿ ರೂ. ಬಾಕಿ ಇದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 3,115.02 ಕೋಟಿ ರೂ. ವೆಚ್ಚ ಮಾಡಿದೆ. ಖರ್ಚು ಮಾಡಲು ಇನ್ನೂ 297.88 ಕೋಟಿ ರೂ. ಬಾಕಿ ಇದೆ. ಸಹಕಾರ ಇಲಾಖೆಯಲ್ಲಿ 2,257.13 ಕೋಟಿ ರೂ. ಅನುದಾನದಲ್ಲಿ 2,009.89 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ 247.24 ಕೋಟಿ ರೂ. ಬಾಕಿ ಇರಿಸಿಕೊಂಡಿರುವ ಇಲಾಖೆಯು ಬಿಡುಗಡೆಯಾಗಿರುವ ಅನುದಾನದಲ್ಲಿ 1,512.05 ಕೋಟಿ ರೂ. ಖರ್ಚು ಮಾಡಿದೆ. ವೆಚ್ಚಕ್ಕೆ 497.84 ಕೋಟಿ ರೂ. ಬಾಕಿ ಇದೆ.
ಕಾನೂನು ಇಲಾಖೆಯು 2,481.81 ಕೋಟಿ ರೂ. ಪೈಕಿ 2,253.13 ಕೋಟಿ ರೂ. ಬಿಡುಗಡೆಯಾಗಿದೆ. 228.68 ಕೋಟಿ ರೂ. ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 1,811.41 ಕೋಟಿ ರೂ. ವೆಚ್ಚ ಮಾಡಿರುವ ಇಲಾಖೆಯು, ವೆಚ್ಚಕ್ಕೆ 441.72 ಕೋಟಿ ರೂ. ಬಾಕಿ ಇರಿಸಿಕೊಂಡಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯು 4,331.58 ಕೋಟಿ ರೂ. ನಲ್ಲಿ 3,933.98 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 397.6 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 3,528.61 ಕೋಟಿ ರೂ. ಖರ್ಚು ಮಾಡಿದೆ. ವೆಚ್ಚ ಮಾಡಲು ಇನ್ನೂ 405.37 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯು 3,613.45 ಕೋಟಿ ರೂ. ನಲ್ಲಿ 2,428.83 ಕೋಟಿ ರೂ. ಬಿಡುಗಡೆಯಾಗಿದೆ. 1,184.62 ಕೋಟಿ ರೂ..ಗಳನ್ನು ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವ ಇಲಾಖೆಯು ಫೆ.10ರ ಅಂತ್ಯಕ್ಕೆ 2,034.08 ಕೋಟಿ ರೂ. ವೆಚ್ಚ ಮಾಡಿದೆ. ವೆಚ್ಚಕ್ಕೆ 394.75 ಕೋಟಿ ರೂ. ಬಾಕಿ ಇರಿಸಿಕೊಂಡಿದೆ.
ಪಶು ಸಂಗೋಪನೆ ಇಲಾಖೆಯು 3,519.26 ಕೋಟಿ ರೂ. ಅನುದಾನದ ಪೈಕಿ 2,724.19 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 435.07 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 2,351.04 ಕೋಟಿ ರೂ. ವೆಚ್ಚ ಮಾಡಿದೆ. ಖರ್ಚು ಮಾಡಲು 373.15 ಕೋಟಿ ರೂ. ಬಾಕಿ ಇದೆ.
ಕೌಶಲ್ಯಾಭಿವೃದ್ಧಿ ಇಲಾಖೆಯು 2,078.68 ಕೋಟಿ ರೂ. ಅನುದಾನದಲ್ಲಿ 1,363.41 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 1,309.98 ಕೋಟಿ ರೂ. ವೆಚ್ಚ ಮಾಡಿದೆ. ಬಿಡುಗಡೆಗೆ 715.27 ಕೋಟಿ ರೂ. ಮತ್ತು ಬಿಡುಗಡೆಯಾಗಿರುವ ಅನುದಾನದಲ್ಲಿ 53.43 ಕೋಟಿ ರೂ. ಬಾಕಿ ಇರಿಸಿಕೊಂಡಿದೆ.
ತೋಟಗಾರಿಕೆ ಇಲಾಖೆಯಲ್ಲಿ 1,485.67 ಕೋಟಿ ರೂ.ನಲ್ಲಿ ಬಿಡುಗಡೆಗೆ 1,071.70 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 413.97 ಕೋಟಿ ರೂ. ಬಾಕಿ ಇರಿಸಿಕೊಂಡಿರುವ ಇಲಾಖೆಯು ಬಿಡುಗಡೆಯಾಗಿರುವ ಅನುದಾನದಲ್ಲಿ 1,079.96 ಕೋಟಿ ರೂ. ಖರ್ಚು ಮಾಡಿದೆ. ಬಿಡುಗಡೆಯಾಗಿರುವ ಅನುದಾನಕ್ಕಿಂತಲೂ 8.26 ಕೋಟಿ ರೂ. ಹೆಚ್ಚುವರಿಯಾಗಿ ವೆಚ್ಚ ಮಾಡಿದೆ. ಜಲಸಂಪನ್ಮೂಲ ಇಲಾಖೆಯು 16,863.22 ಕೋಟಿ ರೂ. ಅನುದಾನದ ಪೈಕಿ 9,870.98 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ 6,992.24 ಕೋಟಿ ರೂ. ಬಾಕಿ ಇದೆ. ಬಿಡುಗಡೆಯಾಗಿರುವ ಅನುದಾನಕ್ಕಿಂತಲೂ 403.86 ಕೋಟಿ ರೂ. ಸೇರಿ ಒಟ್ಟು 10,274.84 ಕೋಟಿ ರೂ. ವೆಚ್ಚವಾಗಿದೆ.
ಪರಿಶಿಷ್ಟ ಪಂಗಡ ಇಲಾಖೆಯು 1,819.97 ಕೋಟಿ ರೂ. ಅನುದಾನದಲ್ಲಿ 916.36 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 903.61 ಕೋಟಿ ರೂ. ಬಾಕಿ ಇರಿಸಿಕೊಂಡಿರುವ ಇಲಾಖೆಯು ಇದುವರೆಗೆ 721.10 ಕೋಟಿ ರೂ. ಖರ್ಚು ಮಾಡಿದೆ. ವೆಚ್ಚಕ್ಕೆ 195.26 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
ವಾಣಿಜ್ಯ (ಸಣ್ಣ ಜವಳಿ, ಗಣಿ) ಇಲಾಖೆಗೆ 1,239.70 ಕೋಟಿ ರೂ. ಅನುದಾನದ ಪೈಕಿ 750.98 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 558.65 ಕೋಟಿ ರೂ. ವೆಚ್ಚ ಮಾಡಿರುವ ಇಲಾಖೆಯು ಬಿಡುಗಡೆಗೆ ಇನ್ನು 488.72 ಕೋಟಿ ರೂ. ಮತ್ತು ವೆಚ್ಚಕ್ಕೆ 192.33 ಕೋಟಿ ರೂ. ಬಾಕಿ ಇರಿಸಿಕೊಂಡಿದೆ.
ಆಹಾರ ಇಲಾಖೆಯು 7,935.88 ಕೋಟಿ ರೂ. ಅನುದಾನದಲ್ಲಿ 5,089.82 ಕೋಟಿ ರೂ. ಬಿಡುಗಡೆಯಾಗಿದೆ. ಇನ್ನೂ 2,846.06 ಕೋಟಿ ರೂ. ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆ. ಈಗಾಗಲೇ ಬಿಡುಗಡೆಯಾಗಿರುವ ಅನುದಾನದಲ್ಲಿ 4,917.33 ಕೋಟಿ ರೂ. ಖರ್ಚು ಮಾಡಿರುವ ಇಲಾಖೆಯು ವೆಚ್ಚಕ್ಕೆ 172.49 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಮೂಲಭೂತ ಸೌಕರ್ಯ ಇಲಾಖೆಯು 952 ಕೋಟಿ ರೂ. ಅನುದಾನದ ಪೈಕಿ 810.83 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಪೈಕಿ 666.83 ಕೋಟಿ ರೂ. ಖರ್ಚು ಮಾಡಿರುವ ಇಲಾಖೆಯು ವೆಚ್ಚಕ್ಕೆ 144 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
ಕಾರ್ಮಿಕ ಇಲಾಖೆಯು 777.70 ಕೋಟಿ ರೂ. ಪೈಕಿ 629.32 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 518.32 ಕೋಟಿ ರೂ. ವೆಚ್ಚ ಮಾಡಿರುವ ಇಲಾಖೆಯು ಖರ್ಚು ಮಾಡಲು ಇನ್ನೂ 110. 67 ಕೋಟಿ ರೂ. ಮತ್ತು ಬಿಡುಗಡೆಗೆ ಇನ್ನು 148.38 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.
ಸಣ್ಣ ನೀರಾವರಿ ಇಲಾಖೆಯು 2,367.89 ಕೋಟಿ ರೂ. ನಲ್ಲಿ 1,871.56 ಕೋಟಿ ರೂ.ನಲ್ಲಿ 1,871.56 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 1,761.95 ಕೋಟಿ ರೂ. ಖರ್ಚು ಮಾಡಿರುವ ಇಲಾಖೆಯು ವೆಚ್ಚಕ್ಕೆ ಇನ್ನು 109.61 ಕೋಟಿ ರೂ. ಮತ್ತು ಬಿಡುಗಡೆಗೆ ಇನ್ನೂ 496.33 ಕೋಟಿ ರೂ. ಬಾಕಿ ಇರಿಸಿಕೊಂಡಿದೆ.
ಸಾರಿಗೆ ಇಲಾಖೆಯು ಸಹ 6,526.37 ಕೋಟಿ ರೂ. ನಲ್ಲಿ 5,060.83 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 5,000.13 ಕೋಟಿ ರೂ. ಖರ್ಚು ಮಾಡಿರುವ ಇಲಾಖೆಯು ಬಿಡುಗಡೆಗೆ 1,465.54 ಕೋಟಿ ರೂ. ಮತ್ತು ಖರ್ಚು ಮಾಡಲು 60.7 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
ಯುವ ಸಬಲೀಕರಣ ಇಲಾಖೆಯು 249.60 ಕೋಟಿ ರೂ..ನಲ್ಲಿ 198.19 ಕೋಟಿ ರೂ. ಬಿಡುಗಡೆ ಮಾಡಿದೆ. ಇದುವರೆಗೆ 140.40 ಕೋಟಿ ರೂ. ವೆಚ್ಚ ಮಾಡಿರುವ ಇಲಾಖೆಯು ಖರ್ಚು ಮಾಡಲು ಇನ್ನೂ 57.79 ಕೋಟಿ ರೂ. ಮತ್ತು ಬಿಡುಗಡೆಗೆ 51.41 ಕೋಟಿ ರೂ. ಬಾಕಿ ಇರಿಸಿಕೊಂಡಿದೆ.
ರೇಷ್ಮೆ ಇಲಾಖೆಯಲ್ಲಿಯೂ ಸಹ 396.61 ಕೋಟಿ ರೂ. ಪೈಕಿ 290.69 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 243.17 ಕೋಟಿ ರೂ. ಖರ್ಚು ಮಾಡಿರುವ ಇಲಾಖೆಯು ಬಿಡುಗಡೆಗೆ 105.92 ಕೋಟಿ ರೂ.., ಖರ್ಚು ಮಾಡಲು 47.57 ಕೋಟಿ ರೂ. ಬಾಕಿ ಇರಿಸಿಕೊಂಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 304.11 ಕೋಟಿ ರೂ.ನಲ್ಲಿ 257.07 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 209.64 ಕೋಟಿ ರೂ. ಖರ್ಚು ಮಾಡಿದೆ. ಬಿಡುಗಡೆಗೆ 47.04 ಕೋಟಿ ರೂ. ಮತ್ತು ಖರ್ಚು ಮಾಡಲು 47.64 ಕೋಟಿ ರೂ. ಬಾಕಿ ಇದೆ.
ಪ್ರವಾಸೋದ್ಯಮ ಇಲಾಖೆಯು 372.16 ಕೋಟಿ ರೂ. ನಲ್ಲಿ 341.50 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 297.32 ಕೋಟಿ ರೂ. ವೆಚ್ಚ ಮಾಡಿರುವ ಇಲಾಖೆಯು ಖರ್ಚು ಮಾಡಲು 44.18 ಕೋಟಿ ರೂ. ಮತ್ತು ಬಿಡುಗಡೆಗೆ 30.66 ಕೋಟಿ ರೂ. ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.
ಮೀನುಗಾರಿಕೆ ಇಲಾಖೆ
ಮೀನುಗಾರಿಕೆ ಇಲಾಖೆಯು 323.09 ಕೋಟಿ ರೂ.. ನಲ್ಲಿ 188.94 ಕೋಟಿ ರೂ. ಬಿಡುಗಡೆ ಮಾಡಿರುವ ಇಲಾಖೆಯು ಈಗಾಗಲೇ 161.35 ಕೋಟಿ ರೂ. ವೆಚ್ಚ ಮಾಡಿದೆ. ಖರ್ಚು ಮಾಡಲು 27.59 ಕೋಟಿ ರೂ. ಮತ್ತು ಬಿಡುಗಡೆಗೆ 134.15 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಅದೇ ರೀತಿ ಇಂಧನ ಇಲಾಖೆಯು 23,210.87 ಕೋಟಿ ರೂ.ನಲ್ಲಿ 20,665.74 ಕೋಟಿ ರೂ. ಬಿಡುಗಡೆಯಾಗಿದೆ. ಇದುವರೆಗೆ 20,642.09 ಕೋಟಿ ರೂ. ವೆಚ್ಚ ಮಾಡಿದೆ. ಬಿಡುಗಡೆಗೆ 2,555.13 ಕೋಟಿ ರೂ. ಮತ್ತು ಖರ್ಚು ಮಾಡಲು 13.65 ಕೋಟಿ ರೂ. ವಷ್ಟೇ ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ: 244.02 ಕೋಟಿ ರೂ. ಬಾಕಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ 3,059.84 ಕೋಟಿ ರೂ. ಅನುದಾನದ ಪೈಕಿ 2,079.75 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ 980.09 ಕೋಟಿ ರೂ. ಬಾಕಿ ಇದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 1,835.73 ಕೋಟಿ ರೂ. ಖರ್ಚು ಮಾಡಿರುವ ಇಲಾಖೆಯು 244.02 ಕೋಟಿ ರೂ. ಗಳನ್ನು ವೆಚ್ಚ ಮಾಡಲು ಬಾಕಿ ಉಳಿಸಿಕೊಂಡಿದೆ.
ಶಾಲಾ ಶಿಕ್ಷಣ-ಸಾಕ್ಷರತಾ ಇಲಾಖೆ: 4,294.58 ಕೋಟಿ ರೂ. ಬಾಕಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ 37,449.40 ಕೋಟಿ ರೂ. ಅನುದಾನದ ಪೈಕಿ 30.409.70 ಕೋಟಿ ರೂ. ಬಿಡುಗಡೆಯಾಗಿದೆ. ಬಿಡುಗಡೆಗೆ 7,039.7 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಇಲಾಖೆಯು ಫೆ.10ರ ಅಂತ್ಯಕ್ಕೆ 26,115.12 ಕೋಟಿ ರೂ. ಖರ್ಚು ಮಾಡಿದೆ. ಖರ್ಚು ಮಾಡಲು ಇನ್ನು 4,294.58 ಕೋಟಿ ರೂ. ಉಳಿಸಿಕೊಂಡಿರುವುದು ಗೊತ್ತಾಗಿದೆ.
ಸಮಾಜ ಕಲ್ಯಾಣ ಇಲಾಖೆ: 779.42 ಕೋಟಿ ರೂ. ಬಾಕಿ
ಸಮಾಜ ಕಲ್ಯಾಣ ಇಲಾಖೆಗೆ ಒದಗಿಸಿದ್ದ 5,887.36 ಕೋಟಿ ರೂ. ಅನುದಾನದ ಪೈಕಿ 4,322.42 ಕೋಟಿ ರೂ. ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 1,564.94 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಇಲಾಖೆಯು ಫೆ.10ರ ಅಂತ್ಯಕ್ಕೆ 3,543.00 ಕೋಟಿ ರೂ. ಖರ್ಚು ಮಾಡಿದೆ. ಖರ್ಚು ಮಾಡಲು ಇನ್ನು 779.42 ಕೋಟಿ ರೂ. ಬಾಕಿ ಇರಿಸಿಕೊಂಡಿದೆ.