ಮುಸ್ಲಿಮ್ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಸರಕಾರದ ಪ್ರೋತ್ಸಾಹ ಅಗತ್ಯ: -ಮುಹಮ್ಮದ್ ಸೈಫುಲ್ಲ
* ನೀವು ಮುಸ್ಲಿಮ್ ಮಹಿಳೆಯರ ಸಲುವಾಗಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದೀರಿ ಈ ದಿಸೆಯಲ್ಲಿ ಮುಸ್ಲಿಮ್ ಮಹಿಳಾ ಶಿಕ್ಷಣದಲ್ಲಿ ಸಾಕಷ್ಟು ಪ್ರಗತಿಯಾಗಿದೆಯೇ?
ಮು. ಸೈಫುಲ್ಲಾ: ಹೌದು ಬಹಳ ಪ್ರಗತಿಯಾಗಿದೆ. ಬಾಲಕಿಯರ ಪ್ರೌಢಶಾಲೆ ಪದವಿ ಪೂರ್ವ ಹಾಗೂ ಪದವಿ ಕಾಲೇಜಿ ನಿಂದ ಹೆಚ್ಚು ಮುಸ್ಲಿಮ್ ಯುವತಿಯರು ಶಿಕ್ಷಣ ಪಡೆಯುತ್ತಿದ್ದಾರೆ.
*ಮುಸ್ಲಿಮ್ ಬಾಲಕಿಯರಿಗೆ ಪ್ರಾರಂಭ ದಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ನೀಡಿದರೂ ಅವರಿಗೆ ಸಂಪೂರ್ಣ ಶಿಕ್ಷಣ ಕೊಡಿಸಲು ಪಾಲಕರಿಗೆ ಆಗುತ್ತಿಲ್ಲ ಕಾರಣವೇನು?
ಮು. ಸೈಫುಲ್ಲಾ: ಹೆಚ್ಚಾಗಿ ಬಡತನವಿರ ಬಹುದು. ಅಲ್ಲದೆ ಕೆಲವರಿಗೆ ಸ್ತ್ರೀ ಶಿಕ್ಷಣ ಅಗತ್ಯಕ್ಕೆ ತಕ್ಕಂತೆ ಇದ್ದರೆ ಸಾಕೆನ್ನುವ ಮನೋಭಾವವಿದೆ, ಅಲ್ಲದೆ ಮದುವೆಯ ಕಾರಣ ಮತ್ತು ಕೆಲವು ಸಾಮಾಜಿಕ ಪಿಡುಗು ಗಳು ಪೋಷಕರನ್ನು ಕಟ್ಟಿಹಾಕುತ್ತಿವೆ.
* ಈಗೀಗ ಮುಸ್ಲಿಮ್ ಮಹಿಳೆಯರು ಹೆಚ್ಚು ಶಿಕ್ಷಣದತ್ತ ಮುಂದುವರಿಯುತ್ತಿದ್ದರೂ ವೃತ್ತಿಪರ ಶಿಕ್ಷಣದಲ್ಲಿ ಬಹಳ ಹಿಂದುಳಿದಿದ್ದಾರೆ. ಉದಾಹರಣೆಗೆ ವೈದ್ಯಕೀಯ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಇನ್ನೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಏಕೆ?
ಮು. ಸೈಫುಲ್ಲಾ: ಏಕೆಂದರೆ ಸರಕಾರಗಳ ಕೆಲವು ಧೋರಣೆಗಳು ಸ್ತ್ರೀ ಉನ್ನತ ಶಿಕ್ಷಣಕ್ಕೆ ಮಹತ್ವ ನೀಡುತ್ತಿಲ್ಲ. ಅವರಿಗೆ ಇರಬೇಕಾದ ಮೀಸಲಾತಿ, ಶೇ. ಅಂಕಗಳು ಕಡಿತಗೊಳಿಸಿದೆ. ಅಲ್ಲದೆ ಶಿಕ್ಷಣ ಪಡೆದವರಿಗೂ ವೃತ್ತಿಪರ ಕ್ಷೇತ್ರದಲ್ಲಿ ಅವಕಾಶಗಳು ಸಿಗುತ್ತಿಲ್ಲ.
*ಮುಸ್ಲಿಮ್ ಸಮುದಾಯ ಸ್ತ್ರೀ ಶಿಕ್ಷಣ ದಲ್ಲಿ ಯಾವ ವೃತ್ತಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುತ್ತಿದೆ?
ಮು. ಸೈಫುಲ್ಲಾ: ಮುಸ್ಲಿಮ್ ಸಮುದಾಯ ದಲ್ಲಿ ಸ್ತ್ರೀ ಶಿಕ್ಷಣದಲ್ಲಿ ಎಲ್ಲ ವೃತ್ತಿ ಕ್ಷೇತ್ರ ಗಳಲ್ಲಿಯೂ ಮುಂದುವರಿಯುವಂತೆ ನಾವು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಅವರ ಅಭಿಲಾಷೆಗೆ ತಕ್ಕಂತೆ ಅವರಿಗೆ ನಾವು ಅನುಕೂಲ ಮಾಡಿ ಕೊಡುತ್ತಿದ್ದೇವೆ, ತರಬೇತಿ ನೀಡುತ್ತಿದ್ದೇವೆ.
*ಗ್ರಾಮೀಣ ಭಾಗದಲ್ಲಿರುವ ಮುಸ್ಲಿಮ್ ಯುವತಿಯರಿಗೆ ವೃತ್ತಿ ಶಿಕ್ಷಣದ ಅನುಕೂಲತೆ ಇರುವುದಿಲ್ಲ. ಅಂತಹವರಿಗೆ ಯಾವ ಯೋಜನೆಗಳನ್ನು ನೀವು ಸೂಚಿಸುತ್ತೀರಿ?
ಮು. ಸೈಫುಲ್ಲಾ: ಗ್ರಾಮೀಣ ಭಾಗ ದಲ್ಲಿರುವ ಮುಸ್ಲಿಮ್ ಯುವತಿಯರ ವೃತ್ತಿ ಶಿಕ್ಷಣಕ್ಕೆ ಅನುಕೂಲವಾಗುವಂತೆ ಪಟ್ಟಣಗಳಲ್ಲಿ ಏರ್ಪಾಡು ಮಾಡಬೇಕು, ಅವರಿಗೆ ಊಟ, ವಸತಿ, ಉಚಿತ ತರಗತಿಗಳನ್ನು ಹಾಗೂ ಅವರಿಗೆ ವಿದ್ಯಾರ್ಥಿ ವೇತನ ನೀಡಿ ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದು ಅದಕ್ಕಾಗಿ ಒಂದು ತಂಡವನ್ನೇ ನೇಮಿಸಿದ್ದೇವೆ.