Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕರಾವಳಿಯನ್ನೇ ತಲ್ಲಣಗೊಳಿಸಿದ್ದ ವಾಮಂಜೂರು...

ಕರಾವಳಿಯನ್ನೇ ತಲ್ಲಣಗೊಳಿಸಿದ್ದ ವಾಮಂಜೂರು ಒಂದೇ ಕುಟುಂಬದ ನಾಲ್ವರ ಕೊಲೆಯನ್ನು ಪೊಲೀಸರು ಭೇದಿಸಿದ್ದೇಗೆ?

ಸಿಂಗಲ್ ನಂಬರ್ ಲಾಟರಿಯಿಂದ ಸಾಲ; ಟಿಫಿನ್ ಬಾಕ್ಸ್ ನಲ್ಲಿಟ್ಟಿದ್ದ ಚಿನ್ನಕ್ಕೆ ಕಣ್ಣು ಹಾಕಿದ್ದ ಪ್ರವೀಣ್

ವಾರ್ತಾಭಾರತಿವಾರ್ತಾಭಾರತಿ16 March 2025 10:15 PM IST
share
ಕರಾವಳಿಯನ್ನೇ ತಲ್ಲಣಗೊಳಿಸಿದ್ದ ವಾಮಂಜೂರು ಒಂದೇ ಕುಟುಂಬದ ನಾಲ್ವರ ಕೊಲೆಯನ್ನು ಪೊಲೀಸರು ಭೇದಿಸಿದ್ದೇಗೆ?

ಮಂಗಳೂರು : ಅದು 1994, ಕರಾವಳಿ ಜಿಲ್ಲೆ ಮಂಗಳೂರಿನಿಂದ ಸುಮಾರು 8 ಕಿಮೀ ದೂರದಲ್ಲಿರುವ ವಾಮಂಜೂರು ಎಂಬ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದಿತ್ತು. ವಾಮಂಜೂರು ಗ್ರಾಮದಲ್ಲಿ ರೈತರೇ ಹೆಚ್ಚಾಗಿ ವಾಸಿಸುತ್ತಿದ್ದರು. ತಮ್ಮ ಗ್ರಾಮದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಗ್ರಾಮಸ್ಥರನ್ನು ಆತಂಕಕ್ಕೆ ಸಿಲುಕಿಸಿತ್ತು.

ಮಂಗಳೂರು ಕಾರ್ಕಳ ರಸ್ತೆಯಲ್ಲಿರುವ ವಾಮಂಜೂರು ಗ್ರಾಮದಲ್ಲಿ ಚಿಕ್ಕ ಮನೆಯೊಂದರಲ್ಲಿ ಅಪ್ಪಿ ಶೇರಿಗಾರ್ತಿ(70), ಅವರ ಮಗ ಗೋವಿಂದ (22), ಮಗಳು ಶಕುಂತಲಾ (28) ಮತ್ತು ಶಕುಂತಲಾ ಅವರ ಪುತ್ರಿ ದೀಪಿಕಾ (10) ವಾಸಿಸುತ್ತಿದ್ದರು. ಶಕುಂತಳಾ ಅವರ ಪತಿ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದರು.

ಅಂದು 1994ರ ಫೆಬ್ರವರಿ 24, ಪಕ್ಕದ ಮನೆಯ ರೇವತಿ ಎಂಬ 12 ವರ್ಷದ ಪುಟ್ಟ ಬಾಲಕಿ ಎಂದಿನಂತೆ ಹಾಲು ತೆಗೆದುಕೊಂಡು ಅಪ್ಪಿ ಶೇರಿಗಾರ್ತಿ ಅವರ ಮನೆಗೆ ತೆರಳಿ ಅವರ ಮನೆಯ ಬಾಗಿಲು ಬಡಿದಳು. ಆದರೆ, ಮನೆಯ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮನೆಯೊಳಗೆ ಪ್ರವೇಶಿಸಿದ ಬಾಲಕಿ ಭಯಾನಕವಾದ ದೃಶ್ಯವನ್ನೇ ಕಂಡುಕೊಂಡಳು. ಮನೆಯ ಸುತ್ತಲೂ ಇದ್ದ ರಕ್ತದ ಕಲೆಗಳನ್ನು ನೋಡಿ ಗಾಬರಿಗೊಂಡ ಬಾಲಕಿ ಓಡಿ ಹೋಗಿ ಅಜ್ಜಿ ಬಳಿ ಮಾಹಿತಿಯನ್ನು ಹಂಚಿಕೊಂಡಳು. ಬಳಿಕ ಗ್ರಾಮಸ್ಥರಿಗೆ ಮಾಹಿತಿ ತಿಳಿಯಿತು. ಎಲ್ಲರೂ ಮನೆಗೆ ತೆರಳಿ ನೋಡಿದಾಗ ಅಪ್ಪಿ ಶೇರಿಗಾರ್ತಿ ಮತ್ತು ಕುಟುಂಬದ ನಾಲ್ವರು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

1994ರ ಅವಧಿಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್‌ ಆಗಿ ಜಯಂತ್ ವಾಸುದೇವ್ ಶೆಟ್ಟಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ಪ್ರಕರಣದ ತನಿಖೆಯ ಜವಾಬ್ಧಾರಿಯನ್ನು ನೀಡಲಾಗಿತ್ತು.

ನಾಲ್ವರ ಕೊಲೆ ಬಗ್ಗೆ ಮಾಹಿತಿ ಬಂದ ತಕ್ಷಣ ಸಬ್ ಇನ್ಸ್‌ಪೆಕ್ಟರ್‌ ಜಯಂತ್ ವಾಸುದೇವ್ ಶೆಟ್ಟಿ ತಮ್ಮ ತಂಡದ ಜೊತೆ ಕೃತ್ಯ ನಡೆದ ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ʼನಾನು ಸ್ಥಳಕ್ಕೆ ತಲುಪಿದಾಗ ಗೋವಿಂದನ ಶವ ಹಾಸಿಗೆಯ ಮೇಲೆ ಬಿದ್ದುಕೊಂಡಿತ್ತು. ಗೋವಿಂದನ ಪಕ್ಕದಲ್ಲಿ ಇನ್ನೊಂದು ದೇಹವಿತ್ತು. ಮನೆಯೊಳಗೆ ಯಾರೂ ಬಲವಂತವಾಗಿ ಪ್ರವೇಶಿಸಿರುವ ಯಾವುದೇ ಪುರಾವೆ ಕಂಡು ಬರದ ಹಿನ್ನೆಲೆ ಕುಟುಂಬಕ್ಕೆ ತಿಳಿದಿರುವ ಯಾರೋ ಈ ಕೃತ್ಯ ಎಸಗಿರುವ ಬಗ್ಗೆ ನಮಗೆ ಮೊದಲು ಅನುಮಾನ ಬಂತುʼ ಎಂದು ಸಬ್ ಇನ್ಸ್‌ಪೆಕ್ಟರ್‌ ಜಯಂತ್ ಹೇಳಿದರು.

ಅಪ್ಪಿ ಶೇರಿಗಾರ್ತಿ ಮತ್ತು ಕುಟುಂಬಸ್ಥರ ಕೊಲೆಯಿಂದ ಇಡೀ ಗ್ರಾಮವೇ ದುಃಖದಲ್ಲಿತ್ತು. ಅದರಂತೆ ತನ್ನ ತಾಯಿಯ ಚಿಕ್ಕಮ್ಮ ಅಪ್ಪಿ ಶೇರಿಗಾರ್ತಿ ಕೊಲೆಯ ಬಗ್ಗೆ ಪ್ರವೀಣ್ ಕುಮಾರ್(30) ಎಂಬಾತ ಕೂಡ ದುಃಖಿತನಾಗಿದ್ದ. ಗ್ರಾಮಸ್ಥರಂತೆ ಪ್ರವೀಣ್, ಆರೋಪಿಯನ್ನು ಪೊಲೀಸರು ಆದಷ್ಟು ಬೇಗ ಬಂಧಿಸಬೇಕೆಂದು ಒತ್ತಾಯಿಸಿದ.

ಪ್ರವೀಣ್ ವೃತ್ತಿಯಲ್ಲಿ ಟೈಲರ್, ಈತ ವಾಮಂಜೂರಿನಿಂದ 56 ಕಿ.ಮೀ ದೂರದ ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಗ್ರಾಮದಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ. ʼಅಪರಾಧ ಬಗ್ಗೆ ಕೆಲವರನ್ನು ವಿಚಾರಿಸದೆವು. ಅದರಂತೆ ಪ್ರವೀಣ್ ಬಳಿಯೂ ಅಪರಾಧದ ದಿನ ನೀವು ಎಲ್ಲಿದ್ದೀರಿ ಎಂದು ಕೇಳಿದಾಗ, ಪ್ರವೀಣ್ ನಾನು ಹಳ್ಳಿಯಲ್ಲಿದ್ದೆ, ಘಟನೆ ನಡೆದ ದಿನ ನಾನು ಚಿಕ್ಕಮ್ಮನ ಮನೆಯಲ್ಲಿದ್ದರೆ ಕೊಲೆಯಾಗುತ್ತಿದ್ದೆʼ ಎಂದು ಹೇಳಿದ ಎಂದು ಜಯಂತ್ ಶೆಟ್ಟಿ ನೆನಪಿಸಿಕೊಂಡರು.

ʼನಮಗೆ ಮೊದಮೊದಲು ಪ್ರವೀಣ್ ಮೇಲೆ ಯಾವುದೇ ಅನುಮಾನ ಬರಲಿಲ್ಲ. ಆದರೆ, ಆ ಬಳಿಕ ಪ್ರವೀಣ್ ಅಪ್ಪಿ ಶೇರಿಗಾರ್ತಿ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಎಂಬುವುದು ತಿಳಿಯಿತು. ಕೊಲೆಯ ಹಿಂದೆ ಯಾರೋ ಪರಿಚಿತರೇ ಇದ್ದಾರೆ ಎಂಬುವುದು ಮೊದಲೇ ಸ್ಪಷ್ಟವಾದ ಅನುಮಾನವಿದ್ದ ಕಾರಣ ಪ್ರವೀಣ್ ಶಂಕಿತನಾಗಿದ್ದʼ ಎಂದು ಜಯಂತ್ ಶೆಟ್ಟಿ ಹೇಳಿದರು.

ಘಟನೆ ನಡೆದ ದಿನ ಮಧ್ಯರಾತ್ರಿ ನೀವು ಎಲ್ಲಿದ್ದೀರಿ ಎಂದು ಪ್ರವೀಣ್‌ಗೆ ಕೇಳಿದಾಗ, ಆತ ನಾನು ಮನೆಯಲ್ಲಿದ್ದೆ ಎಂದು ಹೇಳಿದನು. ಆದರೆ, ಆತ ಆ ರಾತ್ರಿ ಮನೆಯಲ್ಲಿರಲಿಲ್ಲ ಎಂದು ಆತನ ಪತ್ನಿಯಿಂದ ಗೊತ್ತಾಯಿತು. ಮಾಹಿತಿ ಕಲೆ ಹಾಕುವ ನೆಪದಲ್ಲಿ ಆತನನ್ನು ವಿಶ್ವಾಸಕ್ಕೆ ತೆಗೆದುಕೊಂಡ ಪೊಲೀಸರು ಉಪ್ಪಿನಂಗಡಿ ಹೊಟೇಲ್‌ನಲ್ಲಿ ಅವನಿಗೆ ಊಟ ಮಾಡಿಸಿ ಮಂಗಳೂರಿಗೆ ಕರೆದುಕೊಂಡು ಬಂದರು. ದಾರಿ ಮಧ್ಯೆ ಆತನಿಗೆ ಘಟನೆ ನಡೆದ ದಿನ ನೀನು ಎಲ್ಲಿದ್ದಿ ಎಂದು ಹೇಳುವಂತೆ ಪೊಲೀಸರು ಒತ್ತಡ ಹೇರಿದರು. ಕೊನೆಗೆ ಪ್ರವೀಣ್‌ ವಾಸ್ತವವನ್ನು ಬಾಯ್ಬಿಟ್ಟಿದ್ದಾನೆ. ಮಂಗಳೂರು ಗ್ರಾಮಾಂತರ ಠಾಣೆಗೆ ಬರುವಷ್ಟರಲ್ಲಿ ನಾನೇ ಕೃತ್ಯವನ್ನು ಎಸಗಿರುವುದಾಗಿ ಪ್ರವೀಣ್ ಹೇಳಿದನು.

ಪ್ರವೀಣ್ ಕೃತ್ಯ ಎಸಗಿದ್ದೇಕೆ?

ವೃತ್ತಿಯಲ್ಲಿ ಟೈಲರ್ ಆಗಿದ್ದ ಪ್ರವೀಣ್, ಜೂಜಾಟ, ಸಿಂಗಲ್ ನಂಬರ್ ಲಾಟರಿ ಬಲೆಯಲ್ಲಿ ಸಿಲುಕಿದ್ದ. ಸಿಕ್ಕಾ ಪಟ್ಟೆ ಸಾಲ ಮಾಡಿಕೊಂಡಿದ್ದ ಪ್ರವೀಣ್, ಅಪ್ಪಿ ಶೇರಿಗಾರ್ತಿ ಮನೆಗೆ ಪದೇ ಪದೇ ಹೋಗಿ ಬರುತ್ತಿದ್ದ. ಶೇರಿಗಾರ್ತಿ ಮನೆಯಲ್ಲಿ ಟಿಫಿನ್ ಬಾಕ್ಸ್ ನಲ್ಲಿ ಚಿನ್ನಾಭರಣಗಳನ್ನು ಇಟ್ಟಿರುವುದು ಪ್ರವೀಣ್‌ಗೆ ತಿಳಿದಿತ್ತು. ಕೃತ್ಯಕ್ಕೆ ಒಂದು ವಾರದ ಮೊದಲೇ ತಂತ್ರ ರೂಪಿಸಿದ್ದ ಪ್ರವೀಣ್‌, ಅಪ್ಪಿ ಶೇರಿಗಾರ್ತಿ ಮತ್ತು ಮನೆಮಂದಿ ನಿದ್ರೆಯಲ್ಲಿದ್ದಾಗ ಅವರನ್ನು ಕೊಲೆ ಮಾಡಿ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾನೆ.

ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಪ್ರವೀಣ್!

ಅಪ್ಪಿ ಶೇರಿಗಾರ್ತಿ ಮತ್ತು ಕುಟುಂಬಸ್ಥರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರವೀಣ್ ನನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಿದ್ದರು. 1997ರಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆತರುವಾಗ ಪ್ರವೀಣ್ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ. ಜೈಲು ಪೊಲೀಸರು ಆರಂಭದಲ್ಲಿ ಪ್ರವೀಣ್ ಮಂಗಳೂರು ಬಳಿ ಪರಾರಿಯಾದ ಎಂದು ಸುಳ್ಳು ಹೇಳಿದರು, ಆದರೆ ಆತ ಧಾರವಾಡದಲ್ಲೇ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಎನ್ನುವುದು ಆ ಬಳಿಕ ಬಯಲಾಯಿತು.

ಈ ಬೆಳವಣಿಗೆಯಿಂದ ನೊಂದುಕೊಂಡ ಅಪ್ಪಿ ಶೇರಿಗಾರ್ತಿ ಕುಟುಂಬ, ಪೊಲೀಸರ ಮೇಲೆ ಒತ್ತಡ ಹೇರಿದೆ. ಪ್ರವೀಣ್‌ ಬಗ್ಗೆ ಸುಳಿವು ಸಿಗದ ಕಾರಣ, ಪ್ರವೀಣ್‌ ಕುರಿತು ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದೆ.

ಈ ವೇಳೆ ಪೊಲೀಸರಿಗೆ ಹಲವರು ಮಾಹಿತಿ ನೀಡಿದರು. ಆದರೆ ಅದೆಲ್ಲಾ ಸುಳ್ಳಾಗಿತ್ತು. ಒಂದು ದಿನ ವ್ಯಕ್ತಿಯೋರ್ವ ಪೊಲೀಸರಿಗೆ ದೂರವಾಣಿ ಕರೆ ಮಾಡಿ, ನನಗೆ ಪ್ರವೀಣ್‌ ಬಗ್ಗೆ ಮಾಹಿತಿ ತಿಳಿದಿರುವುದಾಗಿ ಹೇಳಿದ. ಆದರೆ ಆತ ನನಗೆ ಪೊಲೀಸರು ಘೋಷಿಸಿದ ನಗದು ಮೊತ್ತಾ ಸಿಗುವ ಬಗ್ಗೆ ಖಚಿತವಾಗಿ ಹೇಳಬೇಕು ಎಂದು ಹೇಳಿದ, ಆತನಿಗೆ ಪೊಲೀಸರ ಮೇಲೆ ನಂಬಿಕೆ ಇರಲಿಲ್ಲ. ಆ ಬಳಿಕ ಎಸ್ಪಿ ಕಮಲ್ ಪಂತ್ ವೈಯಕ್ತಿಕವಾಗಿ ಮಾತನಾಡಿ, ಮಾಹಿತಿ ಸರಿಯಾಗಿದ್ದರೆ ಬಹುಮಾನ ನೀಡುವುದಾಗಿ ಭರವಸೆ ನೀಡಿದ ಬಳಿಕ ಆತ ಕಾರವಾರದ ಬಳಿ ಪ್ರವೀಣ್ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದನು.

ಪ್ರವೀಣ್ ತಪ್ಪಿಸಿಕೊಂಡ ಸುಮಾರು ಎರಡು ವರ್ಷಗಳ ನಂತರ ಅಂದರೆ 1999ರಲ್ಲಿ ಕಾರವಾರದ ಬಳಿ ಪ್ರವೀಣ್ ವಾಸಿಸುತ್ತಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ದೊರೆಯಿತು. ಅದರಂತೆ, ಉತ್ತರಕನ್ನಡ ಜಿಲ್ಲೆಯ ಕಾರವಾರ ಸಮೀಪದ ಗ್ರಾಮವೊಂದರಲ್ಲಿ ಪ್ರವೀಣ್‌ನನ್ನು ಪೊಲೀಸರು ಬಂಧಿಸಿದರು.

ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರವೀಣ್ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದರು. 2002ರ ಫೆಬ್ರವರಿ 4ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಪ್ರವೀಣ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿದರು. ಪ್ರವೀಣ್ ಮರಣ ದಂಡನೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ. ವಿಚಾರಣಾ ನ್ಯಾಯಾಲಯ ನೀಡಿದ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. 2013ರಲ್ಲಿ ಭಾರತದ ರಾಷ್ಟ್ರಪತಿಗಳು ಪ್ರವೀಣ್ ಸಲ್ಲಿಸಿದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರು. ಆದರೆ, 2014ರಲ್ಲಿ ಸುಪ್ರೀಂ ಕೋರ್ಟ್ ಕ್ಷಮಾದಾನ ಅರ್ಜಿಯ ವಿಲೇವಾರಿ ವಿಳಂಬದ ಆಧಾರದ ಮೇಲೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. 2023ರಲ್ಲಿ ಉತ್ತಮ ನಡತೆಗಾಗಿ ಪ್ರವೀಣ್ ಕುಮಾರ್ ನನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಪ್ರವೀಣ್ ಬಿಡುಗಡೆಯನ್ನು ವಿರೋಧಿಸಿ ಶೇರಿಗಾರ್ತಿ ಕುಟುಂಬವು ಆಗಿನ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಇತರರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದರು. ಆದರೂ, ಆತನ ಬಿಡುಗಡೆಯಾಯಿತು. ಪ್ರವೀಣ್ ಕುಟುಂಬದ ಸದಸ್ಯರು ಆತ ತಮ್ಮ ಗ್ರಾಮಕ್ಕೆ ಹಿಂದಿರುಗುವುದನ್ನು ವಿರೋಧಿಸಿದರು. ಇದೀಗ, ಪ್ರವೀಣ್ ಈಗ ಬೆಳಗಾವಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದಾನೆ.

ಸೌಜನ್ಯ : indianexpress

share
ವಾರ್ತಾಭಾರತಿ
ವಾರ್ತಾಭಾರತಿ
Next Story
X