Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆರ್ಥಿಕ ಇಲಾಖೆಯ ಆಕ್ಷೇಪವನ್ನು...

ಆರ್ಥಿಕ ಇಲಾಖೆಯ ಆಕ್ಷೇಪವನ್ನು ನಿರ್ಲಕ್ಷಿಸಿ 912 ರೂ. ಹೆಚ್ಚಿನ ದರದಲ್ಲಿ ಪಿಪಿಇ ಕಿಟ್ ಖರೀದಿ: ತನಿಖಾ ವರದಿಯಲ್ಲಿ ಬಹಿರಂಗ

ಜಿ.ಮಹಾಂತೇಶ್ಜಿ.ಮಹಾಂತೇಶ್12 Sept 2024 1:22 PM IST
share
ಆರ್ಥಿಕ ಇಲಾಖೆಯ ಆಕ್ಷೇಪವನ್ನು ನಿರ್ಲಕ್ಷಿಸಿ 912 ರೂ. ಹೆಚ್ಚಿನ ದರದಲ್ಲಿ ಪಿಪಿಇ ಕಿಟ್ ಖರೀದಿ: ತನಿಖಾ ವರದಿಯಲ್ಲಿ ಬಹಿರಂಗ

ಬೆಂಗಳೂರು: ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಪಿಪಿಇ ಕಿಟ್ ಗಳ ದರಗಳು ಕಡಿಮೆ ಇದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯು ಕಿಟ್ ಒಂದಕ್ಕೆ 912 ರೂ. ಹೆಚ್ಚಿನ ದರದಲ್ಲಿ ಖರೀದಿಸಿ ಸಂಗ್ರಹಿಸಿತ್ತು. ಈ ಕುರಿತು ಆರ್ಥಿಕ ಇಲಾಖೆಯೂ ಸಹ ಇಲಾಖೆಯ ದರಕ್ಕೆ ಅಸಮ್ಮತಿ ವ್ಯಕ್ತಪಡಿಸಿತ್ತು. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿನ ಅಧಿಕಾರಿಗಳ ನೇತೃತ್ವದ ಸಮಿತಿಯು ಸರಕಾರಕ್ಕೆ 2023ರ ಡಿಸೆಂಬರ್ನಲ್ಲೇ ಸಲ್ಲಿಸಿರುವ ತನಿಖಾ ವರದಿಯು ಪಿಪಿಇ. ಆಗಳನೋದಿದರ ಆರ್ಥಿಕತೆಯು ವರದಯ ಆಕ್ಷೇಪವನ್ನೂ ಬಹಿರಂಗಗೊಳಿಸಿದೆ. ತನಿಖಾ ವರದಿಯ ಪ್ರತಿಯು 'the-file.in'ಗೆ ಲಭ್ಯವಾಗಿದೆ.

ಅಲ್ಲದೆ ಕೆಟಿಪಿಪಿ ಕಾಯ್ದೆಗಳ ಅನ್ವಯ ದರ ಒಪ್ಪಂದ (Rate Contract) ಅವಕಾಶವಿಲ್ಲ. ಆದರೂ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಪಿಪಿಐ ಕಿಟ್ ಗಳನ್ನು ದರ ಒಪ್ಪಂದದಂತೆ ಖರೀದಿಸಿತ್ತು. ಇದನ್ನು ಆರ್ಥಿಕ ಇಲಾಖೆಯೂ ಆಕ್ಷೇಪಿಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇಲಾಖೆಯ ದರವೇ ಅಸಮಂಜಸ ಪಿಪಿಇ ಕಿಟ್ ಖರೀದಿ ಸಂಬಂಧ ಭಾರತ ಸರಕಾರದಿಂದ ಒಪ್ಪಂದದ ಅವಧಿಯನ್ನು 6 ತಿಂಗಳ ಅವಧಿಗೆ ವಿಸ್ತರಿಸಲು ನೀಡಿದ್ದ ಅಧಿಕೃತ ಜ್ಞಾಪನವನ್ನೇ (OM NO 18/4/2020 DATED 13.05.2020) ತಪ್ಪಾಗಿ ಅರ್ಥೈಸಿಕೊಂಡಿತ್ತು. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಪಿಪಿಇ ಕಿಟ್ಗಳ ದರಗಳು ಕಡಿಮೆ ಇದ್ದು ಕೆಎಸ್ ಎಂಎಸ್ಸಿಎಲ್ ಪ್ರತೀ ಕಿಟ್ 400 ರೂ. ನಿಗದಿಪಡಿಸಿದ್ದರೂ ಸಹ 1,312.5 ರೂ.ಗಳ ವೆಚ್ಚದಲ್ಲಿ ಪ್ರತಿ ಪಿಪಿಇ ಕಿಟ್ ಅನ್ನು ಖರೀದಿಸಿತ್ತು.

ಕೋವಿಡ್-19 ಮುಂದುವರಿದ ದಿನಗಳಲ್ಲಿ ಪಿಪಿಇ ಕಿಟ್ ದರಗಳು ಇಳಿಕೆಯಾಗಿದ್ದವು. ಇಳಿಕೆಯಾದ ದರದಂತೆಯೇ ಕೆಎಸ್ ಎಂಎಸ್ಸಿಎಲ್ ಕೂಡ ಖರೀದಿಸಿತ್ತು. ಆದರೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಪ್ರತೀ ಕಿಟ್ ಗೆ 1,312 ರೂ.ನಂತೆ ಖರೀದಿಸಿದ್ದು ಸಮಂಜಸವಾಗಿರುವುದಿಲ್ಲ ಎಂದು ಆರ್ಥಿಕ ಇಲಾಖೆಯು 2022ರ ಮೇ 5ರಂದೇ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂಬುದು ಟಿಪ್ಪಣಿಯಿಂದ ಗೊತ್ತಾಗಿದೆ.

ದರ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಸರಕಾರವು 2020ರ ಮೇ 13ರಂದು ಹೊರಡಿಸಿರುವ ಸುತ್ತೋಲೆಯಂತೆ ತಿಂಗಳಿಗೆ ವಿಸ್ತರಿಸಲು ಮಾತ್ರ ಅವಕಾಶವಿದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಪಿಪಿಇ ಕಿಟ್ ಗಳ ಸರಬರಾಜಿಗೆ ಅವಧಿ ವಿಸ್ತರಿಸಲು ಅವಕಾಶವಿದೆಯೇ ಹೊರತು ಹೆಚ್ಚುವರಿ ಪ್ರಮಾಣದ ಸಾಮಗ್ರಿಗಳನ್ನು ಖರೀದಿಸಲು ದರ ಒಪ್ಪಂದ ಪ್ರಕಾರ ಅವಕಾಶವಿಲ್ಲ. ಆದರೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಇದನ್ನು ಉಲ್ಲಂಘಿಸಿ ಖರೀದಿಸಿತ್ತು. ಮತ್ತು ಟೆಂಡರ್ ದಾಖಲೆಗಳಲ್ಲಿಯೂ ಸಹ ಈ ವಿಷಯದ ಕುರಿತು ಪ್ರಸ್ತಾವವನ್ನೇ ಮಾಡಿಲ್ಲ ಎಂಬ ಅಂಶವನ್ನು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

ಕೋವಿಡ್ ಮೊದಲನೇ ಅಲೆಯ ಸಮಯದಲ್ಲಿ ನೀಡಲಾಗಿದ್ದ ಆಡಳಿತಾತ್ಮಕ ಅನುಮೋದನೆಯನ್ನೇ ಆಧಾರವಾಗಿರಿಸಿ ಮತ್ತು ಉಲ್ಲೇಖಿಸಿ ಎರಡನೇ ಅಲೆಯಲ್ಲಿಯೂ ಇದೇ ದರದಲ್ಲಿ ಎಲ್ಲಾ ಪಿಪಿಇ ಕಿಟ್ ಗಳ ಸರಬರಾಜಿಗೆ ಆದೇಶ ನೀಡಲಾಗಿದೆ. ಇದಕ್ಕೆ ಯಾವುದೇ ಆಡಳಿತಾತ್ಮಕ ಅನುಮೋದನೆ ಇರಲಿಲ್ಲ. ಪತ್ಯೇಕವಾಗಿ ಟೆಂಡರ್ ಸಹ ಕರೆದಿರಲಿಲ್ಲ. 2020ರಲ್ಲಿ ಹಳೆಯ ಟೆಂಡರ್ ನಂತೆ ಅಂತಿಮಗೊಳಿಸಿದ್ದ ಮೊತ್ತಕ್ಕೆ ಸರಬರಾಜು ಆದೇಶ ನೀಡಲಾಗಿತ್ತು.

2021ರಲ್ಲಿ ಬೆಲೆ ಕುಸಿತದ ಅಂಶವನ್ನು ಪರಿಗಣಿಸಿರಲಿಲ್ಲ ಎಂದು ತನಿಖಾ ಸಮಿತಿಯು ವರದಿಯಲ್ಲಿ ವಿವರಿಸಿತ್ತು. ಹಾಗೆಯೇ ಕೆಟಿಪಿಪಿ ಕಾಯ್ದೆ ಅಡಿಯಲ್ಲಿ ಟೆಂಡರ್ ಪ್ರಮಾಣದಲ್ಲಿ ಶೇ.25ರಷ್ಟು ಮಾತ್ರ ಹೆಚ್ಚಿನ ಪ್ರಮಾಣ ಖರೀದಿಸಬಹುದು. 2,59,263 ಪಿಪಿಇ ಕಿಟ್ ಗಳಿಗೆ ಮಾತ್ರ ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ಇತ್ತು. ಇದಕ್ಕೆ ಟೆಂಡರ್ ಕೂಡ ಆಹ್ವಾನಿಸಿತ್ತು. ಆದರೆ ಒಟ್ಟು 19,30,613 ಸಂಖ್ಯೆಯ ಪಿಪಿಇ ಕಿಟ್ಗಳ ಖರೀದಿಗೆ ಆದೇಶ ನೀಡಲಾಗಿತ್ತು. ಅಂದರೆ ಒಟ್ಟಾರೆ 16,71,350 ಪಿಪಿಇ ಕಿಟ್ ಗಳಿಗೆ ಹೆಚ್ಚಾಗಿ ಸರಬರಾಜು ಆದೇಶ ನೀಡಲಾಗಿತ್ತು. ಇದು ಶೇ. 644.65ಷ್ಟು ಹೆಚ್ಚಾಗಿತ್ತು. ಈ ಮೂಲಕ ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿರುವುದನ್ನು ಸ್ಮರಿಸಬಹುದು.

share
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
X