Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಟ್ಟರೆ...

ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಟ್ಟರೆ ತಪ್ಪೇನು?: ಸತೀಶ್ ಜಾರಕಿಹೊಳಿ

ವಾರ್ತಾಭಾರತಿ ವಿಶೇಷ ಸಂದರ್ಶನ

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ29 Jan 2025 12:43 PM IST
share
ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಟ್ಟರೆ ತಪ್ಪೇನು?: ಸತೀಶ್ ಜಾರಕಿಹೊಳಿ

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತಿತರ ಚರ್ಚೆ ಯಾಗುತ್ತಿದೆ. ಇದೇ ವೇಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು 2028ಕ್ಕೆ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪದೇ ಪದೇ ಹೇಳುತ್ತಿದ್ದಾರೆ. ಅದಕ್ಕಾಗಿ ಅವರು ಈಗಿನಿಂದಲೇ ಏಕೆ ಪ್ರತಿಪಾದಿಸುತ್ತಿದ್ದಾರೆ? ಸಿದ್ದರಾಮಯ್ಯ ನಂತರ ಅವರು ಅಹಿಂದ ವರ್ಗಗಳ ನಾಯಕ ಆಗಲು ಪ್ರಯತ್ನಿಸುತ್ತಿದ್ದಾರಾ? ಇವೆಲ್ಲದರ ಬಗ್ಗೆ ಸ್ವತಃ ಸತೀಶ್ ಜಾರಕಿಹೊಳಿ ‘ವಾರ್ತಾಭಾರತಿ’ ಜೊತೆ ಮಾತನಾಡಿದ್ದಾರೆ.

► ಪ್ರಶ್ನೆ: ಪದೇ ಪದೇ 2028ಕ್ಕೆ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುತ್ತಿದ್ದೀರಿ? 2028ಕ್ಕೆ ಎನ್ನುವುದಾದರೆ ಈಗಿನಿಂದಲೇ ಹಕ್ಕು ಪ್ರತಿಪಾದನೆ ಮಾಡುತ್ತಿರುವುದೇಕೆ?

ಉತ್ತರ: ನಾನೊಬ್ಬನೇ ಕೇಳುತ್ತಿಲ್ಲ. ನಮ್ಮ ಪಕ್ಷದಲ್ಲಿ ಬಹಳಷ್ಟು ಜನ ತಾನು ಮುಖ್ಯಮಂತ್ರಿ ಆಗಬೇಕು ಎಂದು ಕೇಳುತ್ತಿದ್ದಾರೆ. ಅದೇ ರೀತಿ ನಾನು ನಾನು ಮಾಡಿದ್ದೇನೆ ಅಷ್ಟೇ. ಮುಖ್ಯಮಂತ್ರಿ ಆಗುವ ಆಸೆ ಪಟ್ಟರೆ ತಪ್ಪೇನು?

► ಪ್ರಶ್ನೆ: ನಿಮ್ಮದು ಮುಖ್ಯಮಂತ್ರಿ ಆಗಬೇಕು ಎನ್ನುವ ಗುರಿಯಾ? ಅಥವಾ ಆಸೆಯಾ?

ಉತ್ತರ: ಆಸೆ.

► ಪ್ರಶ್ನೆ: ಅವಸರ ಮಾಡುತ್ತಿದ್ದೀರಿ ಅನ್ಸುತ್ತೆ.

ಉತ್ತರ: ಅವಸರ ಏನಿಲ್ಲ. ನಾನು ಈ ಅವಧಿಗೆ ಕೇಳುತ್ತಿಲ್ಲ. ಮುಂದಿನ ಅವಧಿಗೆ ಕೇಳಬೇಕು ಎನಿಸಿದೆ, ಕೇಳುತ್ತಿದ್ದೇನೆ.

► ಪ್ರಶ್ನೆ: ಮುಖ್ಯಮಂತ್ರಿಯಾಗಲು ಏನು ತಯಾರಿ ಮಾಡುತ್ತಿದ್ದೀರಿ?

ಉತ್ತರ: ತಯಾರಿ ಏನಿಲ್ಲ. ನನಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇದ್ದರೂ ಅಂತಿಮವಾಗಿ ಪಕ್ಷ, ಹೈಕಮಾಂಡ್ ಮತ್ತು ಶಾಸಕರು ಒಪ್ಪಿದಾಗ ಮಾತ್ರ ಅದು ಸಾಧ್ಯವಾಗುವುದು.

► ಪ್ರಶ್ನೆ: ನಾನು ಕೂಡ ಮುಖ್ಯಮಂತ್ರಿಯ ಹುದ್ದೆಗೆ ದಾವೇದಾರ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಲ್ವಾ? ಜನಾಭಿಪ್ರಾಯ ನಿಮ್ಮ ಪರವಾಗಿದ್ದರೆ ತಾನೇ ಹೈಕಮಾಂಡ್ ನಿಮ್ಮನ್ನು ಪರಿಗಣಿಸುವುದು?

ಉತ್ತರ: ಅಂತಿಮವಾಗಿ ಪಕ್ಷ. ಬಹಳ ಸಲ ಪಕ್ಷನೇ ತೀರ್ಮಾನ ಕೈಗೊಳ್ಳುತ್ತದೆ. ನೀವು ಹೇಳಿದಂತೆ ಜನಪ್ರಿಯತೆ ಕೂಡ ಬೇಕಾಗುತ್ತದೆ. ನೋಡೋಣ ಸಂದರ್ಭ ಬಂದಾಗ.

► ಪ್ರಶ್ನೆ: ನೀವು ಮಾನವ ಬಂಧುತ್ವ ಎನ್ನುವ ವೇದಿಕೆ ಮೂಲಕ ಹಲವಾರು ಕಾರ್ಯಕ್ರಮ ಮಾಡುತ್ತಿದ್ದೀರಿ. ಅದರ ಮೂಲಕ ಜನಾಭಿಪ್ರಾಯ ರೂಪಿಸಲು ಪ್ರಯತ್ನ ಮಾಡುತ್ತಿದ್ದೀರಾ?

ಉತ್ತರ: 30 ವರ್ಷದಿಂದ, ಅಂದರೆ ರಾಜಕೀಯಕ್ಕೆ ಬರುವ ಮುನ್ನವೇ ಮಾನವ ಬಂಧುತ್ವ ವೇದಿಕೆ ಮೂಲಕ ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿದ್ದೇನೆ. ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ.

► ಪ್ರಶ್ನೆ: ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ‘ಸಿದ್ದರಾಮಯ್ಯೋತ್ಸವ’ ಮಾಡಿ ಪರೋಕ್ಷವಾಗಿ ಹೈಕಮಾಂಡಿಗೆ ನಾನೇ ಜನಪ್ರಿಯ ನಾಯಕ ಎನ್ನುವ ಸಂದೇಶ ಕಳುಹಿಸಿದ್ದರು. ನೀವೂ ಆ ರೀತಿಯ ಕಾರ್ಯಕ್ರಮ ಮಾಡುತ್ತೀರಾ?

ಉತ್ತರ: ಜನಪ್ರಿಯ ಆಗಲು ಬಹಳಷ್ಟು ದಾರಿಗಳಿವೆ. ಆಡಳಿತ ನಡೆಸುವುದು, ಜನರ ಜೊತೆ ಬೆರೆಯುವುದು, ಕಾರ್ಯಕರ್ತರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳುವುದು ಸೇರಿದಂತೆ ನಾನಾ ದಾರಿಗಳಿವೆ. ಆ ಮೂಲಕ ಜನಪ್ರಿಯ ಆಗಬಹುದು.

► ಪ್ರಶ್ನೆ: ಹಾಗೆ ನೋಡಿದರೆ ಈವರೆಗೆ ನಿಮ್ಮ ಇಲಾಖೆಗಳಲ್ಲಿ ಆ ರೀತಿ ಛಾಪು ಮೂಡಿಸಿದ ಕಾರ್ಯಕ್ರಮಗಳೇ ಕಾಣಿಸುತ್ತಿಲ್ಲ.

ಉತ್ತರ: ನಿಮಗೆ ಕಾಣಿಸಿಲ್ಲ. ಜನರಿಗೆ ಕಾಣಿಸಿದೆ. ಬೀದರ್ ನಿಂದ ಚಾಮರಾಜನಗರದವರೆಗೆ ಜನ ಟೀ ಅಂಗಡಿ ಮುಂದೆ ಕುಳಿತು ನನ್ನ ಇಲಾಖೆ ಬಗ್ಗೆ ಕೂತು ಮಾತನಾಡುತ್ತಾರೆ. ಅಷ್ಟು ಸಾಕು ನನಗೆ ಸರ್ಟಿಫಿಕೇಟ್.

► ಪ್ರಶ್ನೆ: ಕಾಂಗ್ರೆಸ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷಗಾದಿ ವಹಿಸಿಕೊಂಡು ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಯತ್ನ ಮಾಡುವುದು ಸಹಜ. ನೀವೂ ಆ ರೀತಿ ಮಾಡುತ್ತಿದ್ದೀರಾ?

ಉತ್ತರ: ನಾನು ಕೆಪಿಸಿಸಿ ಅಧ್ಯಕ್ಷ ಆಗಲು ಪ್ರಯತ್ನ ಪಡುತ್ತಿಲ್ಲ. ಯಾವಾಗಲೂ ಅದರ ಬಗ್ಗೆ ಮಾತನಾಡಿಲ್ಲ. ನನಗೂ ಅದಕ್ಕೂ ಸಂಬಂಧ ಇಲ್ಲವೇ ಇಲ್ಲ.

► ಪ್ರಶ್ನೆ: ಮುಖ್ಯಮಂತ್ರಿ ಆಗಬೇಕು ಎಂದು ಕೇಳುತ್ತೀರಿ. ಪಕ್ಷದ ಜವಾಬ್ದಾರಿ ಮಾತ್ರ ಬೇಡವಾ?

ಉತ್ತರ: ಅಂತಹ ಸಂದರ್ಭ ಬಂದರೆ ಅದರ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ. ಈಗ ಅದರ ಬಗ್ಗೆ ಮಾತನಾಡುವುದು ಸರಿ ಅಲ್ಲ. ಕಾಲ, ಸನ್ನಿವೇಶ ಬರಲಿ, ನೋಡೋಣ.

►ಪ್ರಶ್ನೆ: ಸಿದ್ದರಾಮಯ್ಯ ಇದು ನನ್ನ ಕೊನೆ ಅವಧಿ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಅಹಿಂದ ವರ್ಗಗಳ ಮತಬ್ಯಾಂಕ್ ಹೊಂದಿದೆ. ಸಿದ್ದರಾಮಯ್ಯ ನಿರ್ಗಮಿಸುತ್ತಿರುವ ಹೊತ್ತಿನಲ್ಲಿ ಮುಂದಿನ ಅಹಿಂದ ನಾಯಕ ಯಾರು?

ಉತ್ತರ: ಅದನ್ನು ಜನ ತೀರ್ಮಾನ ಮಾಡಬೇಕು. ಅಹಿಂದ ನಾಯಕ ಎಂದು ನನಗೆ ನಾನೇ ಸರ್ಟಿಫಿಕೇಟ್ ಕೊಟ್ಟುಕೊಳ್ಳಲು ಸಾಧ್ಯವಿಲ್ಲ. ಇವರು ಸಮರ್ಥರಿದ್ದಾರೆ. ನಾಯಕತ್ವ ವಹಿಸಲು ಯೋಗ್ಯರಿದ್ದಾರೆ ಎಂದು ಜನ ಸರ್ಟಿಫಿಕೇಟ್ ಕೊಡಬೇಕು.

► ಪ್ರಶ್ನೆ: ಆ ನಿಟ್ಟಿನಲ್ಲಿ ನೀವೇನಾದರೂ ಪ್ರಯತ್ನ ಮಾಡುತ್ತಿದ್ದೀರಾ?

ಉತ್ತರ: ಮಾಡುತ್ತಿದ್ದೇನೆ. ಇಲಾಖೆ ನಡೆಸುವ ರೀತಿ ಮತ್ತು ಕಾರ್ಯವೈಖರಿ ಮೂಲಕ ಮಾಡುತ್ತಿದ್ದೇನೆ. ಪಕ್ಷ ನನಗೆ ಕೊಟ್ಟ ಜವಾಬ್ದಾರಿ, ಚುನಾವಣೆ, ಸಂಘಟನೆ ಮೂಲಕ ಸಾಧನೆ ಮತ್ತು ಸಾಮರ್ಥ್ಯವನ್ನು ತೋರಿಸುತ್ತಿದ್ದೇನೆ.

<ಪ್ರಶ್ನೆ: ಇತ್ತೀಚೆಗೆ ದೇಶದಲ್ಲಿ ಲಿಂಚಿಗ್ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಾನಾ ರೀತಿಯ ದಾಳಿಗಳಾಗುತ್ತಿವೆ. ನೀವು ಯಾವತ್ತೂ ಮಾತನಾಡಿಲ್ಲ. ಅಲ್ಪಸಂಖ್ಯಾತರ ಜೊತೆ ನಿಲ್ಲುತ್ತೇನೆ ಎಂಬ ಸಂದೇಶ ಕೊಟ್ಟಿಲ್ಲ. ಅವರು ಏಕೆ ನಿಮ್ಮನ್ನು ಬೆಂಬಲಿಸಬೇಕು?

ಉತ್ತರ: ಶಿಗ್ಗಾಂವಿಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಇಡೀ ದೇಶಕ್ಕೆ ಸಂದೇಶ ಕೊಟ್ಟಿದ್ದೇನೆ. ಬರೀ ಭಾಷಣ ಮಾಡುವುದಲ್ಲ. ಇಂಥ ಸಂದರ್ಭದಲ್ಲಿ ಅಲ್ಪಸಂಖ್ಯಾತರನ್ನು ಗೆಲ್ಲಿಸುವುದು ಬಹಳ ಮುಖ್ಯ. ನಾನು ಆ ಸಂದೇಶವನ್ನು ಕೊಟ್ಟಿದ್ದೇನೆ.

► ಪ್ರಶ್ನೆ: ಸಿದ್ದರಾಮಯ್ಯ ನಂತರ ಹಿಂದುಳಿದ ವರ್ಗಗಳ ಮತಗಳು ಚದುರಿಹೋಗುವ ಸಾಧ್ಯತೆ ಇದೆ. ಹಿಂದುಳಿದ ವರ್ಗಗಳನ್ನು ಕಾಂಗ್ರೆಸ್ ಪಕ್ಷದಲ್ಲೇ ಉಳಿಸಿಕೊಳ್ಳಲು ಏನು ಯೋಜನೆ ಇದೆ.

ಉತ್ತರ: ಸಿದ್ದರಾಮಯ್ಯ ಚುನಾವಣೆಗೆ ನಿಲ್ಲದಿದ್ದರೂ ಇನ್ನೂ ಕನಿಷ್ಠ 10 ವರ್ಷ ರಾಜಕಾರಣದಲ್ಲಿ ಇರುತ್ತಾರೆ. ಮುಂದಿನ ನಾಯಕ ಉದಯಿಸುವವರೆಗೆ ಸಿದ್ದರಾಮಯ್ಯ ಸಂಘಟನೆ ಮತ್ತು ಪಕ್ಷದಲ್ಲಿ ಇದ್ದೇ ಇರುತ್ತಾರೆ.

► ಪ್ರಶ್ನೆ: ನಿಮ್ಮ ಯೋಜನೆ ಏನು?

ಉತ್ತರ: ಚುನಾವಣಾ ಸಂದರ್ಭದಲ್ಲಿ ಯಾವ ಸಮುದಾಯವನ್ನು ಹೇಗೆ ಸೆಳೆಯಬೇಕು ಎಂಬ ಬಗ್ಗೆ ನಿರ್ಧಾರ ಮಾಡಬೇಕಾಗುತ್ತದೆ.

► ಪ್ರಶ್ನೆ: ನೀವು ದಲಿತರ ಪರ ಮಾತನಾಡುವುದಿಲ್ಲ. ಒಳ ಮೀಸಲಾತಿ ಬಗ್ಗೆ ಮಾತನಾಡುವುದಿಲ್ಲ. ದಲಿತರು ನಿಮ್ಮನ್ನು ಏಕೆ ಬೆಂಬಲಿಸಬೇಕು?

ಉತ್ತರ: ನಾನು ಮಾತನಾಡುತ್ತಿಲ್ಲ ಎನ್ನುವುದೇ ಮುಖ್ಯವಲ್ಲ. ದಲಿತರ ಪರ ಕೆಲಸ ಮಾಡುತ್ತಿದ್ದೇನೆ. ಎಡ ಬಲ ಎನ್ನುವುದು ಇದ್ದದ್ದೇಯಾದರೂ ಎಲ್ಲರೂ ಬೆಂಬಲಿಸುತ್ತಾರೆ.

► ಪ್ರಶ್ನೆ: ಸೋಷಿಯಲ್ ಸ್ಟೇಟಸ್ ವಿಷಯ ಬಂದಾಗ ಪಾಳೇಗಾರರು-ನಾಯಕರು ಎನ್ನುತ್ತೀರಿ, ಮೀಸಲಾತಿ ವಿಚಾರ ಬಂದಾಗ ದಲಿತರು ಎನ್ನುತ್ತೀರಿ.

ಉತ್ತರ: ಹಾಗೇನಿಲ್ಲ.

► ಪ್ರಶ್ನೆ: ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಸೇರಿದಂತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಯಾವ ವರ್ಗದ ಬಗ್ಗೆನೂ ನೀವು ಮಾತನಾಡುವುದೇ ಇಲ್ಲವಲ್ಲಾ?

ಉತ್ತರ: ಬರೀ ಭಾಷಣ ಮಾಡುವುದೊಂದೇ ಜನರನ್ನು ಸೆಳೆಯಲು ಇರುವ ದಾರಿಯಲ್ಲ. ನುಡಿಯಷ್ಟೇ ನಡೆ ಕೂಡ ಮುಖ್ಯ. ನಮ್ಮ ನಡತೆಯ ಮುಖಾಂತರ, ನಾವು ಜನರಿಗೆ ಎಷ್ಟು ಸಮಯ ಕೊಡುತ್ತೇವೆ, ಕಾರ್ಯಕರ್ತರನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎನ್ನುವ ಮೂಲಕ ಎಲ್ಲರ ಮನ ಗೆಲ್ಲಲು ಸಾಧ್ಯ. ನೋಡಿ, ಈವರೆಗೆ ನಾನು ಯಾರನ್ನೂ ಬೈದಿಲ್ಲ. (ನೀವೂ ನಕ್ಕೂ ಇಲ್ಲ ಬಿಡಿ ಎಂದಾಗ ನಗು) ಭಾಷಣ ಮಾಡುವುದಕ್ಕಿಂತ ಇದು ಸಾವಿರ ಪಾಲು ಪರಿಣಾಮಕಾರಿ. ನವೀನ್ ಪಟ್ನಾಯಕ್, ಡಾ. ಮನಮೋಹನ್ ಸಿಂಗ್, ಮನೋಹರ್ ಪಾರಿಕ್ಕರ್ ಮಾತನಾಡುತ್ತಿದ್ದಾರಾ? ಜನರ ವಿಶ್ವಾಸ ಗಳಿಸಿರಲಿಲ್ಲವಾ?

► ಪ್ರಶ್ನೆ: ಅಹಿಂದ ವರ್ಗಗಳಿಗೆ ಅನುಕೂಲವಾಗಲಿ ಎಂದು ಜಾತಿ ಜನಗಣತಿ ಬಗ್ಗೆ ಕೂಡ ಮಾತನಾಡಿಲ್ಲ?

ಉತ್ತರ: ನಾವು ಜಾತಿ ಜನಗಣತಿ ವರದಿಯನ್ನು ಜಾರಿ ಮಾಡೇ ಮಾಡುತ್ತೇವೆ. ನಮ್ಮ ಪ್ರಣಾಳಿಕೆಯಲ್ಲೇ ಹೇಳಿದ್ದೇವೆ.

► ಪ್ರಶ್ನೆ: ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?

ಉತ್ತರ: ನಮ್ಮದು ರಾಷ್ಟ್ರೀಯ ಪಕ್ಷ, ಕೆಲವು ಕಡೆ ಬೇಡ ಎಂದು ಹೇಳುತ್ತಿದ್ದಾರೆ. ನಾವು ಬೇಕು ಎಂದು ಹೇಳುತ್ತಿದ್ದೇವೆ. ಎಲ್ಲವನ್ನೂ ಚರ್ಚೆ ಮಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾರಿ ಮಾಡಬೇಕಾಗುತ್ತದೆ. ಪಕ್ಷಕ್ಕೆ ತೊಂದರೆ ಆಗದಂತೆ ನಿರ್ಧರಿಸಬೇಕಾಗುತ್ತದೆ.

► ಪ್ರಶ್ನೆ: ಈಗ ಸೂಕ್ತ ಕಾಲ ಎನಿಸುತ್ತಿದೆ. ಆದರೂ ಜಾರಿ ಮಾಡುತ್ತಿಲ್ಲ. ಕಡೆಪಕ್ಷ ಸಂಪುಟಕ್ಕೆ ತೆಗೆದುಕೊಂಡು ಹೋಗಿ ಕೂಡಾ ಚರ್ಚೆ ಮಾಡುತ್ತಿಲ್ಲ.

ಉತ್ತರ: ಸಂಪುಟಕ್ಕೆ ಬಂದ ತಕ್ಷಣ ಜಾರಿ ಆಗುತ್ತೆ ಅಂತಾ ಅಲ್ಲ. ಬಹಳಷ್ಟು ಪ್ರಕ್ರಿಯೆಗಳಿವೆ.

► ಪ್ರಶ್ನೆ: ಮೇಲ್ಜಾತಿಯವರಿಗೆ ಹೆದರಿ ಹಿಂಜರಿಯುತ್ತಿದ್ದೀರಾ?

ಉತ್ತರ: ನಾವೇಕೆ ಹೆದರಬೇಕು? ನಾವೇನು ತಪ್ಪು ಮಾಡುತ್ತಿದ್ದೇವಾ?

► ಪ್ರಶ್ನೆ: ನಿಮ್ಮ ಮತ್ತು ಡಿ.ಕೆ. ಶಿವಕುಮಾರ್ ಸಂಬಂಧ ಚೆನ್ನಾಗಿಲ್ವಂತೆ?

ಉತ್ತರ: ಹಾಗೇನಿಲ್ಲ.

► ಪ್ರಶ್ನೆ: ಡಿಕೆಶಿ ಬೆಳಗಾವಿ ರಾಜಕಾರಣದಲ್ಲಿ ಮೂಗು ತೂರಿಸುತ್ತಾರೆ, ಅದರಿಂದ ನಿಮಗೆ ಅವರ ಮೇಲೆ ಕೋಪ ಎನ್ನುವ ಮಾತುಗಳಿವೆ.

ಉತ್ತರ: ಅದು ಬೆಳಗಾವಿ ಕಾಂಗ್ರೆಸ್ ಪಕ್ಷದ ಕಚೇರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ರ. ಕಚೇರಿ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಿದ್ದಾರೆ, ಎಲ್ಲರಿಗೂ ಅದರ ಕ್ರೆಡಿಟ್ ಹೋಗಬೇಕು ಎಂದು ಹೇಳಿದೆ. ಅದರ ಹೊರತು ಅವರ ಬಗ್ಗೆ ಬೇರೆ ಅಸಮಾಧಾನ ಇಲ್ಲ.

► ಪ್ರಶ್ನೆ: ನಿಮ್ಮದು ಮತ್ತು ಸಿದ್ದರಾಮಯ್ಯ ಅವರದು ಒಂಥರಾ ಲವ್ ಆ್ಯಂಡ್ ಹೇಟ್ ಸಂಬಂಧ? 2028ಕ್ಕೆ ಹೇಗಿರುತ್ತೆ?

ಉತ್ತರ: ಆಗಿನ ಸಮಯ ಸಂದರ್ಭ ಹೇಗಿರುತ್ತೋ ಏನೋ? ಆದರೆ ನಮ್ಮ ಪಕ್ಷದಲ್ಲಿ ಎಲ್ಲರೂ ಮತ್ತೆ ಅಧಿಕಾರಕ್ಕೆ ಬರಬೇಕು ಎಂದುಕೊಂಡಿದ್ದೇವೆ. ಅದಕ್ಕಾಗಿ ಕೆಲಸ ಮಾಡುತ್ತೇವೆ.

► ಪ್ರಶ್ನೆ: 2028ರವರೆಗೆ ಯಾರು ಸಿಎಂ ಆಗಿರುತ್ತಾರೆ?

ಉತ್ತರ: ಈಗಿದರಲ್ಲಾ? ಸಿಎಂ ಕುರ್ಚಿ ಖಾಲಿ ಇಲ್ಲ. ನಾವಂತೂ ಅವರೇ ಮುಖ್ಯಮಂತ್ರಿ ಎಂದು ಹೇಳುವವರು.

► ಪ್ರಶ್ನೆ: ನೀವು ಸಿದ್ದರಾಮಯ್ಯ ರೀತಿ ಅಗ್ರೆಸಿವ್ ಆಗಿ ಇಲ್ಲ. ಸಿಎಂ ಕುರ್ಚಿಯನ್ನು ಹೇಗೆ ದಕ್ಕಿಸಿಕೊಳ್ಳುತ್ತೀರಿ?

ಉತ್ತರ: ನಾನೇ ಬೇರೆ, ಸಿದ್ದರಾಮಯ್ಯ ಅವರೇ ಬೇರೆ. ಅವರ ರೀತಿನೇ ಬೇರೆ, ನನ್ನ ರೀತಿನೇ ಬೇರೆ. ಬೇರೆಯವರು ಸಿದ್ದರಾಮಯ್ಯ ರೀತಿ ಮಾತನಾಡಿದ್ರೆ, ನಡೆದುಕೊಂಡರೆ ಜನ ಒಪ್ಪದೆಯೂ ಇರಬಹುದು.

► ಪ್ರಶ್ನೆ: ನೀವು ಮತ್ತು ಸಿದ್ದರಾಮಯ್ಯ ಹೊಂದಿಕೊಳ್ಳುತ್ತೀರಿ. ಆದರೆ ತಳಮಟ್ಟದಲ್ಲಿ ಕುರುಬರು ಮತ್ತು ವಾಲ್ಮೀಕಿಗಳು ಒಂದಾಗುತ್ತಾರಾ?

ಉತ್ತರ: ತಳಮಟ್ಟದಲ್ಲಿ ಎರಡು ಸಮುದಾಯದ ಜನ ಪರಸ್ಪರ ಹೋರಾಟ ಮಾಡಿರುತ್ತಾರೆ. ಹಾಗಾಗಿ ನೀವು ಕೇಳುತ್ತಿರುವ ಪ್ರಶ್ನೆ ಸರಿ ಇದೆ. ಆದರೆ ಸಮಸ್ಯೆ ಆಗುವುದಿಲ್ಲ.

► ಪ್ರಶ್ನೆ: ಕೆಲವು ಕಡೆ ಕುರುಬ ಸಮುದಾಯದವರು ಗೊಂಡ ಮತ್ತು ರಾಜಗೊಂಡ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಹೇಗೆ ಹೊಂದಿಕೊಳ್ಳುತ್ತಾರೆ?

ಉತ್ತರ: ನಿಜ. ಅದು ಕಾನೂನು ಹೋರಾಟ. ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ.

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X