ಐಪಿಎಲ್ ನಲ್ಲಿ ಇತಿಹಾಸ ನಿರ್ಮಿಸಿದ 13 ವರ್ಷದ ಬಾಲಕ

ಐಪಿಎಲ್ ಹರಾಜಿನಲ್ಲಿ 1.1 ಕೋಟಿ ರೂ.ಗೆ ರಾಜಸ್ಥಾನ ಪಾಲಾದ ವೈಭವ್ ಸೂರ್ಯವಂಶಿ
ರಾತ್ರೋರಾತ್ರಿ ಕೋಟ್ಯಧಿಪತಿಯಾಗಿ ಇತಿಹಾಸ ನಿರ್ಮಿಸಿದ ಬಿಹಾರದ ಬಾಲಕ
ವೈಭವ್ ಸೂರ್ಯವಂಶಿಗಾಗಿ ರಾಜಸ್ಥಾನ್ ರಾಯಲ್ಸ್ ಹಾಗೂ ದಿಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿಯೇ ಏರ್ಪಟ್ಟಿತು.
ಆದರೆ ರಾಜಸ್ಥಾನ್ ತಂಡವು ರೂ. 1.10 ಕೋಟಿ ನೀಡಿ ವೈಭವ್ ಸೂರ್ಯವಂಶಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.
2011ರಲ್ಲಿ ಜನಿಸಿದ ವೈಭವ್ ಸೂರ್ಯವಂಶಿ ನಾಲ್ಕು ವರ್ಷದ ಬಾಲಕರಾಗಿರುವಾಗಲೇ ತಮ್ಮ ಕ್ರಿಕೆಟ್ ಪ್ರತಿಭೆಯನ್ನು ಪ್ರದರ್ಶಿಸಿದ್ದರು.
ವೈಭವ್ ಗಾಗಿ ಮನೆಯ ಹಿಂಬದಿಯಲ್ಲಿ ಸಣ್ಣ ಆಟದ ಮೈದಾನವನ್ನು ನಿರ್ಮಿಸಿದ್ದ ತಂದೆ
ಕೇವಲ 12 ವರ್ಷ ವಯಸ್ಸಿನವರಾಗಿದ್ದಾಗ ವಿನೂ ಮಂಕಡ್ ಟ್ರೋಫಿಯಲ್ಲಿ ಬಿಹಾರ ಪರವಾಗಿ ಆಡಿದ್ದ ವೈಭವ್ ಸೂರ್ಯವಂಶಿ
ಐದು ಪಂದ್ಯಗಳಿಂದ ಸುಮಾರು 400 ರನ್ ಕಲೆ ಹಾಕಿ ಮಿಂಚಿದ್ದ ವೈಭವ್
ಆಸ್ಟ್ರೇಲಿಯ ಅಂಡರ್ 19 ತಂಡದ ವಿರುದ್ಧ ನಡೆದಿದ್ದ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಕೇವಲ 58 ಬಾಲ್ ಗಳಲ್ಲಿ ಶತಕ
ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ತಂಡಗಳ ವಿರುದ್ಧ ನಡೆದಿದ್ದ ಅಂಡರ್ 19 ಕ್ರೀಡಾಕೂಟದಲ್ಲಿ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದ ವೈಭವ್