ಆರ್ಥಿಕ ದಿಗ್ಗಜರಿಂದ ಮಕ್ಕಳಿಗೆ ಗ್ಯಾಜೆಟ್ ಗೀಳಿನ ಪಾಠ!

ಜಗತ್ತಿನ ಪ್ರಸಿದ್ಧ ಕೋಟ್ಯಾಧಿಪತಿಗಳು ಮಕ್ಕಳಿಗೆ ಮೊಬೈಲ್ ಫೋನ್ ನೀಡಲು ನಿರಾಕರಿಸಿದ್ದಾರೆ.
ಶ್ರೀಮಂತರು ಮಕ್ಕಳನ್ನು ಬೆಳೆಸುವಾಗ ಅವರನ್ನು ಸ್ಮಾರ್ಟ್ ಫೋನ್, ಐಪ್ಯಾಡ್ ಗಳಿಂದ ದೂರವಿಡುತ್ತಿದ್ದಾರೆ.
Business Insider ವರದಿಯ ಪ್ರಕಾರ ಬಿಲ್ ಗೇಟ್ಸ್ ಅವರು ತಮ್ಮ ಮಕ್ಕಳಿಗೆ 14 ವರ್ಷದವರೆಗೆ ಮೊಬೈಲ್ ಫೋನಿನಿಂದ ದೂರವಿಟ್ಟಿದ್ದರು.
ಮೊಬೈಲ್ ನೀಡಿದ ಬಳಿಕವೂ ಮಕ್ಕಳ ಮೇಲೆ ನಿಗಾ ಇಟ್ಟರು.
ಸ್ಟೀವ್ ಜಾಬ್ಸ್ ಅವರೂ ತಮ್ಮ ಮಕ್ಕಳನ್ನು ಬಾಲ್ಯದಿಂದಲೇ ಮೊಬೈಲ್ ಫೋನ್ ನಿಂದ ದೂರವಿಟ್ಟಿದ್ದರು.
ಮಾರ್ಕ್ ಝುಕರ್ಬರ್ಗ್ ಅವರೂ ತಮ್ಮ ಎರಡೂ ಮಕ್ಕಳ ಲಾಲನೆ-ಪಾಲನೆ ಮೊಬೈಲ್ ಇಲ್ಲದೆ ನಡೆಸುತ್ತಿದ್ದಾರೆ.
ಹಾಲಿವುಡ್ ನ ನಟಿ ಜೆನ್ನಿಫರ್ ಲೋಪೆಝ್ ಅವರು ತಮ್ಮ ಮಕ್ಕಳಿಗೆ ವಾರಕ್ಕೊಮ್ಮೆ ಆಡಲು ಮೊಬೈಲ್ ಫೋನ್ ನೀಡುತ್ತಾರೆ.
ಮಕ್ಕಳು ಫೊನಿನ ಗೀಳಿಗೆ ಒಳಗಾಗುತ್ತಿರುವುದೇ ಕಾರಣ.
ಫೋನುಗಳಲ್ಲಿ ಅಶ್ಲೀಲತೆ pop-up ಆಗುತ್ತಿರುತ್ತವೆ; ಇದು ಅಪ್ರಾಪ್ತ ಮಕ್ಕಳಿಗೆ ಬಹಳ ಅಪಾಯಕಾರಿ.
ಒಂದು ವೇಳೆ, ಅನಿವಾರ್ಯವಿದ್ದು ಮಕ್ಕಳಿಗೆ ಮೊಬೈಲನ್ನು ನೀಡಿದ್ದರೂ, ಅವರ ಮೇಲೆ ನಿಗಾ ಇಡುವುದು ಬಹಳ ಅಗತ್ಯವಾಗಿದೆ.