ಎಲಾನ್ ಮಸ್ಕ್ ರ X ಸೆಡ್ಡು ಹೊಡೆಯಲು ಬಂದಿದೆ BlueSky

ʼಎಕ್ಸ್ʼ ನಿಂದ ʼಬ್ಲೂಸ್ಕೈʼ ಗೆ ಲಕ್ಷಾಂತರ ಮಂದಿ ವಲಸೆ
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಬಳಿಕ BlueSky ಬಳಕೆದಾರರ ಸಂಖ್ಯೆ ಹೆಚ್ಚಳ
10 ಲಕ್ಷಕ್ಕಿಂತಲೂ ಹೆಚ್ಚು ಹೊಸ ಬಳಕೆದಾರರು X ತೊರೆದು Bluesky ಸೇರಿದ್ದಾರೆ.
ಮಸ್ಕ್ ನೇತೃತ್ವದಲ್ಲಿ ಎಕ್ಸ್ ಬಲಪಂಥೀಯ ಅಭಿಪ್ರಾಯಗಳ ವೇದಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ
ಎಕ್ಸ್ ನಲ್ಲಿಯ ಹಾಗೆಯೇ Bluesky ನಲ್ಲೂ ಸಂವಹನ ನಡೆಸಬಹುದು, ಪೋಸ್ಟ್ ಮಾಡುವುದು, ಉತ್ತರಿಸುವುದು ಮತ್ತು ಸಂದೇಶ ಕಳುಹಿಸುವುದು ಸಾಧ್ಯವಿದೆ.
ಸೆಪ್ಟೆಂಬರ್‌ನಲ್ಲಿ 9​0 ಲಕ್ಷ ಇದ್ದ Bluesky ಬಳಕೆದಾರರ ಸಂಖ್ಯೆ ಈಗ ವಿಶ್ವದಾದ್ಯಂತ 1​ ಕೋಟಿ 5​0 ಲಕ್ಷ ಆಗಿದೆ.
ಟ್ವಿಟರ್‌ನಲ್ಲಿ ಒಂದು ಪ್ರಾಜೆಕ್ಟ್ ಆಗಿ ಪ್ರಾರಂಭಗೊಂಡ ಬ್ಲೂಸ್ಕೈ 2021 ರಲ್ಲಿ ಸ್ವತಂತ್ರ ಕಂಪನಿಯಾಯಿತು.
ಈಗ ಪ್ರಾಥಮಿಕವಾಗಿ ಮುಖ್ಯ ಕಾರ್ಯನಿರ್ವಾಹಕ ಜೇ ಗ್ರಾಬರ್ ಒಡೆತನದಲ್ಲಿದೆ.
Bluesky ಕಸ್ಟಮ್ ಫೀಡ್‌ಗಳನ್ನು ರಚಿಸಲು ನೆರವಾಗುತ್ತದೆ
ಬ್ಲೂಸ್ಕೈ ಬಳಕೆದಾರರಿಗೆ ವೆಬ್‌ಸೈಟ್ ವಿಳಾಸಗಳನ್ನು ತಮ್ಮ ಹ್ಯಾಂಡಲ್‌ಗಳಾಗಿ ಹೊಂದಲು ಅನುಮತಿಸುತ್ತದೆ.
ಬ್ಲೂಸ್ಕೈ ನಲ್ಲಿ 14.5 ಮಿಲಿಯನ್ ಬಳಕೆದಾರರು ಇದ್ದರೂ ಅದು X ಗಿಂತ ಬಹಳ ಹಿಂದೆ ಉಳಿದಿದೆ
ಪ್ರತಿದಿನ X ಅನ್ನು 250 ಮಿಲಿಯನ್ ಬಳಕೆದಾರರು ಬಳಸುತ್ತಾರೆ.